ನವದೆಹಲಿ : ಏನೇ ಮಾಡಿದರೂ ಕೈಯಲ್ಲಿ ಹಣ ಉಳಿಯುವುದೇ ಇಲ್ಲ ಎಂದು ಕೆಲವರು ಯಾವತ್ತೂ ದೂರುತ್ತಿರುತ್ತಿರುತ್ತಾರೆ. ಕೈಗೆ ಎಷ್ಟೇ ಹಣ ಬಂದರೂ ಖಾಲಿಯಾಗುವುದೇ ಗೊತ್ತಾಗುವುದಿಲ್ಲ ಎಂದು ಹೇಳುತ್ತಿರುವುದನ್ನು ನೀವು ಕೇಳಿರಬಹುದು. ಹಣ ಉಳಿಸಲು ಮಾಡುವ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿರುತ್ತವೆ. ಇದಕ್ಕೆ ಏನು ಕಾರಣವಿರಬಹುದು ? ಹೌದು, ನಿಮ್ಮೆಲ್ಲಾ ಪ್ರಯತ್ನಗಳ ನಡುವೆಯೂ ಹಣ ಉಳಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಅದಕ್ಕೆ ವಾಸ್ತು ದೋಷ (Vastu Dosha) ಕಾರಣವಾಗಿರಬಹುದು.
ವ್ಯರ್ಥ ಖರ್ಚು ಯಾಕಾಗುತ್ತದೆ ?
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮನೆಯಲ್ಲಿ ಹಣವನ್ನು ಸರಿಯಾದ ಸ್ಥಳದಲ್ಲಿ ಇಡದಿದ್ದರೆ, ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತದೆ. ವಾಸ್ತುವಿಗೆ (Vastu Tips) ವಿಶೇಷ ಮಹತ್ವವಿದೆ. ಹೀಗಿರುವಾಗ ಇದರ ನಿರ್ಲಕ್ಷ್ಯದಿಂದಾಗಿ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ, ವಾಸ್ತು ನಿಯಮಗಳನ್ನು (Vastu rules) ಸರಿಯಾಗಿ ಅನುಸರಿಸಬೇಕು.
ಇದನ್ನೂ ಓದಿ : ಈ ನಾಲ್ಕು ರಾಶಿಯವರು ಬಹಳ ಎಚ್ಚರದಿಂದ ಇರಬೇಕು, ಅಪಾಯವನ್ನು ನೀಡಲಿದ್ದಾನೆ ರಾಹು
ಮನೆಯಲ್ಲಿ ತಿಜೋರಿ ಅಥವಾ ಹಣವನ್ನು ಎಲ್ಲಿ ಇಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ಮತ್ತು ಉತ್ತರ ದಿಕ್ಕಿನೊಂದಿಗೆ ದೇವತೆಗಳ ಸಂಬಂಧವಿದೆ. ಈ ದಿಕ್ಕುಗಳಲ್ಲಿ ದೇವತೆಗಳು ನೆಲೆಸಿದ್ದಾರೆ ಎನ್ನಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪೂರ್ವ ದಿಕ್ಕಿನಲ್ಲಿ ತಿಜೋರಿ (direction to keep locker) ಇಟ್ಟರೆ ಮಂಗಳಕರವಾಗಿರುತ್ತದೆ. ಇನ್ನು ಮನೆಯ ಉತ್ತರ ದಿಕ್ಕಿನಲ್ಲಿಯೂ ತಿಜೋರಿ ಇಡಬಹುದು. ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ದುಂದುವೆಚ್ಚವೂ ನಿಯಂತ್ರಣವಾಗುತ್ತದೆ.
ಈ ದಿಕ್ಕಿನಲ್ಲಿ ತಿಜೋರಿ ಇಡುವ ತಪ್ಪನ್ನು ಯಾವತ್ತೂ ಮಾಡಬೇಡಿ :
ವಾಸ್ತು ಶಾಸ್ತ್ರದ (vastu shastra) ತಜ್ಞರ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ತಿಜೋರಿ ಇಡಬಾರದು. ಈ ದಿಕಿನಲ್ಲಿ ತಿಜೋರಿ ಇಟ್ಟರೆ, ಹಣದ ನಷ್ಟವಾಗುವುದಿಲ್ಲ, ಆದರೆ ಸಂಪತ್ತಿನ ಹೆಚ್ಚಳವೂ ಆಗುವುದಿಲ್ಲ. ಇದಕ್ಕಾಗಿ ಪೂರ್ವ ಮತ್ತು ಉತ್ತರ ದಿಕ್ಕನ್ನು ಬಳಸುವುದು ಸೂಕ್ತವೆಂದು ಪರಿಗಣಿಸಲಾಗಿದೆ. ಇನ್ನು ಪಶ್ಚಿಮ ದಿಕ್ಕಿನಲ್ಲಿ ಬೀರು ಅಥವಾ ತಿಜೋರಿಯನ್ನು ಇಡಬೇಡಿ, ಏಕೆಂದರೆ ಇದು ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ. ಅಲ್ಲದೆ, ದುಂದುವೆಚ್ಚಕ್ಕೂ ಕಾರಣವಾಗುತ್ತದೆ.
ಇದನ್ನೂ ಓದಿ : Swapna Shastra : ಉದ್ಯೋಗ-ವ್ಯವಹಾರದ ಬಗ್ಗೆ ಕನಸು ಬೀಳುವುದು ಕೆಟ್ಟದ್ದು : ಹಾಗಿದ್ರೆ, ಯಾವುದು ಅದೃಷ್ಟ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.