ನವ ದೆಹಲಿ: ವಾಸ್ತು ಶಾಸ್ತ್ರವು (Vastu shastra) ಪ್ರಾಚೀನ ಭಾರತದ ಧರ್ಮಗ್ರಂಥವಾಗಿದೆ.  ಇದರಲ್ಲಿ ಮನೆ, ಕಚೇರಿಗಳನ್ನೂ ನಿರ್ಮಾಣ ಮಾಡುವಾಗ ವಾಸ್ತು ಹೇಗೆ ಇರಬೇಕು ಎನ್ನುವುದನ್ನು ವಿವರಿಸಲಾಗಿದೆ.  ವಾಸ್ತು ಶಾಸ್ರ್ತ ವನ್ನು ಕ್ರಮ ಬದ್ದವಾಗಿ ಅನುಸರಿಸಿದರೆ ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.  ವಾಸ್ತು ಪ್ರಕಾರ ನಡೆದುಕೊಂಡರೆ ನಕಾರಾತ್ಮಕ ಶಕ್ತಿಯನ್ನು (Negetive energy) ತೊಡೆದು ಹಾಕಲು ಸಹಾಯ ಮಾಡುತ್ತದೆ.  ನಾವು ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬ ಮಾಹಿತಿಯೂ ವಾಸ್ತು ಶಾಸ್ತ್ರದಲ್ಲಿ ಇದೆ. ಇನ್ನು ಪೂಜಾ ಸಮಯದಲ್ಲಿಯೂ ಕೆಲ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.  


COMMERCIAL BREAK
SCROLL TO CONTINUE READING

ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬೇಡಿ : 
1. ಶಿವಲಿಂಗ ಮತ್ತು ಶಾಲಿಗ್ರಾಮ :  ನಿಮ್ಮ ಮನೆಯ ದೇವಾಲಯದಲ್ಲಿ ಶಿವಲಿಂಗ (Shivalinga) ಮತ್ತು ಶಾಲಿಗ್ರಾಮ ಇದ್ದರೆ ಅವುಗಳನ್ನು ಎಂದಿಗೂ ನೇರವಾಗಿ ನೆಲದ ಮೇಲೆ ಇಡದಂತೆ ನೋಡಿಕೊಳ್ಳಬೇಕು. ಮನೆಯ ಮಂದಿರವನ್ನು (Pooja Room)ಸ್ವಚ ಗೊಳಿಸುವ ವೇಳೆ, ಸಾಮಾನ್ಯವಾಗಿ ಜನರು  ಈ ತಪ್ಪನ್ನು ಮಾಡುತ್ತಾರೆ. ಆದುದರಿಂದ ಮನೆಯಲ್ಲಿ ಪೂಜಾ ಕೋಣೆಯನ್ನು ಶುಚಿ ಗೊಳಿಸುವ ವೇಳೆ ದೇವರ ವಿಗ್ರಹಗಳು,  ಇತ್ಯಾದಿಗಳನ್ನು ಶುಚಿಗೊಳಿಸುವಾಗ ಶಿವಲಿಂಗ ಅಥವಾ ಶಾಲಿಗ್ರಾಮವನ್ನು  ಮರದ ತುಂಡು, ತಟ್ಟೆ ಅಥವಾ ಪೂಜೆಗೆ ಬಳಸುವ ಬಟ್ಟೆಯ ಮೇಲೆ ಇರಿಸಿ. . ಶಿವಲಿಂಗವನ್ನು  ಮತ್ತು ಶಾಲಿಗ್ರಾಮವನ್ನು ನೆಲದ ಮೇಲೆ ಇಡುವುದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.


ಇದನ್ನೂ ಓದಿ : Lord Ganesha: ಈ ವಿಶಿಷ್ಟವಾದ ಗಣೇಶ ಮಂದಿರದಲ್ಲಿ ಪತ್ರದ ಮೂಲಕ ಮನಸ್ಸಿನ ಮಾತನ್ನು ಹೇಳುವ ಭಕ್ತರು


2. ದೇವರಿಗೆ ಬಳಸುವ ಹೂವು ಶಂಖ ತುಳಸಿ :  ಹೂ-ಹಾರ (Flower), ಶಂಖ, ದೀಪ, ತುಳಸಿ ಎಲೆ (Tulsi leaves), ಕರ್ಪೂರ ಮುಂತಾದ ವಸ್ತುಗಳನ್ನು ಎಂದಿಗೂ ನೆಲದ ಮೇಲೆ ಇಡಬಾರದು. ಪೂಜೆಗೆ ಬಳಸುವ ತಟ್ಟೆಯಲ್ಲಿ ಇರಿಸಿ. ವಾಸ್ತು ಪ್ರಕಾರ ಈ ವಸ್ತುಗಳನ್ನು ನೆಲದ ಮೇಲೆ ಇಡುವುದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ.


3. ರತ್ನಗಳು ಮತ್ತು ಆಭರಣಗಳು - ಚಿನ್ನ, ಬೆಳ್ಳಿ, ವಜ್ರ, ಮುತ್ತು, ಪಚ್ಚೆ - ಈ ಹರಳುಗಳು ಬೇರೆ ಬೇರೆ ಗ್ರಹಕ್ಕೆ ಸಂಬಂಧ ಪಟ್ಟದ್ದಾಗಿದೆ.  ಆದ್ದರಿಂದ, ವಾಸ್ತು ಶಾಸ್ತ್ರವನ್ನು ನಂಬುವುದಾದರೆ, ಇವುಗಳನ್ನು ಕೂಡಾ ನೇರವಾಗಿ ನೆಲದ ಮೇಲೆ ಇಡಬಾರದು. ಆಭರಣಗಳನ್ನು (Ornaments) ನೆಲದ ಮೇಲೆ ಇಡುವುದನ್ನು ಸಹ ಶುಭವೆಂದು ಪರಿಗಣಿಸಲಾಗುವುದಿಲ್ಲ ಆದರೆ ಒಡವೆಗಳನ್ನು ನೆಲದ ಮೇಲೆ ಇಡುವುದು ಎಂದರೆ ಆಡು ಆಭರಣಗಳಿಗೆ ಅವಮಾನ ಮಾಡಿದಂತೆ. ಈ ಕಾರಣಕ್ಕೆ ಆಭರನಗಳನ್ನು  ನೆಲದ ಮೇಲೆ ಇಡಬಾರದು.  ಅವುಗಳನ್ನು ಯಾವಾಗಲೂ ಯಾವುದೇ ಬಟ್ಟೆ ಅಥವಾ ಪೆಟ್ಟಿಗೆಯ ಮೇಲೆ ಇಡಬೇಕು.


ಇದನ್ನೂ ಓದಿ :  ಈ ದಿನ ಗಣೇಶನನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ದಿಸುವುದರಲ್ಲಿ ಅನುಮಾನವೇ ಇಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.