ಬೆಂಗಳೂರು: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಗೃಹಿಣಿಯೊಬ್ಬಳು ಮದುವೆಯಾದ ಹನ್ನೊಂದು ತಿಂಗಳಿಗೆ ನೇಣಿಗೆ ಶರಣಾಗಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ವೇತಾ(27) ಮೃತ ದುರ್ದೈವಿ. ಸದ್ಯ ಶ್ವೇತಾ ಕುಟುಂಬಸ್ಥರು ನೀಡಿದ ದೂರಿನ ಮೇಲೆ ಶ್ವೇತಾ ಪತಿ ಅಭಿಷೇಕನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ!
ಘಟನೆಯ ಹಿನ್ನಲೆ:
ಮೂಲತಃ ಸೋಮವಾರಪೇಟೆ ಮೂಲದವರಾದ ಅಭೀಷೇಕ್ ಹಾಗೂ ಶ್ವೇತಾ ಸಂಬಂಧಿಗಳಾಗಿದ್ದರು. ಕೆಲಸಕ್ಕೆ ಅಂತಾ ಬೆಂಗಳೂರಿಗೆ ಬಂದಿದ್ದ ಅಭೀಷೇಕ್ ಹಾಗೂ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಆಕಾಂಕ್ಷ ಭಟ್ ಎಂಬುವಳ ನಡುವೆ ಲವ್ವಿ-ಡವ್ವಿ ಶುರುವಾಗಿತ್ತು. ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಿದಾಗ ನಾನು ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೇನೆ ಎಂದು ಅಭೀಷೇಕ್ ಹೇಳಿಕೊಂಡಿದ್ದ.
ಆದರೆ ಅಭೀಷೇಕ್ ತಾಯಿ ಆಕೆ ಉತ್ತರ ಭಾರತದವಳು, ನಮ್ಮ ಕುಟುಂಬಕ್ಕೆ ಸೆಟ್ ಆಗಲ್ಲ. ನೀನು ಶ್ವೇತಾಳನ್ನ ಮದುವೆಯಾಗದಿದ್ದರೆ ನಾನು ಸಾಯುತ್ತೇನೆ ಎಂದು ಬೆದರಿಸಿದ್ದಾರೆ. ಹೀಗಾಗಿ ಆಕಾಂಕ್ಷಳನ್ನು ಮರೆತು ಶ್ವೇತಾಳನ್ನು ಮದುವೆಯಾಗಲು ಒಪ್ಪಿದ್ದ. ಕುಟುಂಬದವರು ಸೇರಿ ಜೋರಾಗಿ ಮದುವೆ ಮಾಡಿದ್ದರು. ಆದರೆ ಆರತಕ್ಷತೆ ಆದ ಮೇಲೆಯೂ ಸಹ ಅಭೀಷೇಕ್ ಆಕಾಂಕ್ಷ ಜೊತೆ ಸಂಬಂಧ ಮುಂದುವರೆಸಿದ್ದ.
ಮದುವೆಯಾದ ನಂತರವೂ ಅನೇಕ ಬಾರಿ ಶ್ವೇತಾಗೆ ಸುಳ್ಳು ಹೇಳಿ ಅಕಾಂಕ್ಷ ಜೊತೆ ಟ್ರಿಪ್ ಸಹ ಹೋಗಿದ್ದಾನೆ. ಈ ವಿಷಯ ಪತ್ನಿ ಶ್ವೇತಾಗೆ ಗೊತ್ತಾಗಿ ಗಲಾಟೆ ಸಹ ಆಗಿತ್ತು. ಇಬ್ಬರ ಕುಟುಂಬಸ್ಥರು ರಾಜಿ ಸಂಧಾನ ಮಾಡಿದಾಗ ಅಕ್ರಮ ಸಂಬಂಧ ಬಿಡುವುದಾಗಿ ಅಭಿಷೇಕ್ ಹೇಳಿದ್ದ. ಆದರೆ ಕೆಲ ದಿನದ ನಂತರ ಮತ್ತೆ ಅಕಾಂಕ್ಷ ಜೊತೆ ಟ್ರಿಪ್ ಹೋದಾಗ ಅಭಿಷೇಕ್ ಮತ್ತು ಆಕಾಂಕ್ಷ ಇರುವ ಫೋಟೋಗಳು ಶ್ವೇತಾಗೆ ಸಿಕ್ಕಿವೆ. ಇದರಿಂದ ಬೇಸತ್ತ ಶ್ವೇತಾ ಮೆಸೇಜ್ ಮಾಡಿ ಅಭಿಷೇಕ್ ಜೊತೆ ಜಗಳವಾಡಿದ್ದಾಳೆ.
ನಂತರ ಟ್ರಿಪ್ ಮುಗಿಸಿ ಅಭೀಷೇಕ್ ಇದೇ 10ನೇ ತಾರೀಖು ಮನೆಗೆ ಬಂದಿದ್ದ. ಇಬ್ಬರ ನಡುವೆ ಮತ್ತೆ ಮಾತಿಗೆ ಮಾತು ಬೆಳೆದು ಶ್ವೇತಾ ಬೆಡ್ ರೂಮಲ್ಲಿ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಭಿಷೇಕ್ ಇದನ್ನು ತಪ್ಪಿಸಿ ನಂತರ ನಿದ್ದೆಗೆ ಜಾರಿದ್ದ. ಇದೇ ಸಮಯಕ್ಕೆ ಕಾದಿದ್ದ ಶ್ವೇತಾ ಹಾಲ್ ನಲ್ಲಿ ಇದ್ದ ನೇಣಿಗೆ ಶರಣಾಗಿದ್ದಾಳೆ. ವಿಷಯ ತಿಳಿದಾಗ ಕುಟುಂಬಸ್ಥರು ಅಭಿಷೇಕ್ ನನ್ನು ಪ್ರಶ್ನೆ ಮಾಡಿದಾಗ ಆತನಿಂದ ಉತ್ತರ ಬಂದಿರಲಿಲ್ಲ. ಸದ್ಯ ಶ್ವೇತಾ ಕಾರ್ಯವನ್ನು ಮುಗಿಸಿ ಅಭಿಷೇಕ್ ಆಕೆಯ ಸಾವಿಗೆ ಕಾರಣ ಅಂತಾ ಶ್ವೇತಾ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: Basavaraj Bommai Clarification: “ಬಿಜೆಪಿಯಲ್ಲಿ ಭಿನ್ನಮತವಿಲ್ಲ”.. ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ
ದೂರಿನ ಆಧಾರದ ಮೇಲೆ ಅಭಿಷೇಕನನ್ನು ಬಂಧಿಸಿದ್ದಾರೆ. ಬಾಳಿ ಬದುಕಬೇಕಾಗಿದ್ದ ಶ್ವೇತಾ ದುಡುಕಿನ ನಿರ್ಧಾರದಿಂದ ಪ್ರಾಣ ಕಳೆದುಕೊಂಡಿದ್ದಾಳೆ. ಇತ್ತ ಮದುವೆಯಾದರು ಅಕ್ರಮ ಸಂಬಂಧ ಇಟ್ಟುಕೊಂಡು ಹೆಂಡತಿಯ ಸಾವಿಗೆ ಕಾರಣನಾಗಿ ಅಭಿಷೇಕ್ ಜೈಲು ಸೇರುವಂತಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.