ಬೆಂಗಳೂರು : ಅಂಗೈಯ ರೇಖೆಗಳಿಂದ ರೂಪುಗೊಂಡ ಆಕಾರಗಳು ವ್ಯಕ್ತಿಯ ಭವಿಷ್ಯದ ಬಗ್ಗೆ ಅನೇಕ ಪ್ರಮುಖ ಸೂಚನೆಗಳನ್ನು ನೀಡುತ್ತವೆ. ಈ ರೇಖೆಗಳು, ಆಕಾರಗಳು ಮತ್ತು ಗುರುತುಗಳು ಒಬ್ಬ ವ್ಯಕ್ತಿಯು ಯಾವ ರೀತಿಯ ಜೀವನವನ್ನು ನಡೆಸುತ್ತಾನೆ ಎಂದು ಹೇಳುತ್ತದೆ.  ವ್ಯಕ್ತಿಯ ಹಸ್ತದಲ್ಲಿ ಈ ರೀತಿಯ ಆಕಾರ ಮೂಡಿದ್ದರೆ ಇದು ಆತನ ಆರ್ಥಿಕ ಸ್ಥಿತಿಯ ಬಗ್ಗೆ ಬಹಳಷ್ಟು ಹೇಳುತ್ತದೆ. ಆ ಆಕಾರ ಯಾವುದೆಂದರೆ ಇಂಗ್ಲಿಷ್‌ನ Y ಅಕ್ಷರದ ಆಕಾರವಾಗಿದೆ. 


COMMERCIAL BREAK
SCROLL TO CONTINUE READING

ಅಂಗೈಯಲ್ಲಿ Y ಆಕಾರವಿದ್ದರೆ ಏನರ್ಥ : 
ಚಂದ್ರನ ಪರ್ವತದ ಕಡೆಗೆ ಹೋಗುವಾಗ ಅಂಗೈಯಲ್ಲಿನ ಜೀವನ ರೇಖೆಯಿಂದ ಒಂದು ರೇಖೆಯು ಹೊರಹೊಮ್ಮುತ್ತದೆ. ಅದನ್ನು ತಲೆಕೆಳಗಾಗಿ ನೋಡುವಾಗ Y ಆಕಾರ ಕಂಡರೆ, ಅಂತಹ ವ್ಯಕ್ತಿಯನ್ನು ಅದೃಷ್ಟವಂತ ಎಂದು ಹೇಳಲಾಗುತ್ತದೆ. ಆ ವ್ಯಕ್ತಿ ತನ್ನ ಜೀವನದಲ್ಲಿ ಬಹಳಷ್ಟು ಆಸ್ತಿ ಹೊಂದುತ್ತಾನೆ ಎನ್ನಲಾಗುತ್ತದೆ. ಅಲ್ಲದೆ ಕೈಯಲ್ಲಿ ಈ ಚಿಹ್ನೆ ಇದ್ದರೆ ವ್ಯಕ್ತಿಗೆ  ವಿದೇಶ ಪ್ರಯಾಣ ಯೋಗ ಕೂಡಾ ಕುಉಡಿ ಬರುತ್ತದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ :  ಈ ಮೂರು ರಾಶಿಯ ಹುಡುಗಿಯರಿಗೆ ಭಯವೆಂಬುದೇ ಇಲ್ಲ, ಕಠಿಣ ಸವಾಲು ಗಳನ್ನು ಧೈರ್ಯದಿಂದ ಎದುರಿಸುತ್ತಾರೆ


ಜೀವನ ರೇಖೆಯಿಂದ ಚಂದ್ರನ ಪರ್ವತಕ್ಕೆ ರೇಖೆ ಹೋಗಿ Y ಆಕಾರವನ್ನು ಸ್ಪಷ್ಟವಾಗಿ ರೂಪಿಸಿದರೆ, ಅಂತಹವರು ವ್ಯಾಪಾರ ಮಾಡುತ್ತಾರೆ. ವ್ಯಾಪಾರ ಕೂಡಾ ಸಣ್ಣ ಮಟ್ಟ ದ್ದಾಗಿರುವುದಿಲ್ಲ. ಈ ಜನರು ವ್ಯಾಪಾರದಿಂದಲೂ ಸಾಕಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಸಂತೋಷದ ಜೀವನವನ್ನು ನಡೆಸುತ್ತಾರೆ. 


ಒಂದು ರೇಖೆಯು ಜೀವನದ ರೇಖೆಯನ್ನು ಕತ್ತರಿಸಿ Y ಆಕಾರವನ್ನು ಮೂಡಿದ್ದರೆ, ಅದನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಅಂತಹ ಸಾಲು ಅಶುಭ ಎನ್ನಲಾಗುತ್ತದೆ. ಕೆಲವು ಕಾಯಿಲೆಗಳಿಗೆ ಬಲಿಯಾಗಬಹುದು ಅಥವಾ ಅನೇಕ ತೊಂದರೆಗಳಿಂದ ಕೂಡಿರಬಹುದು. 


ಇದನ್ನೂ ಓದಿ : ಈ ತಾರೀಕಿಗೆ ಹುಟ್ಟಿದ ಮಕ್ಕಳು ತಂದೆಯ ಅದೃಷ್ಟವನ್ನೇ ಬದಲಾಯಿಸುತ್ತಾರೆ.. !



https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.