Karnataka Politics: ವಿಡಿಯೋವೊಂದರಿಂದ ಕರ್ನಾಟಕದ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದ ಕೋಲಾಹಲ, ನಡೆದಿದ್ದೇನು?

Karnataka Politics: ಕರ್ನಾಟಕ ಕಾಂಗ್ರೆಸ್ ಘಟಕದ (Karnataka Congress Unit) ಹಿರಿಯ ಮುಖಂಡ ವಿಎಸ್ ಉಗ್ರಪ್ಪ ಹಾಗೂ ಪಕ್ಷದ ಮಿಡಿಯಾ ಕೊಆರ್ಡಿನೇಟರ್ ಎಂ.ಎ ಸಲೀಮ್ ಅವರಿಗೆ ಸಂಬಂಧಿಸಿದೆ ಎನ್ನಲಾಗಿರುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ. ಇದರಲ್ಲಿ ಅವರು ಪಕ್ಷದ ಮತೊರ್ವ ಮುಖಂಡ DK ಶಿವಕುಮಾರ್ ಹಲವು ಆರೋಪಗಳನ್ನು ಮಾಡಿದ್ದಾರೆ ಎನ್ನಲಾಗಿದೆ.

Written by - Zee Kannada News Desk | Last Updated : Oct 13, 2021, 10:35 PM IST
  • ವಿಡಿಯೋವೊಂದರಿಂದ ಕರ್ನಾಟಕದ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದ ಕೋಲಾಹಲ
  • ವಿಡಿಯೋದಲ್ಲಿ ಕೇಳಿಬಂದ ಡಿಕೆಶಿ ವಿರುದ್ಧ ಆರೋಪಗಳು
  • ರಾಜ್ಯ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಎಮ್.ಎ 6 ವರ್ಷಗಳಿಗೆ ಸಸ್ಪೆಂಡ್
Karnataka Politics: ವಿಡಿಯೋವೊಂದರಿಂದ ಕರ್ನಾಟಕದ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದ ಕೋಲಾಹಲ, ನಡೆದಿದ್ದೇನು? title=
Karnataka Politics Viral Video (Video Grab)

Karnataka Politics: ಕಾಂಗ್ರೆಸ್ ನ ಮಾಧ್ಯಮ ಸಂಯೋಜಕ ಎಂ ಎ ಸಲೀಂ (MA Salim)  ಮತ್ತು ಹಿರಿಯ ನಾಯಕ ಹಾಗೂ ಮಾಜಿ ಸಂಸದ ವಿ ಎಸ್ ಉಗ್ರಪ್ಪ  (VS Ugrappa) ಅವರಿಗೆ ಸಂಬಂಧಿಸಿದೆ ಎನ್ನಲಾಗಿರುವ ವಿಡಿಯೋ ತುಣುಕೊಂದು ಭಾರಿ ವೈರಲ್ ಆಗುತ್ತಿದೆ.  ಇದಾದ ಬಳಿಕ ಬಿಜೆಪಿ,  ಕಾಂಗ್ರೆಸ್ ಮೇಲೆ ದಾಳಿ ನಡೆಸಿದೆ. ಈ ವಿಡಿಯೋ ವಾಸ್ತವದಲ್ಲಿ ಕರ್ನಾಟಕ ಕಾಂಗ್ರೆಸ್ (Karnataka Congress) ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivkumar) ಅವರಿಗೆ ಸಂಬಂಧಿಸಿದೆ. ಇದರಲ್ಲಿ ಕಾಂಗ್ರೆಸ್ ನಾಯಕರಾದ ಸಲೀಂ ಮತ್ತು ಉಗ್ರಪ್ಪ ಇಬ್ಬರೂ ತಮ್ಮೊಳಗೆ ಪಿಸುಗುಟ್ಟುತ್ತಿದ್ದಾರೆ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ, ವಿಡಿಯೋ ಅನ್ನು ಝೀ ಹಿಂದುಸ್ತಾನ್ ಕನ್ನಡ ದೃಢಪಡಿಸುವುದಿಲ್ಲ.

ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಮಾಧ್ಯಮ ಸಂಯೋಜಕ ಸಲೀಂ ಅವರು ಶಿವಕುಮಾರ್ ಶೇ .10 ರಷ್ಟು ಲಂಚ ಪಡೆಯುತ್ತಾರೆ ಮತ್ತು ಅವರ ಸಹಚರರು ನೂರಾರು ಕೋಟಿ ಮೌಲ್ಯದ ಸಂಪತ್ತನ್ನು ಸೃಷ್ಟಿಸಿದ್ದಾರೆ ಎಂದು ಹೇಳುತ್ತಾರೆ. ಶಿವಕುಮಾರ್ ಈ ಹಿಂದೆ ಶೇಕಡಾ 6 ರಿಂದ 8 ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದರು, ಆದರೆ ಇದೀಗ ಅದು ಶೇಕಡಾ 10 ರಿಂದ 12 ರಷ್ಟಾಗಿದೆ ಎಂದು ಸಲೀಂ ಆರೋಪಿಸಿದ್ದಾರೆ. ಇದು ದೊಡ್ಡ ಹಗರಣ ಎಂದು ಅವರು ಹೇಳಿದ್ದಾರೆ ಮತ್ತು ನೀವು ಎಷ್ಟು ಹೆಚ್ಚು ಅಗೆಯುತ್ತೀರೋ ಅಷ್ಟು ಹೊರಬರಲಿದೆ ಎಂದು ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರಾಗಿರುವ ಮುಳಗುಂದ 50 ರಿಂದ 100 ಕೋಟಿ ಗಳಿಸಿದ್ದಾರೆ ಮತ್ತು ಮುಳಗುಂದ ಅವರೇ ಇಷ್ಟು ಹಣವನ್ನು ಹೊಂದಿರಬೇಕಾದರೆ, ಶಿವಕುಮಾರ್ ಎಷ್ಟು ಹೊಂದಿರುತ್ತಾರೆ ಎಂಬುದನ್ನು ಊಹಿಸಿ ಎಂದು ಸಲೀಂ ಆರೋಪಿಸಿದ್ದಾರೆ.

ಜೊತೆಗೆ ವಿಡಿಯೋದಲ್ಲಿ "ಅವರು ಮಾತನಾಡುವಾಗ ತೊದಲುತ್ತಾರೆ. ಅದಕ್ಕೆ ಲೋ ಬಿಪಿ ಕಾರಣವೋ ಅಥವಾ ಮಧ್ಯ ಕಾರಣವೋ ನನಗೆ ಗೊತ್ತಿಲ್ಲ. ನಾವೂ ಕೂಡ ಹಲವು ಬಾರಿ ಚರ್ಚಿಸಿದ್ದೇವೆ, ಮಾಧ್ಯಮದವರೂ ಕೂಡ ಪ್ರಶ್ನಿಸಿದ್ದಾರೆ" ಎನ್ನುತ್ತಿರುವ ಮಾತುಗಳನ್ನು ನೀವು ವಿಡಿಯೋದಲ್ಲಿ ಕೆಳಬಹುದು. ಇಡೀ ವಿಡಿಯೋದಲ್ಲಿ ಸಲೀಂ ಹಾಗೂ ಉಗ್ರಪ್ಪ ಅವರು ಡಿಕೆಶಿಯವರನ್ನು ಮಧ್ಯ ಸೇವನೆ, ಕಮಿಷನ್ ಪಡೆಯುವಂತಹ ಆರೋಪಗಳನ್ನೂ ಮಾಡುತ್ತಿರುವುದು ಕೇಳಬಹುದಾಗಿದೆ ಎನ್ನಲಾಗಿದೆ.

ಇದೀಗ ಬಿಜೆಪಿ ಈ ವಿಡಿಯೋ ಅನ್ನು ಹಂಚಿಕೊಳ್ಳಲು ಆರಂಭಿಸಿದೆ ಹಾಗೂ ಡಿಕೇಶಿ ಮೇಲೆ ಲೂಟಿ ಮಾಡುವ ಆರೋಪ ಹೊರಿಸುತ್ತಿದೆ. ಈ ಕುರಿತು ಆರೋಪ ಮಾಡಿರುವ ಬಿಜೆಪಿ, ಖುದ್ದು ಅವರ (ಡಿ.ಕೆ. ಶಿವಕುಮಾರ್ ) ಪಾರ್ಟಿಯ ಜನರೇ ಅವರನ್ನು ಎಕ್ಸ್ಪೋಸ್ ಮಾಡುತ್ತಿದ್ದಾರೆ ಎಂದು ಗುರಿಯಾಗಿಸಿದೆ.

ಇದನ್ನೂ ಓದಿ-ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿವೆ, ಬಡವರ ಮನೆ ಒಲೆಗಳು ಆರಿವೆ: ಕಾಂಗ್ರೆಸ್

ಪ್ರಕರಣ ವೇಗ ಪಡೆದುಕೊಳ್ಳುತ್ತಿದ್ದಂತೆ ಮುಂದಕ್ಕೆ ಧಾವಿಸಿದ ಉಗ್ರಪ್ಪ, ತಮ್ಮ ವೈರಲ್ ವಿಡಿಯೋಗೆ ಸ್ಪಷ್ಟೀಕರಣ ನೀಡುತ್ತ, ಸಲೀಂ ಬಿಜೆಪಿಯವರ ಸುಳ್ಳು ಆರೋಪಗಳ ಕುರಿತು ಮಾತನಾಡುತ್ತಿದ್ದರು. ಡಿಕೆಶಿ ಗಳಿಸಿರುವ ಆಸ್ತಿ ಅವರ ಬಿಸ್ನೆಸ್ ಮೂಲಕ ಬಂದಿದ್ದು. ಅವರು ಪರ್ಸಂಟೇಜ್ ಪಾಲಿಟಿಶಿಯನ್ ಅಲ್ಲ ಎಂದಿದ್ದಾರೆ. ಏತನ್ಮಧ್ಯೆ ಶಿಸ್ತು ಕ್ರಮ ಕೈಗೊಂಡ ಕಾಂಗ್ರೆಸ್ ಪಕ್ಷ ಸಲೀಂ ಅವರನ್ನು 6 ವರ್ಷಗಳಿಗೆ ಪಕ್ಷದಿಂದ ಸಸ್ಪೆಂಡ್ ಮಾಡಿದೆ. ಇನ್ನೊಂದೆಡೆ ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ಕೂಡ ಜಾರಿಗೊಳಿಸಿದೆ.

ಇದನ್ನೂ ಓದಿ-ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಡಿಕೆಶಿ ಕನಸು ಭಗ್ನಗೊಂಡಿದೆ: ಬಿಜೆಪಿ

ಅತ್ತ ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್ ಕೂಡ ಪಕ್ಷದಲ್ಲಿ ಯಾವುದೇ ಆಂತರಿಕ ಗುಂಪುಗಾರಿಕೆ ಇಲ್ಲ ಹಾಗೂ ಶಿಸ್ತುಪಾಲನಾ ಸಮಿತಿ ಕ್ರಮ ಕೈಗೊಳ್ಳಲಿದೆ. ಇದರೊಂದಿಗೆ ನನ್ನದಾಗಲಿ ಅಥವಾ ನನ್ನ ಪಕ್ಷದಾಗಲಿ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ-ಅಯ್ಯೋ.. ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ: ಹಿಂದಿ ಹೇರಿಕೆ ವಿರುದ್ಧ ಎಚ್‌ಡಿಕೆ ಆಕ್ರೋಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News