ಬೆಂಗಳೂರು : ರಾಜ್ಯದಲ್ಲಿ ಮಾದಕವಸ್ತು ನಿಯಂತ್ರಣಕ್ಕೆ ಗಂಭೀರ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 


COMMERCIAL BREAK
SCROLL TO CONTINUE READING

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಇಂದು  ನಡೆದ  ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಹಾಗೂ ರಾಷ್ಟ್ರೀಯ ಭದ್ರತೆ ಕುರಿತ ದಕ್ಷಿಣ ರಾಜ್ಯಗಳ  ಪ್ರಾದೇಶಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಇದನ್ನೂ ಓದಿ: Kangana Ranaut : ಬರ್ತ್‌ಡೇ ದಿನ ʼಶತ್ರುಗಳಿಗೆ ಥ್ಯಾಂಕ್ಸ್‌ʼ ಹೇಳಿದ ಬಿಟೌನ್‌ ಕ್ವೀನ್‌ ಕಂಗನಾ..! 


ಕರ್ನಾಟಕದಲ್ಲಿ ಮಾದಕವಸ್ತು ನಿಯಂತ್ರಣದಲ್ಲಿ ಜೀರೊ ಟಾಲೆರನ್ಸ್ ಜಾರಿಗೊಳಿಸಲಾಗಿದ್ದು, ಮಾದಕವಸ್ತುಗಳ ನಿಯಂತ್ರಣಕ್ಕೆ ಸಮಾಜದ ಸಹಕಾರ ಮುಖ್ಯ.ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕಾನೂನು ಅಪರಾಧವನ್ನು ನಿಯಂತ್ರಿಸುವ ಕೆಲ್ಸವಾಗುತ್ತಿದೆ ಎಂದರು.ಮೊದಲು ಪ್ರತಿ ವರ್ಷ ವಾರ್ಷಿಕ ಸಾವಿರ  ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಈಗ ಪ್ರತಿ ವರ್ಷ ಐದು ಸಾವಿರ ಪ್ರಕರಣಗಳು ದಾಖಲಾಗುತ್ತಿವೆ.  ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿನ ಜನರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿರುವುದಲ್ಲದೆ ಬಹಳ ಪ್ರಕರಣಗಳಲ್ಲಿ ಶಿಕ್ಷೆಗೂ  ಒಳಪಡಿಸಿದ್ದೇವೆ ಎಂದರು.


ಸಹಕಾರ:
ಬೆಂಗಳೂರು ಅಂತಾರಾಷ್ಟ್ರೀಯ ನಗರ ಕೇವಲ 60 ಕಿಮಿ ಅಂತರದಲ್ಲಿ ತಮಿಳುನಾಡು ಗಡಿ ಇದೆ.‌ ಹಾಗಾಗಿ ಮಾದಕ ವಸ್ತು  ವಿಚಾರದಲ್ಲಿ ಎರಡೂ ರಾಜ್ಯಗಳ  ನಡುವೆ ಸಹಕಾರ ಅತ್ಯಂತ ಮುಖ್ಯ ಎಂದರು. Slowest Train in India: ಭಾರತದ ಅತ್ಯಂತ ನಿಧಾನವಾದ 'ಎಕ್ಸ್‌ಪ್ರೆಸ್' ರೈಲು, ಸೈಕಲ್ ಕೂಡ ಇದಕ್ಕಿಂತ ಜೋರಾಗಿ ಓಡುತ್ತೆ


ಮಾದಕವಸ್ತು ನಿಯಂತ್ರಣ ಸಾಧ್ಯ:
ಎನ್‌ಡಿಪಿಎಸ್ ಕಾಯ್ದೆಯನ್ನು ಸರಳೀಕರಣಗೊಳಿಸಿ ಹೆಚ್ಚಿನ ಪ್ರಕರಣ‌ ದಾಖಲಿಸಲು ಕ್ರಮ ಕೈಗೊಳ್ಳುತ್ತಿದೆ.  ಇದರಿಂದ ಮಾದಕವಸ್ತು ನಿಯಂತ್ರಣ ಮಾಡಲು ಸಾಧ್ಯವಿದೆ.  ಹೊರ ದೇಶಗಳ ಪ್ರಜೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಹಕಾರ ಅಗತ್ಯವಿದ್ದು, ಕೇಂದ್ರ ಸರ್ಕಾರದ ಅಮಿತ್ ಶಾ ಅವರ ನೇತೃತ್ವದಲ್ಲಿ ಸಾಕಷ್ಟು ಸಹಕಾರ ಸಿಗುತ್ತಿದೆ. ಅವರ  ಮಾರ್ಗದರ್ಶನ ನಮಗೆ ಅಗತ್ಯ. ದಕ್ಷಿಣ ಭಾರತ ಮಾದಕವಸ್ತು ಸಮ್ಮೇಳನ ಆಯೋಜಿಸಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿಗಳು ತಿಳಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.