ವೈರಲ್ ವೀಡಿಯೋಗೆ ಬೇರೆ ಯಾರನ್ನೂ ದೂಷಿಸುವುದಿಲ್ಲ : ಡಿ. ಕೆ ಶಿವಕುಮಾರ್
ಜನರು ಈಗಾಗಲೇ ತಮಗೆ ಹೇಗೆ ಬೇಕೋ ಹಾಗೆ ಮಾತನಾಡಿಕೊಂಡಿದ್ದಾರೆ. ಈ ಬಗ್ಗೆ ನಾನು ಬಿಜೆಪಿ ಅಥವಾ ಮಾಧ್ಯಮವನ್ನು ದೂಷಿಸುವುದಿಲ್ಲ. ಇತರರಿಗೆ ನಮ್ಮನ್ನು ಬಳಸಿಕೊಳ್ಳುವ ಅವಕಾಶವನ್ನು ನಾವೇ ನೀಡಿದ್ದೇವೆ` ಎಂದು ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು : ವೈರಲ್ ಆಗಿರುವ ವಿಡಿಯೋ ಬಗ್ಗೆ ತಾನು ಯಾರನ್ನೂ ದೂಷಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ವೀಡಿಯೋದಲ್ಲಿ ಮಾಜಿ ಲೋಕಸಭಾ ಸದಸ್ಯ ವಿಎಸ್ ಉಗ್ರಪ್ಪ (VS Ugrappa) ಮತ್ತು ಮಾಧ್ಯಮ ಸಂಯೋಜಕ ಎಂ ಎ ಸಲೀಂ (MA Saleem) , ಶಿವಕುಮಾರ್ ಅವರು ಸಚಿವರಾಗಿದ್ದಾಗ ಹಗರಣ ನಡೆಸಿರುವುದಾಗಿ ಆರೋಪಿಸಿದ್ದಾರೆ.
"ಜನರು ಈಗಾಗಲೇ ತಮಗೆ ಹೇಗೆ ಬೇಕೋ ಹಾಗೆ ಮಾತನಾಡಿಕೊಂಡಿದ್ದಾರೆ. ಈ ಬಗ್ಗೆ ನಾನು ಬಿಜೆಪಿ (BJP) ಅಥವಾ ಮಾಧ್ಯಮವನ್ನು ದೂಷಿಸುವುದಿಲ್ಲ. ಇತರರಿಗೆ ನಮ್ಮನ್ನು ಬಳಸಿಕೊಳ್ಳುವ ಅವಕಾಶವನ್ನು ನಾವೇ ನೀಡಿದ್ದೇವೆ" ಎಂದು ಶಿವಕುಮಾರ್ (DKS) ಹೇಳಿದ್ದಾರೆ. ಪತ್ರಿಕಾಗೋಷ್ಠಿಗೆ ಮುಂಚಿತವಾಗಿ ಮಂಗಳವಾರ ಸಲೀಂ ಮತ್ತು ಉಗ್ರಪ್ಪ (VS Ugrappa) ನಡುವಿನ ಸಂಭಾಷಣೆಗೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ ಶಿವಕುಮಾರ್ ಉತ್ತರಿಸಿದ್ದಾರೆ. ಆ ವೀಡಿಯೊದಲ್ಲಿ, ಸಲೀಂ, ಶಿವಕುಮಾರ್ ಅವರನ್ನು 'ಕಲೆಕ್ಷನ್ ಗಿರಾಕಿ' ಎಂದು ಕರೆದಿದ್ದಾರೆ. ನೀರಾವರಿ ಒಪ್ಪಂದಗಳಲ್ಲಿ 'ಕಮಿಷನ್' ಅನ್ನು ಎಂಟರಿಂದ 12 ಪ್ರತಿಶತಕ್ಕೆ ಹೆಚ್ಚಿಸಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ : Karnataka Politics: ವಿಡಿಯೋವೊಂದರಿಂದ ಕರ್ನಾಟಕದ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದ ಕೋಲಾಹಲ, ನಡೆದಿದ್ದೇನು?
ವೈರಲ್ ವೀಡಿಯೊಗೆ (Viral Video) ಸಂಬಂಧಿಸಿದ ವಿಷಯವು ವೈಯಕ್ತಿಕವಲ್ಲ. ಲಕ್ಷಾಂತರ ಪಕ್ಷದ ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಕ್ಷಕ್ಕೆ ಸಂಬಂಧಿಸಿದ್ದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ. ವೈರಲ್ ವೀಡಿಯೋ ಹಿನ್ನೆಲೆಯಲ್ಲಿ ಟಾರ್ಗೆಟ್ ಮಾಡುತ್ತಿರುವ ಬಿಜೆಪಿ ಬಗ್ಗೆಯೂ ಶಿವ ಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರಾದ ಎಂಎಲ್‌ಸಿ ಎಎಚ್ ವಿಶ್ವನಾಥ್, ಸಿಪಿ ಯೋಗೀಶ್ವರ್, ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಬಜೆಪಿ ನಾಯಕರ ವಿರುದ್ದ ಏನೆಲ್ಲಾ ಮಾತನಾಡಿದ್ದಾರೆ. ಬಿಜೆಪಿ ಆ ಹೇಳಿಕೆಗಳನ್ನು ಗಮನಿಸಲಿ ಎಂದು ಹೇಳಿದ್ದಾರೆ. "ವಿಶ್ವನಾಥ್, ಯೋಗೀಶ್ವರ್, ರಮೇಶ್ ಜಾರಕಿಹೊಳಿ ಮತ್ತು ಯತ್ನಾಳ್ ಪಕ್ಷದ ನಾಯಕರ ವಿರುದ್ದ ಮಾಡಿರುವ ಆರೋಪಗಳಿಗೆ ಬಿಜೆಪಿ ಏಕೆ ಇನ್ನೂ ಉತ್ತರಿಸಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಘಟನೆ ನಂತರ ಪಕ್ಷವು ಸಲೀಂ (Saleem) ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತುಗೊಳಿಸಿದೆ. ಕಾಂಗ್ರೆಸ್ ವಕ್ತಾರರಾಗಿರುವ ಉಗ್ರಪ್ಪಗೆ ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ಕೋರಿ ಶೋಕಾಸ್ ನೋಟಿಸ್ ನೀಡಿದೆ.
ಇದನ್ನೂ ಓದಿ : ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿವೆ, ಬಡವರ ಮನೆ ಒಲೆಗಳು ಆರಿವೆ: ಕಾಂಗ್ರೆಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ