Hair Tips: ತಲೆ ಬಾಚುವಾಗ ಇಂತಹ ತಪ್ಪುಗಳನ್ನು ಎಂದಿಗೂ ಮಾಡಲೇಬಾರದು!

ತಲೆ ಬಾಚುವುದು, ಕೂದಲನ್ನು ಸಿಂಗರಿಸುವುದು ದೈನಂದಿನ ಕೆಲಸವಾಗಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡುವುದು ಕೂಡ ಬಹಳ ಮುಖ್ಯ. ಸಾಮಾನ್ಯವಾಗಿ ತಲೆ ಬಾಚುವ ವೇಳೆ ಮಾಡುವ ಕೆಲವು ತಪ್ಪುಗಳು ಗಂಡನ ವಯಸ್ಸು, ಹಣದ ನಷ್ಟ, ಬಡತನದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.  

Written by - Yashaswini V | Last Updated : Jul 31, 2021, 01:23 PM IST
  • ತಲೆ ಬಾಚುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
  • ಎಂದಿಗೂ ಕೂಡ ನಿಂತುಕೊಂಡು ತಲೆ ಬಾಚಿಕೊಳ್ಳಬಾರದು
  • ತಲೆ ಬಾಚುವ ವೇಳೆ ಮಾಡುವ ಕೆಲವು ತಪ್ಪುಗಳು ಗಂಡನ ವಯಸ್ಸು, ಹಣದ ನಷ್ಟ, ಬಡತನದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು
Hair Tips: ತಲೆ ಬಾಚುವಾಗ ಇಂತಹ ತಪ್ಪುಗಳನ್ನು ಎಂದಿಗೂ ಮಾಡಲೇಬಾರದು! title=
Right Way To Do Comb

ಬೆಂಗಳೂರು:  ಧರ್ಮ-ಪುರಾಣ, ಜ್ಯೋತಿಷ್ ಶಾಸ್ತ್ರ, ವಾಸ್ತು ಶಾಸ್ತ್ರ ಇವೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಜೀವನಶೈಲಿಯ ಅತ್ಯುತ್ತಮ ಮಾರ್ಗಗಳನ್ನು ತಿಳಿಸುತ್ತವೆ. ಇವುಗಳಲ್ಲಿ, ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ಇವುಗಳಲ್ಲಿ ನಮ್ಮ ಮನೆ-ಮನಗಳ ಬಗ್ಗೆ ಹತ್ತು ಹಲವು ವಿಷಯಗಳನ್ನು ತಿಳಿಸಲಾಗುತ್ತದೆ. ಇದರಲ್ಲಿ, ಮಹಿಳೆಯರ  (Women)  ಮೇಕಪ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಸಹ ಹೇಳಲಾಗಿದೆ. ಮಹಿಳೆಯ ಶೃಂಗಾರದ ಬಗ್ಗೆ ಹೇಳುವಾಗ ಕೇಶ ಶೃಂಗಾರವೂ ಅದರಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ತಲೆ (Hair) ಬಾಚಿಕೊಳ್ಳುವಾಗ (Comb) ನಾವು ಮಾಡುವ ಕೆಲವು ಸಣ್ಣ-ಸಣ್ಣ ತಪ್ಪುಗಳು ನಮ್ಮನ್ನು ಭಾರೀ ಸಂಕಷ್ಟಕ್ಕೆ ಸಿಲುಕಿಸಬಹುದು ಎಂದು ನಿಮಗೆ ತಿಳಿದಿದೆಯೇ?

ತಲೆ ಬಾಚುವಾಗ ಇಂತಹ ತಪ್ಪುಗಳನ್ನು ಎಂದಿಗೂ ಮಾಡಲೇಬಾರದು:
- ಅತ್ಯಂತ ಮುಖ್ಯವಾದ ವಿಷಯವೆಂದರೆ ಮಹಿಳೆಯರು ಎಂದಿಗೂ ಕೂಡ ನಿಂತು ತಮ್ಮ  ಕೂದಲನ್ನು (Hair) ಬಾಚಿಕೊಳ್ಳಬಾರದು. ಮಹಿಳೆಯರು ಅದರಲ್ಲೂ ವಿಶೇಷವಾಗಿ ವಿವಾಹಿತ ಮಹಿಳೆಯರು ಕುಳಿತುಕೊಂಡೇ ತಲೆ ಬಾಚಿಕೊಳ್ಳಬೇಕು. ಇಲ್ಲದಿದ್ದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ- Hair Care Tips: ನಿಮ್ಮ ಕೂದಲು ಬೇಗ ಉದ್ದವಾಗಬೇಕೆ? ಇದನ್ನು ಬಳಸಿ, ಕೆಲವೇ ದಿನಗಳಲ್ಲಿ ನೀವು ಪ್ರಯೋಜನ ನೋಡುತ್ತೀರಿ

- ಮನೆಯ ನಿತ್ಯದ ಕೆಲಸದಲ್ಲಿ ಸದಾ ಬ್ಯುಸಿ ಆಗಿರುವ ಮಹಿಳೆಯರು ಸಾಮಾನ್ಯವಾಗಿ ಜನರು ಸಂಜೆಯ ವೇಳೆಗೆ ತಲೆ ಬಾಚಿಕೊಳ್ಳುತ್ತಾರೆ. ಆದರೆ ಸೂರ್ಯಾಸ್ತದ ನಂತರ ಮಹಿಳೆಯರು ತಲೆ ಬಾಚುವುದನ್ನು (Right Way To Do Comb) ಅಶುಭಾಕರ ಎಂದು ಪರಿಗಣಿಸಲಾಗುತ್ತದೆ.  ಏಕೆಂದರೆ ಈ ಸಮಯದಲ್ಲಿ ಋಣಾತ್ಮಕತೆಯು ಹೆಚ್ಚಾಗುತ್ತದೆ. ಮಂತ್ರ-ತಂತ್ರಗಳಲ್ಲಿ ಈ ಸಮಯವನ್ನು ನಕಾರಾತ್ಮಕ ಶಕ್ತಿಗಳ ಜಾಗೃತಿಯ ಸಮಯ ಎಂದೂ ಕರೆಯುತ್ತಾರೆ. ಅದೇ ರೀತಿ, ರಾತ್ರಿ ಮಲಗುವಾಗ ನಿಮ್ಮ ಕೂದಲನ್ನು ತೆರೆದು ಮಲಗುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

- ವಿಭಿನ್ನ ಕೇಶವಿನ್ಯಾಸ (Hair Style) ಮಾಡುವ ಅನ್ವೇಷಣೆಯಲ್ಲಿ, ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ವಿಭಿನ್ನ ಅಲಂಕಾರಿಕ ವಸ್ತುಗಳನ್ನು ಬಳಸುತ್ತಾರೆ. ಆದರೆ ಕೇಶ ವಿನ್ಯಾಸದಲ್ಲಿ ಬಳಸುವ ಅಲಂಕಾರಿಕ ವಸ್ತುಗಳು ಯಾವಾಗಲು ಸ್ಪಷ್ಟವಾಗಿ, ನೇರವಾಗಿ ತಲೆಯ ಮಧ್ಯದಲ್ಲಿರಬೇಕು ಎಂದು ನೆನಪಿನಲ್ಲಿಡಿ. ಇಲ್ಲದಿದ್ದರೆ ಅದು ಸಂಬಂಧದಲ್ಲಿ ಒತ್ತಡವನ್ನು ಉಂಟುಮಾಡುತ್ತದೆ.

ಇದನ್ನೂ ಓದಿ- Hair Care Tips: ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಈ ಟಿಪ್ಸ್ ಅನುಸರಿಸಿ

- ಇದರ ಹೊರತಾಗಿ, ನಿಮ್ಮ ಕೂದಲಿಗೆ ಅಲಂಕಾರಿಕ ವಸ್ತುಗಳನ್ನು ಹಾಕುವಾಗ ಯಾವಾಗಲೂ ನಿಮ್ಮ ಮುಖ ಉತ್ತರಾಭಿಮುಖವಾಗಿರಲಿ. ಇದರಿಂದ ನಿಮಗೆ ಒಳ್ಳೆಯದಾಗುತ್ತದೆ. 

- ಎಂದಿಗೂ ಎರಡೂ ಕೈಗಳಿಂದ ತಲೆಯನ್ನು ಮುಟ್ಟಬೇಡಿ. ಇದು ಹಣದ ನಷ್ಟಕ್ಕೆ ಕಾರಣವಾಗುತ್ತದೆ. ಇದು ಮನೆಯಲ್ಲಿ ಬಡತನವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News