ನವದೆಹಲಿ: ಹಸ್ತಸಾಮುದ್ರಿಕ ಶಾಸ್ತ್ರ(Palmistry)ದಲ್ಲಿ ಅಂಗೈ ಜೊತೆಗೆ ಬೆರಳುಗಳೂ ಕಾಣಸಿಗುತ್ತವೆ. ಹೆಬ್ಬೆರಳಿನಲ್ಲಿ ರೂಪುಗೊಂಡ ಕೆಲವು ವಿಶೇಷ ರೇಖೆಗಳು ಅಥವಾ ಗುರುತುಗಳು ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಹೆಬ್ಬೆರಳಿನಲ್ಲಿ ರೂಪುಗೊಂಡ ‘ಬಾರ್ಲಿ’(Barley sign)ಯ ಗುರುತು ವಿಶೇಷವಾಗಿದೆ. ಈ ಗುರುತು ಹೆಬ್ಬೆರಳಿನ ಮೊದಲ ತುದಿಯಲ್ಲಿದ್ದರೆ, ಅದನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಈ ಗುರುತು ಗಾತ್ರದಿಂದಲೂ ಅನೇಕ ವಿಷಯಗಳು ತಿಳಿಯುತ್ತವೆ. ಹೆಬ್ಬೆರಳಿನಲ್ಲಿ ರೂಪುಗೊಂಡ ಬಾರ್ಲಿ ಗುರುತು(Barley Sign In Thumb) ಏನನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯಿರಿ.


COMMERCIAL BREAK
SCROLL TO CONTINUE READING

ಹೆಬ್ಬೆರಳಿನಲ್ಲಿ ‘ಬಾರ್ಲಿ’ಯ ಗುರುತು(Thumb Palmistry) ಮಾನವನ ಯಶಸ್ಸಿನ ಸೂಚಕವಾಗಿದೆ. ಹೆಬ್ಬೆರಳಿನಲ್ಲಿ ಈ ಗುರುತು ಇರುವ ವ್ಯಕ್ತಿ ತುಂಬಾ ಶ್ರಮಜೀವಿ. ಇಂತಹ ಜನರು ಮಕ್ಕಳ ಸಂತೋಷವನ್ನು ಪಡೆಯುತ್ತಾರೆ. ಇದರ ಹೊರತಾಗಿ ‘ಬಾರ್ಲಿ’ಯ ಗುರುತು ತುಂಬಾ ಚಿಕ್ಕದಾಗಿದ್ದರೆ ಅದರ ಫಲಿತಾಂಶವು ತುಂಬಾ ಉತ್ತಮವಾಗಿರುವುದಿಲ್ಲ.


ಇದನ್ನೂ ಓದಿ: Feng shui: ಆಮೆ ಜೊತೆಗೆ ಈ ವಿಗ್ರಹ ಇಟ್ಟರೆ ಹಣದ ಹೊಳೆಯೇ ಹರಿಯುತ್ತದೆ..!


ಹಸ್ತಸಾಮುದ್ರಿಕ ಶಾಸ್ತ್ರ(Lines On Thumb Palmistry)ದ ಪ್ರಕಾರ, ಹೆಬ್ಬೆರಳಿನ 3ನೇ ತುದಿಯಲ್ಲಿ 'ಬಾರ್ಲಿ'ಯ ಗುರುತು ಮೂಡಿದರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ 3 ‘ಬಾರ್ಲಿ’ ಮಣಿಗಳಿದ್ದರೆ ಅದು ರಾಜಯೋಗದ ಸೂಚಕವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ ಇಂತಹ ಜನರು ತುಂಬಾ ಶ್ರೀಮಂತರಾಗುತ್ತಾರೆ. ಮತ್ತೊಂದೆಡೆ ‘ಬಾರ್ಲಿ’ಯ ಮಾಲೆಯು ಸಂಪೂರ್ಣ ಹೆಬ್ಬೆರಳನ್ನು ಸುತ್ತುವರೆದರೆ,  ವ್ಯಕ್ತಿಯ ಜೀವನವು ರಾಜನಂತೆಯೇ ವೈಭೋಗವಿರುತ್ತದೆ. ಅಲ್ಲದೆ ಇಂತಹವರು ಜೀವನದಲ್ಲಿ ಸಾಕಷ್ಟು ಪ್ರತಿಷ್ಠೆ, ಸಂಪತ್ತನ್ನು ಪಡೆಯುತ್ತಾರೆ.


ಹೆಬ್ಬೆರಳಿನ 2ನೇ ತುದಿಯಲ್ಲಿ 3 ಲಂಬ ರೇಖೆಗಳು(Jau Sign In Thumb) ಕಂಡುಬಂದರೆ ವ್ಯಕ್ತಿಯು ಐಷಾರಾಮಿ ಮನೆಯ ಆನಂದವನ್ನು ಪಡೆಯುತ್ತಾನೆ. ಮತ್ತೊಂದೆಡೆ ಇತರ ಗೆಣ್ಣಿನ ಮೇಲೆ ಹಲವಾರು ಲಂಬ ರೇಖೆಗಳು ಗೋಚರಿಸಿದರೆ ಅಂತಹ ಜನರು ಬೇಗನೆ ಇತರರನ್ನು ಅರ್ಥಮಾಡಿಕೊಳ್ಳುತ್ತಾರೆ. ಅಲ್ಲದೆ ಅವರು ವ್ಯವಹಾರದಲ್ಲಿ ಬಹಳ ಯಶಸ್ವಿಯಾಗುತ್ತಾರೆ.  


ಇದನ್ನೂ ಓದಿ: ಈ 4 ರಾಶಿಯ ಜನರು ತುಂಬಾ ಹಠಮಾರಿಗಳು, ಅವರನ್ನು ಗೆಲ್ಲುವುದು ಸುಲಭದ ಮಾತಲ್ಲ


ಹೆಬ್ಬೆರಳಿನಲ್ಲಿ ನಕ್ಷತ್ರಪುಂಜದ ಚಿಹ್ನೆ ಇದ್ದರೆ ಅಂತಹ ಜನರು ವ್ಯವಹಾರದಲ್ಲಿ ಯಶಸ್ವಿಯಾಗುತ್ತಾರೆ. ಇಂತಹ ಜನರನ್ನು ಸ್ವಾರ್ಥಿ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೇ ಇವರು ಪ್ರೀತಿಯಲ್ಲಿ ಮೋಸ ಹೋಗುವ ಸಾಧ್ಯತೆ ಇರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.