UP Election 2022: "ಉತ್ತರಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 400 ಸ್ಥಾನಗಲ್ಲಿ ಗೆಲ್ಲಲಿದೆ"

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಯುಪಿಯಲ್ಲಿ ವಿಜಯ ರಥ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಒಂದು ದಿನದ ಹಿಂದೆಯಷ್ಟೇ ಅಖಿಲೇಶ್,  ಕಾನ್ಪುರ ಪ್ರದೇಶದಿಂದ ರಥಯಾತ್ರೆಯನ್ನು ಆರಂಭಿಸಿದರು. 

Written by - Ranjitha R K | Last Updated : Oct 14, 2021, 02:45 PM IST
  • ಯುಪಿ ಚುನಾವಣೆ ಬಗ್ಗೆ ಅಖಿಲೇಶ್ ಯಾದವ್ ದೊಡ್ಡ ಹೇಳಿಕೆ
  • ಸಮಾಜವಾದಿ ಪಕ್ಷ 400 ಸ್ಥಾನಗಳನ್ನು ಗೆಲ್ಲಲಿದೆ - ಅಖಿಲೇಶ್ ಯಾದವ್
  • ಯುಪಿಯಲ್ಲಿ ವಿಜಯ ರಥ ಯಾತ್ರೆ ನಡೆಸುತ್ತಿರುವ ಅಖಿಲೇಶ್ ಯಾದವ್
UP Election 2022: "ಉತ್ತರಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 400 ಸ್ಥಾನಗಲ್ಲಿ ಗೆಲ್ಲಲಿದೆ"  title=
ಅಖಿಲೇಶ್ ಯಾದವ್ (photo zeenews)

UP Election 2022 :  ಉತ್ತರ ಪ್ರದೇಶದ ಮಾಜಿ ಸಿಎಂ ಮತ್ತು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ (Akhilaesh Yadav) ಅವರು ಯುಪಿ ಚುನಾವಣೆಯ ಬಗ್ಗೆ ಬಹು ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (UP Election) ಸಮಾಜವಾದಿ ಪಕ್ಷ 400 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ. ಈ ಚುನಾವಣೆಯ ನಂತರ ಬಿಜೆಪಿ (BJP) ಅಧಿಕಾರವನ್ನು ತ್ಯಜಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷಕ್ಕೆ (Samajawadi party) ಸಾರ್ವಜನಿಕರಿಂದ ಸಾಕಷ್ಟು ಬೆಂಬಲ ಸಿಗುತ್ತಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.  

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav), ಯುಪಿಯಲ್ಲಿ ವಿಜಯ ರಥ ಯಾತ್ರೆ (Vijay Rath Yatra) ಕೈಗೊಳ್ಳುತ್ತಿದ್ದಾರೆ. ಒಂದು ದಿನದ ಹಿಂದೆಯಷ್ಟೇ ಅಖಿಲೇಶ್,  ಕಾನ್ಪುರ ಪ್ರದೇಶದಿಂದ ರಥಯಾತ್ರೆಯನ್ನು ಆರಂಭಿಸಿದರು. ನೋಟು ರದ್ದತಿಯ ಸಮಯದಲ್ಲಿ ಜನಿಸಿದ ಖಜಾಂಚಿ ಈ ರಥ ಯಾತ್ರೆಗೆ ಚಾಲನೆ ನೀಡಿದರು. ನೋಟ್ ರದ್ದತಿ ಸಂದರ್ಭದಲ್ಲಿ ಗರ್ಭಿಣಿ ತಾಯಿ ಬ್ಯಾಂಕ್‌ (Bank) ಮುಂದೆ ಸಾಲು ನಿಂತಿದ್ದ ವೇಳೆಯಲ್ಲಿಯೇ ಮಗುಇಗೆ ಜನ್ಮ ನೀಡಿದ್ದರು. ಅಖಿಲೇಶ್ ಈ ಮಗುವಿಗೆ ಖಜಾಂಚಿ ಎಂದು ನಾಮಕರಣ ಮಾಡಿದ್ದರು. 

ಇದನ್ನೂ ಓದಿ : Credit Card Statement: ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಚೆಕ್ ಮಾಡುವುದು ಏಕೆ ಮುಖ್ಯ?

ಅಖಿಲೇಶ್ ಯಾದವ್ ರಥಯಾತ್ರೆಗೆ ಭಾರೀ ಬೆಂಬಲ ಸಿಗುತ್ತಿದೆ ಎಂದು ಸಮಾಜವಾದಿ ಪಕ್ಷ  ಹೇಳಿದೆ. ಇದರ ಫೋಟೋಗಳು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ (Social media) ಚರ್ಚೆಯ ವಿಷಯವಾಗಿದೆ. ರಥಯಾತ್ರೆ ಬುಂದೇಲ್‌ಖಂಡ್ ಮೂಲಕ ಹಾದು ಹೋಗುತ್ತದೆ. ಬೆಲೆ ಏರಿಕೆ ಸೇರಿದಂತೆ ಅನೇಕ ವಿಷಯಗಳಿಂದಾಗಿ, ಜನರು ಬಿಜೆಪಿಯಿಂದ (BJP) ತೀವ್ರ ಅಸಮಾಧಾನಗೊಂಡಿದ್ದಾರೆ. ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಯಾವುದೇ ನಿಯಂತ್ರಣವಿಲ್ಲ. 2022 ರಲ್ಲಿ ಉತ್ತರ ಪ್ರದೇಶದ ಅಧಿಕಾರವನ್ನು ಸಮಾಜವಾದಿ ಪಕ್ಷ ವಹಿಸಿಕೊಳ್ಳಬೇಕು ಎಂದು, ಜನರು ಬಯಸುತ್ತಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. 

ಇದನ್ನೂ ಓದಿ : Cooking Oil Price : ಸಾಮಾನ್ಯ ಜನತೆಗೆ ಸಿಹಿ ಸುದ್ದಿ : ಅಡುಗೆ ಎಣ್ಣೆ ಬೆಲೆಯಲ್ಲಿ ₹15 ಇಳಿಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News