ನವದೆಹಲಿ : ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಗ್ರಹಗಳನ್ನು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಉದಾಹರಣೆಗೆ- ಶನಿ, ರಾಹು, ಕೇತು. ಈ ಗ್ರಹಗಳ ಕೆಟ್ಟ ದೃಷ್ಟಿ ಜೀವನವನ್ನೇ ನಾಶ ಮಾಡಿಬಿಡುತ್ತದೆ. ಈ ಕಾರಣದಿಂದಲೇ ಈ ಗ್ರಹಗಳಲ್ಲಿ ಆಗುವ ಬದಲಾವಣೆಗಳಿಗೆ ಜನರು ಹೆಚ್ಚು ಭಯಪಡುತ್ತಾರೆ. ಏಕೆಂದರೆ ಈ ಬದಲಾವಣೆಗಳು ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ.
ರಾಶಿಚಕ್ರ ಬದಲಾಯಿಸುತ್ತವೆ ಕ್ರೂರ ಗ್ರಹಗಳು :
ಕ್ರೂರ ಮತ್ತು ಪಾಪ ಗ್ರಹವೆಂದು ಪರಿಗಣಿಸಲಾದ ರಾಹುವು, ಏಪ್ರಿಲ್ 12 2022 ರಂದು ತನ್ನ ರಾಶಿಚಕ್ರವನ್ನು (Rahu transit) ಬದಲಾಯಿಸಲಿದ್ದಾನೆ. ಇದರೊಂದಿಗೆ, ಕೆಲವು ರಾಶಿಗಳಿಗೆ ಕೆಟ್ಟ ಸಮಯ ಆರಂಭವಾಗಲಿದೆ. ಇದರಿಂದಾಗಿ ಈ ರಾಶಿಗಳಿಗೆ (Zodiac sign) ತೊಂದರೆ ಎದುರಾಗಲಿದೆ. ಕಷ್ಟ ನಷ್ಟಗಳು ಸಂಭವಿಸಲಿದೆ. ಇದನ್ನೂ ತಪ್ಪಿಸಿಕೊಳ್ಳಲು ಈಗಿನಿಂದಲೇ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ಜಾತಕದಲ್ಲಿ ರಾಹುವಿನ ಸ್ಥಾನಕ್ಕೆ ಅನುಗುಣವಾಗಿ ರಾಹುವಿನ ಶಾಂತಿಗಾಗಿ (Rahu remedies) ಕ್ರಮಗಳನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ: Swapna Shastra : ಉದ್ಯೋಗ-ವ್ಯವಹಾರದ ಬಗ್ಗೆ ಕನಸು ಬೀಳುವುದು ಕೆಟ್ಟದ್ದು : ಹಾಗಿದ್ರೆ, ಯಾವುದು ಅದೃಷ್ಟ?
ಈ ರಾಶಿಯವರಿಗೆ ಎದುರೆಆಗಲಿದೆ ಅಪಾಯ :
ಮೇಷ ರಾಶಿ (Aries) :
ರಾಹುವಿನ ಸಂಚಾರವು ಮೇಷ ರಾಶಿಯಲ್ಲಿ (Aries) ಜನಿಸಿದವರಿಗೆ ಅವಮಾನಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಇದಲ್ಲದೆ, ದೈಹಿಕ ಅಥವಾ ಮಾನಸಿಕ ಯಾತನೆಗೆ ಕಾರಣವಾಗಬಹುದು. ಈ ರಾಶಿಯವರು (Zodiac sign) ರಾಹುವಿನ ಶಾಂತಿಗಾಗಿ ಕ್ರಮಗಳನ್ನು ತಕ್ಷಣದಿಂದ ಅನುಸರಿಸುವುದು ಉತ್ತಮ.
ವೃಷಭ ರಾಶಿ (Taurus) :
ವೃಷಭ ರಾಶಿಯಲ್ಲಿ ಜನಿಸಿದವರಿಗೂ ರಾಹುವಿನ ಸಂಚಾರ ಅಶುಭ ಫಲವನ್ನೇ ನೀಡಲಿದೆ. ಅವರ ಖರ್ಚು ಹೆಚ್ಚಾಗುತ್ತದೆ. ಸಂಸಾರದಲ್ಲಿ ಸಮಸ್ಯೆ ಉಂಟಾಗಬಹುದು. ಹಾಗಾಗಿ ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಮಾತಿನಲ್ಲಿ ಎಚ್ಚರವಿರಲಿ.
ಇದನ್ನೂ ಓದಿ: Palmistry: ಇಂತಹ ಉಗುರು ಹೊಂದಿರುವ ಜನರು ತುಂಬಾ ಬುದ್ಧಿವಂತರು ಮತ್ತು ಅದೃಷ್ಟವಂತರು!
ಮಕರ ರಾಶಿ (Capricorn):
ರಾಹುವಿನ ರಾಶಿ ಬದಲಾವಣೆಯಿಂದಾಗಿ ಮಕರ ರಾಶಿಯವರಿಗೆ (Capricorn) ಭಾರೀ ನಷ್ಟ ಉಂಟಾಗಲಿದೆ. ವ್ಯಾಪಾರ-ಉದ್ಯೋಗದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ತಾಯಿ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಯಾವುದೇ ನಿರ್ಧಾರವನ್ನು ತಾಳ್ಮೆಯಿಂದ ತೆಗೆದುಕೊಳ್ಳಿ.
ಧನು ರಾಶಿ (Sagittarius):
ರಾಹುವಿನ ಸಂಚಾರವು (Rahu Transit) ಧನು ರಾಶಿಯಲ್ಲಿ ಜನಿಸಿದವರ ಪ್ರೇಮ ಜೀವನದಲ್ಲಿ ತೊಂದರೆಗಳನ್ನು ತರುತ್ತದೆ. ಇದನ್ನು ಹೊರತುಪಡಿಸಿ, ಅಪಾಯಕಾರಿ ಹೂಡಿಕೆಗಳನ್ನು ಮಾಡಬೇಡಿ. ನಷ್ಟವಾಗಬಹುದು. ಕುಟುಂಬದಲ್ಲಿಯೂ ತೊಂದರೆಗಳನ್ನು ಎದುರಿಸಬೇಕಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.