Dandruff Remedies: ತಲೆಹೊಟ್ಟಿನ ಸಮಸ್ಯೆ ನಿವಾರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ತಲೆಹೊಟ್ಟಿನ ಸಮಸ್ಯೆ ನಿವಾರಣೆಗೆ ಕೇವಲ ಕೂದಲಿಗೆ ಎಣ್ಣೆ ಹಚ್ಚಿದರೆ ಸಾಕೇ... ನಿಮ್ಮ ಈ ಸಮಸ್ಯೆಯನ್ನು ನಿವಾರಿಸಲು ಇಲ್ಲಿದೆ ಸರಳ ಉಪಾಯ.
ಬೆಂಗಳೂರು: ತಲೆಹೊಟ್ಟು, ಒಣ ನೆತ್ತಿ, ಡ್ರೈ ಹೇರ್ ಸಮಸ್ಯೆಗಳನ್ನು ನಿವಾರಿಸಲು ಕೂದಲಿಗೆ ಎಣ್ಣೆ ಹಚ್ಚುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ತಲೆಹೊಟ್ಟು ನಿವಾರಣೆಗೆ ಕೂದಲಿಗೆ ಎಣ್ಣೆ ಹಚ್ಚುವುದು ಸರಿಯಲ್ಲ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಏಕೆಂದರೆ, ಇದು ತಲೆಹೊಟ್ಟನ್ನು ಹೆಚ್ಚಿಸಬಹುದು ಮತ್ತು ತಲೆ ಹೊಟ್ಟಿನ ಸಮಸ್ಯೆಗೆ ಕೇವಲ ಎಣ್ಣೆಯನ್ನು ಮಾತ್ರ ಬಳಸಿದರೆ ಜಿಡ್ಡಿನ ಸಮಸ್ಯೆಗೆ ಇದು ಕಾರಣವಾಗಬಹುದು. ಹಾಗಾಗಿ ತಲೆಹೊಟ್ಟು ನಿವಾರಣೆಗಾಗಿ ಕೂದಲಿಗೆ ಎಣ್ಣೆ ಹಚ್ಚುವ ಮುನ್ನ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಲಾಗುತ್ತದೆ.
ತಲೆಹೊಟ್ಟು ತೆಗೆಯಲು ಈರುಳ್ಳಿ ರಸ:
ದೀರ್ಘಕಾಲದವರೆಗೆ ತಲೆಹೊಟ್ಟಿನ ಸಮಸ್ಯೆಯಿಂದ (Dandruff Remedies) ನೀವು ತೊಂದರೆಗೊಳಗಾಗಿದ್ದರೆ, ನಂತರ ಈರುಳ್ಳಿ ರಸವನ್ನು ತಲೆಗೆ ಹಚ್ಚಿ. ಕೂದಲಿಗೆ ಎಣ್ಣೆ ಹಚ್ಚುವ ಮುನ್ನ ತಲೆಹೊಟ್ಟು ಕಡಿಮೆ ಮಾಡುವುದು ಮುಖ್ಯ. ಈರುಳ್ಳಿ ರಸವು ತಲೆಹೊಟ್ಟನ್ನು ತೆಗೆಯುವುದರ ಜೊತೆಗೆ ಕೂದಲನ್ನು ಬಲಪಡಿಸುತ್ತದೆ. ಈರುಳ್ಳಿ ರಸವನ್ನು ನೆತ್ತಿಗೆ ಹಚ್ಚಿ ಮತ್ತು 20 ನಿಮಿಷಗಳ ನಂತರ ಶಾಂಪೂ ಬಳಸಿ ತಲೆ ತೊಳೆಯಿರಿ. ವಾರದಲ್ಲಿ ಕನಿಷ್ಠ ಎರಡು ಬಾರಿಯಾದರೂ ಈ ಪರಿಹಾರವನ್ನು ಅನುಸರಿಸುವುದರಿಂದ ನಿಮ್ಮ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ- Hair Care Tips: ನಯವಾದ, ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೆ! ಹಾಲಿನ ಕೆನೆಯನ್ನು ಈ ರೀತಿ ಬಳಸಿ
ತಲೆಹೊಟ್ಟಿಗೆ ಜೇನುತುಪ್ಪದ ಚಿಕಿತ್ಸೆ:
ತಲೆಹೊಟ್ಟು ತೊಡೆದುಹಾಕಲು ಜೇನುತುಪ್ಪವನ್ನು (Honey) ಬಳಸುವುದು ಬಹಳ ಸುಲಭವಾದ ಮಾರ್ಗವಾಗಿದೆ. ಇದು ನೆತ್ತಿಯನ್ನು ಪೋಷಿಸಲು ಮತ್ತು ಆರ್ಧ್ರಕಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು 1 ಟೀಚಮಚ ರೋಸ್ ವಾಟರ್ ಅನ್ನು 1 ಟೀಚಮಚ ಜೇನುತುಪ್ಪದೊಳಗೆ ಬೆರೆಸಿ ನಂತರ ತಲೆಯ ಬುಡಕ್ಕೆ (Hair Care) ಹಚ್ಚಿ ಲಘುವಾಗಿ ಮಸಾಜ್ ಮಾಡಿ. ಸ್ವಲ್ಪ ಜೇನುತುಪ್ಪ ಮತ್ತು ರೋಸ್ ವಾಟರ್ ಮಿಶ್ರಣವನ್ನು ಕೂದಲಿಗೆ ಹಚ್ಚಿ. 20 ನಿಮಿಷಗಳ ನಂತರ ಶಾಂಪೂ ಮಾಡಿ.
ಇದನ್ನೂ ಓದಿ- How To Make Milk Conditioner: ಕೂದಲಿನ ಆರೈಕೆಗಾಗಿ ಹಾಲಿನಿಂದ ಮನೆಯಲ್ಲೇ ತಯಾರಿಸಿ ಹೇರ್ ಕಂಡಿಷನರ್
ಅಲೋವೆರಾ ರಸ:
ಅಲೋವೆರಾ ಜ್ಯೂಸ್ ಕೂಡ ತಲೆಹೊಟ್ಟು ತೆಗೆಯಲು ಸಹಾಯ ಮಾಡುತ್ತದೆ. ಇದಕ್ಕಾಗಿ ತಾಜಾ ಅಲೋವೆರಾ ರಸವನ್ನು ತೆಗೆದುಕೊಂಡು ಅದನ್ನು ಕೂದಲಿನ ಬೇರು ಮತ್ತು ತುದಿಗೆ ಚೆನ್ನಾಗಿ ಹಚ್ಚಿಕೊಳ್ಳಿ. ಬಳಿಕ ಕೊಂಚ ಲಘುವಾಗಿ ಕೂದಲಿಗೆ ಮಸಾಜ್ ಮಾಡಿ. ಅಲೋವೆರಾ ರಸವನ್ನು ಕೂದಲಿಗೆ ಹಚ್ಚಿದ 20 ನಿಮಿಷಗಳ ನಂತರ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಸೊಂಪಾದ ಕೂದಲನ್ನು ನಿಮ್ಮದಾಗಿಸಬಹುದು ಎಂದು ಹೇಳಲಾಗುತ್ತದೆ.
ಸೂಚನೆ- ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ. ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ