ಈ ತಾರೀಕಿಗೆ ಹುಟ್ಟಿದ ಮಕ್ಕಳು ತಂದೆಯ ಅದೃಷ್ಟವನ್ನೇ ಬದಲಾಯಿಸುತ್ತಾರೆ.. !

7 ಅನ್ನು ಅದೃಷ್ಟದ ಸಂಖ್ಯೆ ಎಂದು ಕರೆಯಲಾಗುತ್ತದೆ. ಆದ್ದರಿಂದ ಜನರು ಮಂಗಳಕರ ಮತ್ತು ಪ್ರಮುಖ ಕೆಲಸಗಳಲ್ಲಿ 7 ನೇ ಸಂಖ್ಯೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಸಂಖ್ಯಾಶಾಸ್ತ್ರದಲ್ಲಿ ಸಹ, 7 ಅನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

Written by - Ranjitha R K | Last Updated : Jun 16, 2022, 09:54 AM IST
  • ಕೆಲವು ಮಕ್ಕಳು ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತು ತರುತ್ತಾರೆ.
  • ಈ ತಾರೀಕಿನಂದು ಹುಟ್ಟಿದ ಮಕ್ಕಳು ತಮ್ಮ ತಂದೆಯ ಭಾಗ್ಯ ಬೆಳಗುತ್ತಾರೆ
  • ರಾಡಿಕ್ಸ್ 7 ರ ಮಕ್ಕಳು ತಂದೆಯ ಪಾಲಿಗೆ ಅದೃಷ್ಟದ ಗಣಿ
ಈ ತಾರೀಕಿಗೆ ಹುಟ್ಟಿದ ಮಕ್ಕಳು ತಂದೆಯ ಅದೃಷ್ಟವನ್ನೇ ಬದಲಾಯಿಸುತ್ತಾರೆ.. ! title=
numerology (file photo)

ಬೆಂಗಳೂರು : Lucky Boy Lucky Girl by Birth Date: ಕೆಲವು ಮಕ್ಕಳು ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತು ತರುತ್ತಾರೆ.  ಆ ಮಕ್ಕಳ ಜನನದ ನಂತರ ಅವರ ಇಡೀ ಕುಟುಂಬದ ಮುಂದಿನ ಜೀವನವೇ ಬದಲಾಗಿ ಬಿಡುತ್ತವೆ.  ಈ ತಾರೀಕಿನಂದು ಹುಟ್ಟಿದ ಮಕ್ಕಳು ತಮ್ಮ ತಂದೆಯ ಭಾಗ್ಯ ಬೆಳಗುತ್ತಾರೆ ಎಂದು ಹೇಳಲಾಗುತ್ತದೆ.  ಸಂಖ್ಯಾಶಾಸ್ತ್ರದಲ್ಲಿ,  ಮೂಲಾಂಕವನ್ನು ಹೇಳಲಾಗಿದೆ. ಇದರ ಪ್ರಕಾರ, ರಾಡಿಕ್ಸ್ 7 ರ  ಮಕ್ಕಳು ತಂದೆಯ ಪಾಲಿಗೆ ಅದೃಷ್ಟದ ಗಣಿ ಎನ್ನಲಾಗಿದೆ. ರಾಡಿಕ್ಸ್ 7 ಅಂದರೆ ಯಾವುದೇ ತಿಂಗಳ 7, 16 ಅಥವಾ 25 ರಂದು ಜನಿಸಿದ  ಮಕ್ಕಳು.  

ಅದೃಷ್ಟ ಸಂಖ್ಯೆ 7  : 
7 ಅನ್ನು ಅದೃಷ್ಟದ ಸಂಖ್ಯೆ ಎಂದು ಕರೆಯಲಾಗುತ್ತದೆ. ಆದ್ದರಿಂದ ಜನರು ಮಂಗಳಕರ ಮತ್ತು ಪ್ರಮುಖ ಕೆಲಸಗಳಲ್ಲಿ 7 ನೇ ಸಂಖ್ಯೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಸಂಖ್ಯಾಶಾಸ್ತ್ರದಲ್ಲಿ ಸಹ, 7 ಅನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.  ಈ ದಿನದಂದು ಜನಿಸಿದ ಮಕ್ಕಳು ಅದೃಷ್ಟದಾತರು ಎನ್ನಲಾಗುತ್ತದೆ. ರಾಡಿಕ್ಸ್ 7 ಹೊಂದಿರುವ ಜನರು ತುಂಬಾ ಶ್ರಮಪಡುತ್ತಾರೆ ಮತ್ತು ಬುದ್ಧಿವಂತರು. ಅವರು ತಮ್ಮ ತೀಕ್ಷ್ಣ ಬುದ್ಧಿಶಕ್ತಿಯ ಬಲದಿಂದ ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. 

ಇದನ್ನೂ ಓದಿ : Zodiac signs: ಈ ರಾಶಿಯವರು ಯಾವಾಗಲೂ ನಕಾರಾತ್ಮಕವಾಗಿಯೇ ಯೋಚಿಸುತ್ತಾರೆ!

ತಂದೆ ಮತ್ತು ಕುಟುಂಬಕ್ಕೆ ಅದೃಷ್ಟವಂತರು,  ಮೂಲಾಂಕ 7 ರ ಮಕ್ಕಳು : 
ರಾಡಿಕ್ಸ್ 7 ಹೊಂದಿರುವ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಅವರು  ತಮಗೆ ಮಾತ್ರವಲ್ಲ , ಕುಟುಂಬದವರ ಪಾಲಿಗೂ ಅದೃಷ್ಟವನ್ನು ತರುತ್ತಾರೆ.  ರಾಡಿಕ್ಸ್ 7 ಹೊಂದಿರುವವರು ತಮ್ಮ ತಂದೆಯಾ ಪಾಲಿಗೆ ಅದೃಷ್ಟದ ಗಣಿ ಎಂದೇ ಹೇಳಲಾಗುತ್ತದೆ. ಅವರ ಸರಳ ಸ್ವಭಾವ ಮತ್ತು ಶುದ್ಧ ಮನಸ್ಸು ಜನರನ್ನು ಇವರತ್ತ ಆಕರ್ಷಿಸುತ್ತದೆ. 

ರಾಡಿಕ್ಸ್ 7 ರ ಜನರು ಮಿಲಿಯನೇರ್ ಆಗುತ್ತಾರೆ :
ರಾಡಿಕ್ಸ್ 7 ಹೊಂದಿರುವವರು ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ಪಡೆಯುತ್ತಾರೆ.  ಮತ್ತು ಅಪಾರ ಸಂಪತ್ತನ್ನು ಗಳಿಸುತ್ತಾರೆ. ಅವರ ಇಡೀ ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದೇ ಇಲ್ಲ. ಈ ಜನರು ಶ್ರೀಮಂತ ಜೀವನವನ್ನು ನಡೆಸುತ್ತಾರೆ. ಈ ಜನರು ದುಂದುವೆಚ್ಚ ಮಾಡುವುದಿಲ್ಲ. 

ಇದನ್ನೂ ಓದಿ : Barli Remedies : ನಿಮ್ಮ ಮನೆಯ ಸಮಸ್ಯೆ ಪರಿಹಾರಕ್ಕೆ ಬಾರ್ಲಿ ಅಥವಾ ಜವೆ ಗೋಧಿ! ಹೇಗೆ ಇಲ್ಲಿದೆ

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News