ಧಾರವಾಡ: ಪೊಲೀಸ್ ಅಧೀಕ್ಷಕರು ಹಾಗೂ ಅಧ್ಯಕ್ಷರು, ಗೃಹರಕ್ಷಕ ಆಯ್ಕೆ ಸಮಿತಿ, ನಿರ್ದೇಶನದ ಮೇರೆಗೆ ಧಾರವಾಡ ಜಿಲ್ಲೆಯ ಧಾರವಾಡ,ಹುಬ್ಬಳ್ಳಿ, ಮತ್ತು ನವಲಗುಂದ ಘಟಕಗಳಲ್ಲಿ ಖಾಲಿ ಇರುವ ಗೃಹರಕ್ಷಕರ ಸ್ವಯಂ ಸೇವಕ ಸದಸ್ಯರ ಹುದ್ದೆಗಳ ನೊಂದಣಿಗಾಗಿ ಅರ್ಹ ಸ್ಥಳೀಯ ಪುರುಷ, ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಖುದ್ದಾಗಿ ಅರ್ಜಿಗಳನ್ನು ಜಿಲ್ಲಾ ಸಮಾದೇಷ್ಟರು, ಗೃಹರಕ್ಷಕದಳ ಕಛೇರಿ, ಡಿ.ಎ.ಆರ್., ಪೊಲೀಸ್ ಹೆಡ್ ಕ್ವಾರ್ಟಸ್ಸ್ ಆವರಣ ಧಾರವಾಡ ಇಲ್ಲಿಂದ ಏ.1 ರಿಂದ 15 ರ ವರೆಗೆ ಉಚಿತವಾಗಿ ಪಡೆದು, ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಏಪ್ರೀಲ್ 29 ರೋಳಗಾಗಿ ಸಲ್ಲಿಸಿ ಸ್ವೀಕೃತಿಯನ್ನು ಪಡೆಯಬೇಕು.
ಇದನ್ನೂ ಓದಿ: Slowest Train in India: ಭಾರತದ ಅತ್ಯಂತ ನಿಧಾನವಾದ 'ಎಕ್ಸ್‌ಪ್ರೆಸ್' ರೈಲು, ಸೈಕಲ್ ಕೂಡ ಇದಕ್ಕಿಂತ ಜೋರಾಗಿ ಓಡುತ್ತೆ
ಖಾಲಿ ಇರುವ ಗೃಹರಕ್ಷಕ ಸ್ವಯಂ ಸೇವಕ ಸ್ಥಾನಗಳ ವಿವರ: ಧಾರವಾಡ-26 ಪುರುಷ, 08 ಮಹಿಳಾ, ಹುಬ್ಬಳ್ಳಿ-10 ಪುರುಷ, 05 ಮಹಿಳಾ, ನವಲಗುಂದ-1 ಮಹಿಳಾ ಒಟ್ಟು 50 ಗೃಹರಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ಸಂದರ್ಶನ ಮತ್ತು ದೈಹಿಕ ಸಾಮಥ್ರ್ಯದ ಪರೀಕ್ಷೆಗಳ ದಿನಾಂಕಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು. ವೈಯಕ್ತಿಕವಾಗಿ ಯಾರಿಗೂ ತಿಳಿಸಲಾಗುವುದಿಲ್ಲ.
ಇದನ್ನೂ ಓದಿ: Kangana Ranaut : ಬರ್ತ್‌ಡೇ ದಿನ ʼಶತ್ರುಗಳಿಗೆ ಥ್ಯಾಂಕ್ಸ್ʼ ಹೇಳಿದ ಬಿಟೌನ್ ಕ್ವೀನ್ ಕಂಗನಾ..!
ಹೆಚ್ಚಿನ ಮಾಹಿತಿಗಾಗಿ ಸಮಾದೇಷ್ಟರು (ಕಮಾಂಡೆಂಟ್), ಹೋಂಗಾಡ್ರ್ಸ್ ಕಛೇರಿ, ಪೊಲೀಸ್ ಹೆಡ್ ಕ್ವಾರ್ಟ್‍ಸ್ ಆವರಣ,ಧಾರವಾಡ-580008, ಕಚೇರಿ ದೂರವಾಣಿ ಸಂಖ್ಯೆ: 0836-2442496, ಸಹಾಯಕ ಆಡಳಿತಾಧಿಕಾರಿಗಳು, ಪೊಲೀಸ್ ಅಧೀಕ್ಷಕರ ಕಛೇರಿ ಧಾರವಾಡ-0836-2233205 ಸಂಪರ್ಕಿಸಬಹುದೆಂದು ಗೃಹರಕ್ಷಕರ ನೋಂದಣಿ ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿರುವ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.