ನವದೆಹಲಿ : ನಮ್ಮಲ್ಲಿ ಹೆಚ್ಚಿನವರು ನಮ್ಮ ಮನೆಯ ಸುತ್ತಲೂ ಹಸಿರು  ಅಂದರೆ ಸಸ್ಯ ಮರಗಳನ್ನು  ಇಷ್ಟಪಡುತ್ತಾರೆ. ಇದಕ್ಕಾಗಿ ಮನೆಯ ಸುತ್ತ ಅಥವಾ ಬಾಲ್ಕನಿಯಲ್ಲಿ ಸಾಕಷ್ಟು ಸಸಿಗಳನ್ನು ನೆಡುತ್ತಾರೆ. ಹೆಚ್ಚಿನ ಮನೆಗಳಲ್ಲಿ ಮನಿ ಪ್ಲಾಂಟ್ (Money Plant) ಇರುತ್ತದೆ. ಮನಿ ಪ್ಲಾಂಟ್ ಅನ್ನು ಸೌಂದರ್ಯದ ದೃಷ್ಟಿಯಿಂದ ನೆಡುತ್ತಾರೆ. ಅಲ್ಲದೆ ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಹಣದ (Money) ಕೊರತೆ ನೀಗುತ್ತದೆ ಎಂಬ ನಂಬಿಕೆಯೂ ಇದೆ. ಅಂದರೆ ಮನಿ ಪ್ಲಾಂಟ್ ಚೆನ್ನಾಗಿ ಬೆಳೆದರೆ ಅಷ್ಟೇ ಸಮೃದ್ಧಿ ಎಂದರ್ಥ.   ಆದರೆ,  ಮನಿ ಪ್ಲಾಂಟ್ ಯಾವ ದಿಕ್ಕಿನಲ್ಲಿ ನೆಡುತ್ತಿದ್ದಿರಿ ಎನ್ನುವುದು ಕೂಡಾ ಮುಖ್ಯವಾಗುತ್ತದೆ. ತಪ್ಪು ದಿಕ್ಕಿನಲ್ಲಿ ಮನಿ ಪ್ಲಾಂಟ್ ಹಾಕಿದರೆ ನಷ್ಟ ಎದುರಾಗಬಹುದು ಎನ್ನುತ್ತಾರೆ ವಾಸ್ತು ಬಲ್ಲವರು.. 


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರದ ಪ್ರಕಾರ, ಈ ದಿಕ್ಕಿನಲ್ಲಿರಬೇಕು ಮನಿ ಪ್ಲಾಂಟ್ :  
ವಾಸ್ತು ಶಾಸ್ತ್ರದಲ್ಲಿ, ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ (Money plant) ಹಾಕುವುದು ಸೂಕ್ತ ಎನ್ನುತ್ತಾರೆ. ಈ ದಿಕ್ಕನ್ನು ವಿಘ್ನ ವಿನಾಶಕ ಸ್ವಾಮಿ ಗಣೇಶನ (Lord Ganesha) ದಿಕ್ಕು ಎಂದು ಪರಿಗಣಿಸಲಾಗುತ್ತದೆ.  ಈ ಕಾರಣದಿಂದ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಹಾಕುವುದು ಅತ್ಯಂತ ಶುಭ ಎನ್ನಲಾಗಿದೆ. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ಹಾಕುವುದರಿಂದ ಪಾಸಿಟಿವ್ ಎನರ್ಜಿ (Positive energy) ಮನೆಯಲ್ಲಿ ನೆಲೆಗೊಳ್ಳುತ್ತದೆ. ಮನೆಯಲ್ಲಿ ಸಂತೋಷ ಸಮೃದ್ಧಿ ಉಳಿಯುತ್ತದೆ. ಅಲ್ಲದೆ ಮನೆಯವರಿಗೆ ಹಣದ (Money) ಸಮಸ್ಯೆ ಎದುರಾಗುವುದಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು.


ಇದನ್ನೂ ಓದಿ : Vastu tips: ನಿಮ್ಮ ಪರ್ಸ್ ನಲ್ಲಿ ಈ ಐದು ವಸ್ತುಗಳಿದ್ದರೆ ನಷ್ಟ ತಪ್ಪಿದ್ದಲ್ಲ..!


ಈ ವಿಷಯಗಳನ್ನು ಸಹ ನೆನಪಿರಲಿ : 
- ನೀವು ವಾಸ್ತು ಶಾಸ್ತ್ರವನ್ನು ನಂಬುವುದಾದರೆ,  ಈಶಾನ್ಯ ದಿಕ್ಕಿನಲ್ಲಿ (North East) ಯಾವತ್ತೂ ಮನಿ ಪ್ಲಾಂಟ್ ಹಾಕಬೇಡಿ. ಈಶಾನ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಹಾಕುವುದರಿಂದ ಆರ್ಥಿಕ ನಷ್ಟ (Financial loss) ಎದುರಾಗಬಹುದು, ಕುಟುಂಬ ಸದಸ್ಯರ ನಡುವೆ ಮನಸ್ತಾಪಗಳು ಕಂಡು ಬರಬಹುದು. ಇದಲ್ಲದೆ, ಪೂರ್ವ (East) ಮತ್ತು ಪಶ್ಚಿಮ (West) ದಿಕ್ಕಿನಲ್ಲೂ ಮನಿ ಪ್ಲಾಂಟ್ ಹಾಕುವ ಕ್ರಮ ಸರಿಯಲ್ಲ.  


- ಮನಿ ಪ್ಲಾಂಟನ್ನು ಮನೆಯ ಹೊರಗೆ ಇಟ್ಟುಕೊಳ್ಳುವ ಬದಲು ಅದನ್ನು ಮನೆಯೊಳಗೆ ಇಡಬೇಕು. ಹೀಗೆ ಮಾಡುವುದರಿಂದ, ಮನೆಯಲ್ಲಿ ಪಾಸಿಟಿವ್ ಎನರ್ಜಿ  ಇರುತ್ತದೆ.  


- ನೆನಪಿರಲಿ, ಮನಿ ಪ್ಲಾಂಟ್ ಬೆಳೆಯಲು ಆರಂಭಿಸಿದಾಗ  ಅದನ್ನು ನೆಲದ ಮೇಲೆ ಹರಡಲು ಬಿಡಬೇಡಿ.. ನೆಲದ ಮೇಲೆ ಹರಡುವ ಬದಲು ಅದನ್ನು ಗೊಡೆಯ (Wall) ಸಹಾಯದಿಂದ ಮೇಲೇರಲು ಬಿಡಿ. ನೆಲದ ಮೇಲೆ ಮನಿ ಪ್ಲಾಂಟ್ ಹರಡಿಕೊಂಡರೆ ದುಂದುವೆಚ್ಚವಾಗುತ್ತದೆ ಎನ್ನಲಾಗಿದೆ.


ಇದನ್ನೂ ಓದಿ : Kalap Village: ಪಾಂಡವ, ಕೌರವರ ವಂಶಸ್ಥರು ಭಾರತದ ಈ ಗ್ರಾಮದಲ್ಲಿ ವಾಸಿಸುತ್ತಿದ್ದಾರಂತೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.