ಈ ರಾಶಿಯವರಿಗೆ ಶೀಘ್ರವೇ ಸಿಗಲಿದೆ ಸಾಡೇಸಾತಿ, ಮತ್ತು ಶನಿ ಧೈಯಾದಿಂದ ಮುಕ್ತಿ
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಶನಿದೇವನು ತನ್ನ ರಾಶಿಯನ್ನು ಬದಲಾಯಿಸಿದಾಗ, ಕೆಲವೊಂದು ರಾಶಿಗಳಿಗೆ ಶನಿಯ ಧೈಯಾ ಅಥವಾ ಸಾಡೆಸಾತಿ ಆರಂಭವಾಗುತ್ತದೆ.
ನವದೆಹಲಿ : ಜ್ಯೋತಿಷ್ಯದಲ್ಲಿ (Astrology) 9 ಗ್ರಹಗಳು ಮತ್ತು 12 ರಾಶಿಚಕ್ರದ ಚಿಹ್ನೆಗಳನ್ನು ಉಲ್ಲೇಖಿಸಲಾಗಿದೆ. ಈ ರಾಶಿ ನಕ್ಷತ್ರಗಳ ಪರಿಣಾಮ, ಪ್ರತಿಯೊಬ್ಬ ಮನುಷ್ಯನ ಜೀವನದ ಮೇಲೂ ಬೀರುತ್ತದೆ. ಎಲ್ಲಾ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು (Zodiac sign) ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳ ರಾಶಿ ಬದಲಾವಣೆಯ ಪರಿಣಾಮವು, ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೂ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು (Shani Deva) ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಶನಿದೇವನು ತನ್ನ ರಾಶಿಯನ್ನು ಬದಲಾಯಿಸಿದಾಗ, ಕೆಲವೊಂದು ರಾಶಿಗಳಿಗೆ ಶನಿಯ ಧೈಯಾ ಅಥವಾ ಸಾಡೆಸಾತಿ ಆರಂಭವಾಗುತ್ತದೆ.
ಶನಿದೇವನು (Shani Dev) ಶೀಘ್ರದಲ್ಲೇ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಈ ಹಿನ್ನೆಲೆಯಲ್ಲಿ ರಾಶಿಚಕ್ರದ (Zodiac sign) ಜನರ ಸಾಡೇಸಾತಿ (Sadesaathi) ಮತ್ತು ಶನಿ ಧೈಯಾದಿಂದ ಮುಕ್ತರಾಗುತ್ತಾರೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಏಪ್ರಿಲ್ 29 ರಂದು ಶನಿದೇವನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಅಂದರೆ, ಶನಿ ಗ್ರಹ ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯ ರಾಶಿ ಬದಲಾವಣೆಯ ಕಾರಣದಿಂದಾಗಿ, ಕೆಲವು ರಾಶಿಗಳಿಗೆ ಶನಿಯ ಧೈಯ ಮತ್ತು ಸಾಡೇಸಾತಿ ಆರಂಭವಾದರೆ, ಇನ್ನು ಕೆಲವು ರಾಶಿಗಳು ಶನಿಯ ಧೈಯ ಮತ್ತು ಸಾಡೇಸಾತಿಯಿಂದ ಮುಕ್ತಿ ಪಡೆಯುತ್ತಾರೆ. ಶನಿಯ ರಾಶಿ ಬದಲಾವಣೆಯೊಂದಿಗೆ (Shani zodiac change), ಧನು ರಾಶಿಯವರ ಸಾಡೇಸಾತಿ ಕೊನೆಗೊಳ್ಳುತ್ತದೆ. ಅಲ್ಲದೆ, ಮಿಥುನ ಮತ್ತು ತುಲಾ ರಾಶಿಯವರು (Libra) ಕೂಡಾ ಶನಿಯ ಧೈಯದಿಂದ ಮುಕ್ತಿ ಪಡೆಯುತ್ತಾರೆ.
ಇದನ್ನೂ ಓದಿ : ಅನಗತ್ಯ ಖರ್ಚು ಎದುರಾಗುತ್ತಿದ್ದರೆ ಮನೆಯ ಈ ದಿಕ್ಕಿನಲ್ಲಿರಲಿ ತಿಜೋರಿ
ಈ 3 ರಾಶಿಗಳಿಗೆ ಸಿಗಲಿದೆ ಮುಕ್ತಿ :
ಆದಾಗ್ಯೂ, ಜುಲೈ 12 ರಂದು, ಶನಿದೇವನು ಮತ್ತೊಮ್ಮೆ ಮಕರ ರಾಶಿಯಲ್ಲಿ (Capricorn) ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಈ ಕಾರಣದಿಂದಾಗಿ ಮಿಥುನ, ತುಲಾ ಮತ್ತು ಧನು ರಾಶಿಯಲ್ಲಿ (Sagitarius) ಶನಿ ದೆಸೆ ಆರಂಭವಾಗಲಿದೆ. ಈ 3 ರಾಶಿಚಕ್ರದ ಚಿಹ್ನೆಗಳು 2023 ರಲ್ಲಿ ಶನಿಯ ದೆಸೆಯಿಂದ ಸಂಪೂರ್ಣ ಮುಕ್ತಿಯನ್ನು ಪಡೆಯುತ್ತವೆ.
ಇದನ್ನೂ ಓದಿ : ಈ ನಾಲ್ಕು ರಾಶಿಯವರು ಬಹಳ ಎಚ್ಚರದಿಂದ ಇರಬೇಕು, ಅಪಾಯವನ್ನು ನೀಡಲಿದ್ದಾನೆ ರಾಹು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.