ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಡಿಕೆಶಿ ಕನಸು ಭಗ್ನಗೊಂಡಿದೆ: ಬಿಜೆಪಿ

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ಒಡೆದು ನೂರು ಬಾಗಿಲಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಶೋಚನೀಯವಾಗಿದೆ, ಒಡೆದು ಮೂರು ಬಾಗಿಲಾಗಿದೆ.

Written by - Zee Kannada News Desk | Last Updated : Oct 11, 2021, 04:12 PM IST
  • ಕೆಪಿಸಿಸಿ ಆಯೋಜಿಸಿದ್ದ ಮೌನ ಪ್ರತಿಭಟನೆಯನ್ನುಸಿದ್ದರಾಮಯ್ಯ ಖುದ್ದು ಧಿಕ್ಕರಿಸಿದ್ದಾರೆ
  • ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಡಿಕೆ ಶಿವಕುಮಾರ್ ಕನಸು ಭಗ್ನಗೊಂಡಿದೆ
  • ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಈಗಾಗಲೇ ಒಡೆದು ನೂರು ಬಾಗಿಲಾಗಿದೆ. ರಾಜ್ಯದಲ್ಲಿಯೂ ಪಕ್ಷದ ಪರಿಸ್ಥಿತಿ ಶೋಚನೀಯವಾಗಿದೆ
ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಡಿಕೆಶಿ ಕನಸು ಭಗ್ನಗೊಂಡಿದೆ: ಬಿಜೆಪಿ title=
ಸಿದ್ದರಾಮ್ಯ ಸುತ್ತ ಪರಮ ಭ್ರಷ್ಟರೇ ತುಂಬಿದ್ದಾರೆ ಎಂದು ಬಿಜೆಪಿ ಟೀಕಿಸಿದೆ

ಬೆಂಗಳೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕನಸು ಭಗ್ನಗೊಂಡಿದೆ ಎಂದು ಕರ್ನಾಟಕ ಬಿಜೆಪಿ ವ್ಯಂಗ್ಯವಾಡಿದೆ. #SidduVsDKS ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಡಿಕೆಶಿ ಹಾಗೂ ಸಿದ್ದರಾಮಯ್ಯ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಮೌನ ಪ್ರತಿಭಟನೆ ಸಾಕ್ಷಿಯಾಗಿದೆ’ ಎಂದು ಕುಟುಕಿದೆ.  

‘ಕೆಪಿಸಿಸಿ ಆಯೋಜಿಸಿದ್ದ ಮೌನ ಪ್ರತಿಭಟನೆಯನ್ನು ಸಿದ್ದರಾಮಯ್ಯ ಖುದ್ದು ಧಿಕ್ಕರಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಡಿಕೆಶಿ ಕನಸು ಕೂಡಾ ಭಗ್ನಗೊಂಡಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್(Congress) ಪಕ್ಷ ಈಗಾಗಲೇ ಒಡೆದು ನೂರು ಬಾಗಿಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಶೋಚನೀಯವಾಗಿದೆ, ಒಡೆದು ಮೂರು ಬಾಗಿಲಾಗಿದೆ. ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ಡಿಕೆಶಿ ಬಣ ಸಂಚು ನಡೆಸಿದ್ದರೆ, ಪರಮೇಶ್ವರ ವಿರುದ್ದ ಸಿದ್ದರಾಮಯ್ಯ ಕತ್ತಿ ಮಸೆಯುತ್ತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ‘ಅತಿಥಿ ಸಿಎಂ’ನಂತಾಗಿದ್ದಾರೆ: ಕಾಂಗ್ರೆಸ್ ಟೀಕೆ

‘ಮಾನ್ಯ  ಸಿದ್ದರಾಮಯ್ಯ ಅವರೇ ಅಷ್ಟಕ್ಕೂ ನಿಮ್ಮ ಪರಮಾಪ್ತ ಎಚ್.ಸಿ.ಮಹಾದೇವಪ್ಪ(HC Mahadevappa)ನಿಮ್ಮಿಂದ ದೂರವಾಗಿದ್ದೇಕೆ? ಹಣಕಾಸು ಹಂಚಿಕೆಯಲ್ಲಿ ಬಂದ ಭಿನ್ನಾಭಿಪ್ರಾಯವೇ?’ ಎಂದು ಪ್ರಶ್ನಿಸಿರುವ ಬಿಜೆಪಿ, ‘ಸದಾ ಅನ್ಯರ ತಪ್ಪು ಹುಡುಕುವ ಸಿದ್ದರಾಮ್ಯ ಸುತ್ತ ಪರಮ ಭ್ರಷ್ಟರೇ ತುಂಬಿದ್ದಾರೆ. ಗೋವಿಂದ ರಾಜ್, ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಡಾ.ಎಚ್.ಸಿ.ಮಹಾದೇವಪ್ಪ, ಕೆಂಪಯ್ಯ, ಜಮೀರ್ ಎಲ್ಲರೂ ತೆರಿಗೆ ಕಳ್ಳರು, ಪರಮ ಭ್ರಷ್ಟರು. ನಿಮ್ಮ ಸುತ್ತಲಿರುವ ಜನರಿಂದ ನೀವು ಎಂಥವರು ಎಂದು ನಿರ್ಧರಿಸಬಹುದಲ್ಲವೇ ಸಿದ್ದರಾಮಯ್ಯ?’ ಎಂದು ಕುಟುಕಿದೆ.

‘ಸಂಪತ್ತಿನ ಯಾವುದೇ ಮೂಲವಿರದಿದ್ದರೂ ಗೋವಿಂದ ರಾಜ್‌ ಅವರು ಕಾಂಗ್ರೆಸ್‌ ಹೈಕಮಾಂಡಿಗೆ(Congress HighCommand)ಕೋಟಿಗಟ್ಟಲೆ ಕಪ್ಪ ಸಲ್ಲಿಸಿದ್ದೇಗೆ? ಈ ವ್ಯಕ್ತಿಯೇ ಇಷ್ಟೊಂದು ಕಪ್ಪ ನೀಡಿರಬೇಕಾದರೆ, ಇದರ ಸೂತ್ರದಾರ, ಜಾತಿ ರಾಜಕಾರಣ ಮಾಡುತ್ತಿರುವ ವ್ಯಕ್ತಿ ಎಷ್ಟು ಕಪ್ಪು ಹಣ ಸಂಗ್ರಹಿಸಿರಬಹುದು? ಡಿಯರ್ ಕಾಂಗ್ರೆಸ್ ಗೋವಿಂದ ರಾಜ್ ಡೈರಿ ನೆನಪಿದೆಯೇ ? ನೂರಾರು ಕೋಟಿ ಕಪ್ಪವನ್ನು ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿದ್ದರಾಮಯ್ಯ ಪರವಾಗಿ ಸಲ್ಲಿಸಿದ್ದ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿದೆ. ಡೈರಿ ಗೋವಿಂದ ಅವರು ಸಿದ್ದರಾಮಯ್ಯರಿಗೆ ಆಪ್ತರು. ಮಾಡಲು ಉದ್ಯೋಗವಿಲ್ಲ, ವಾಣಿಜ್ಯ ವ್ಯವಹಾರ ಇಲ್ಲ. ಇಂಥವರು ನೂರಾರು ಕೋಟಿ ಕಪ್ಪ ಕೊಟ್ಟಿದ್ದೇಗೆ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಬಿ.ಸಿ.ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News