ನವದೆಹಲಿ: ಚೈತ್ರ ಮಾಸ (Chaitra) ಹಿಂದೂ ಪಚಾಂಗದ ಮೊದಲ ತಿಂಗಳು. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಈ ತಿಂಗಳಲ್ಲಿ  ಚಿತ್ರ ನಕ್ಷತ್ರವಿರುತ್ತದೆ. ಚಿತ್ರ ನಕ್ಷತ್ರದೊಂದಿಗಿನ ಸಂಬಂಧದಿಂದಾಗಿ, ಈ ತಿಂಗಳ ಹೆಸರು ಚೈತ್ರ. ಬೇಸಿಗೆ ಕಾಲವು ಚೈತ್ರ ತಿಂಗಳಿನಿಂದ ಪ್ರಾರಂಭವಾಗುತ್ತದೆ.  ಚೈತ್ರ ತಿಂಗಳ ಕೃಷ್ಣ ಪಕ್ಷದ ಪ್ರತಿಪದ ದಿನಾಂಕವು ಹೋಳಿ (Holi) ಹಬ್ಬದೊಂದಿಗೆ ಪ್ರಾರಂಭವಾಗುತ್ತದೆ. ಈ ವರ್ಷ, ಚೈತ್ರ ಮಾಸವು 29  ಮಾರ್ಚ್ 2021 ರ ಸೋಮವಾರದಿಂದ ಆರಂಭವಾಗಿದ್ದು,  ಏಪ್ರಿಲ್ 27ರವರೆಗೆ ಇರುತ್ತದೆ.  


COMMERCIAL BREAK
SCROLL TO CONTINUE READING

ಚೈತ್ರ ಮಾಸದಲ್ಲಿ ಬರುತ್ತವೆ ಅನೇಕ ಹಬ್ಬಗಳು:
ಹಿಂದೂ ಕ್ಯಾಲೆಂಡರ್‌ನ ಮೊದಲ ತಿಂಗಳು ಪ್ರಾರಂಭವಾಗಿದೆ. ಆದರೆ ಹೊಸ ವರ್ಷ (New Year) ಶುರುವಾಗುವುದು ಏಪ್ರಿಲ್ 13 ರಂದು. ಅಂದರೆ  ಚೈತ್ರ ಮಾಸದ (Chaitra) ಶುಕ್ಲ ಪಕ್ಷದ ಪ್ರತಿಪದ ದಿನಾಂಕದಿಂದ ಹೊಸ ವರ್ಷ ಆರಂಭವಾಗಲಿದೆ.  ಚೈತ್ರ ನವರಾತ್ರಿಯೂ (Navaratri) ಈ ದಿನದಿಂದ ಪ್ರಾರಂಭವಾಗುತ್ತಿದೆ.  ಚೈತ್ರ ತಿಂಗಳಲ್ಲಿ, ನವರಾತ್ರಿಯ ಹೊರತಾಗಿ, ಶೀತಲಾ  ಅಷ್ಟಮಿ, ಯಗಾದಿ, ರಾಮನವಮಿ (Ramnavami) ಮುಂತಾದ ಹಬ್ಬಗಳು ಸಹ ಬರುತ್ತವೆ. ಇಂಗ್ಲಿಷ್ ತಿಂಗಳ ಪ್ರಕಾರ, ಚೈತ್ರ ಮಾಸವು ಮಾರ್ಚ್-ಏಪ್ರಿಲ್ ನಡುವೆ ಬರುತ್ತದೆ, ಆದರೆ ಈ ಬಾರಿ ಮಾರ್ಚ್ 29 ರಂದು ಚೈತ್ರಾ ತಿಂಗಳು ಆರಂಭವಾಗಿದೆ. 


ಇದನ್ನೂ ಓದಿ :  TUESDAY REMEDIES: ಶನಿ ದೇವನನ್ನು ಮೆಚ್ಚಿಸಲು ಮಂಗಳವಾರ ಹನುಮನನ್ನು ಪೂಜಿಸಿ


ಚೈತ್ರ ಮಾಸದಲ್ಲಿ ಬೆಲ್ಲ ತಿನ್ನಬಾರದು ಕಡಲೆ ತಿನ್ನಬೇಕು : 


ಪ್ರತಿ ತಿಂಗಳಲ್ಲಿಯು ಹವಾಮಾನ (Weather) ಬದಲಾಗುವುದರಿಂದ, ಪ್ರತಿ ತಿಂಗಳಲ್ಲಿ ಕೆಲವು ವಿಶೇಷ ವಸ್ತುಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ.  ಹಾಗೆಯೇ ಕೆಲ ಆಹಾರಗಳನ್ನು (Food) ತಿನ್ನದಂತೆ ಸೂಚಿಸಲಾಗುತ್ತದೆ.  ಚೈತ್ರ ಮಾಸದಲ್ಲಿ ಬೆಲ್ಲ (Jaggery) ತಿನ್ನುವುದನ್ನು ನಿಷೇಧಿಸಲಾಗಿದೆ.  ಅಲ್ಲದೆ, ಸಕ್ಕರೆ, ಮತ್ತು ಇತರ ಸಿಹಿ ಪದಾರ್ಥಗಳನ್ನು ಸಹ ಮಿತವಾಗಿ ಸೇವಿಸಬೇಕು. ಚೈತ್ರ ಮಾಸದಲ್ಲಿ ಬೆಲ್ಲ ತಿನ್ನುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿನಾಮ ಬೀರುತ್ತದೆ.  ಸಿಹಿ ಮತ್ತು ಹುಳಿ ಹಣ್ಣುಗಳನ್ನು ಈ  ಮಾಸದಲ್ಲಿ ಕಡಿಮೆ ತಿನ್ನಬೇಕು. ಅಲ್ಲಾದೆ, ಹಿಂದಿನ ದಿನದ ಆಹಾರ , ಶೇಖರಿಸಿಟ್ಟ ಆಹಾರವನ್ನು ಕೂಡಾ ಈ ಮಾಸದಲ್ಲಿ ಸೇವಿಸಬಾರದು. 


ಚೈತ್ರ ಮಾಸದಲ್ಲಿ ಕಡಳೆ ತಿನ್ನಬೇಕು ಎಂದು ಹೇಳಲಾಗುತ್ತದೆ. ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ನೀರು (water)ಕುಡಿಯಲು ಸಲಹೆ ನೀಡಲಾಗುತ್ತದೆ. ಚೈತ್ರ ಮಾಸದಲ್ಲಿ, ಹಗಲು ಮತ್ತು ರಾತ್ರಿಯ  ತಾಪಮಾನದಲ್ಲಿ ಹೆಚ್ಚಿನ ವ್ಯತ್ಯಾಸವಿರುತ್ತದೆ.  ಆದ್ದರಿಂದ ಆಹಾರವನ್ನು ಸಮತೋಲನಗೊಳಿಸುವುದು ಒಳ್ಳೆಯದು.


ಇದನ್ನೂ ಓದಿ :  ಇದು ಶನಿ ದೇವನ ವಕ್ರ ದೃಷ್ಟಿಯಿಂದ ತಪ್ಪಿಸಿಕೊಳ್ಳುವ ಸರಳ ವಿಧಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.