Mahashivaratri : ಮಹಾಶಿವನ ಪೂಜೆಯಲ್ಲಿ ಈ ಐದು ವಸ್ತುಗಳನ್ನು ಯಾವತ್ತೂ ಬಳಸಬೇಡಿ

ಶಿವಲಿಂಗದ ಪೂಜೆ ವೇಳೆ ಕೆಲ ವಸ್ತುಗಳ ಬಳಕೆ ನಿಷೇಧ. ಹಾಗಾಗಿ ನೀವು ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ (Shivalinga) ಪೂಜೆ, ಅರ್ಚನೆ ಮಾಡುವ ವೇಳೆ,  ತಪ್ಪಿಯೂ ಈ ಐದು ವಸ್ತುಗಳನ್ನು ಬಳಸಬೇಡಿ.

Written by - Ranjitha R K | Last Updated : Mar 5, 2021, 09:29 AM IST
  • ಮಹಾಶಿವರಾತ್ರಿಯಂದು ಶಿವನನ್ನು ಪೂಜಿಸುವುದು, ಉಪವಾಸ ಮಾಡುವುದು ವಿಶೇಷ
  • ಶಿವನ ಪೂಜೆಯಲ್ಲಿ ಕೇದಗೆ, ಎಳ್ಳು, ತುಳಸಿ ಬಳಸಬಾರದು
  • ಶಿವಪೂಜೆಯ ಸಮಯದಲ್ಲಿ ಕಪ್ಪು ಬಟ್ಟೆ ಧರಿಸಬಾರದು
Mahashivaratri : ಮಹಾಶಿವನ ಪೂಜೆಯಲ್ಲಿ ಈ ಐದು ವಸ್ತುಗಳನ್ನು ಯಾವತ್ತೂ ಬಳಸಬೇಡಿ title=
ಶಿವನ ಪೂಜೆಯಲ್ಲಿ ಕೇದಗೆ, ಎಳ್ಳು, ತುಳಸಿ ಬಳಸಬಾರದು (file photo)

ನವದೆಹಲಿ : ಫಾಲ್ಗುಣ ಮಾಸದ  ಕೃಷ್ಣ ಪಕ್ಷದ ಚತುರ್ದಶಿ ದಿನಾಂಕದಂದು ಮಹಾಶಿವರಾತ್ರಿಯ (Mahashivaratri) ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಶಿವ  ದೇವಿ ಪಾರ್ವತಿಯನ್ನು ಮದುವೆಯಾದರು ಎಂದು ನಂಬಲಾಗಿದೆ.  ಈ ಕಾರಣಕ್ಕಾಗಿಯೇ ಕೆಲ ಭಾಗಗಳಲ್ಲಿ ಶಿವರಾತ್ರಿಯ ದಿನದಂದು ಮಹಾದೇವನ ದಿಬ್ಬಣವನ್ನು ಕರೆದೊಯ್ಯಲಾಗುತ್ತದೆ. ಮಹಾಶಿವರಾತ್ರಿಯಂದು ಶಿವನನ್ನು ಪೂಜಿಸುವುದು (Shiv Pooja) ಮತ್ತು ಉಪವಾಸ ಮಾಡುವುದು ಸಹ ವಿಶೇಷ ಮಹತ್ವವನ್ನು ಹೊಂದಿದೆ. ಶಿವನನ್ನು ಬೋಲೆನಾಥ ಎಂದೂ ಕರೆಯುತ್ತಾರೆ. ಯಾಕೆಂದರೆ ಈಶ್ವರನು ಭಕ್ತರ ಭಕ್ತಿಗೆ ಅತ್ಯಂತ ಬೇಗನೆ ಪ್ರಸನ್ನನಾಗುತ್ತಾನೆ. ಆದರೆ ಶಿವಲಿಂಗದ ಪೂಜೆ ವೇಳೆ ಕೆಲ ವಸ್ತುಗಳ ಬಳಕೆ ನಿಷೇಧ. ಹಾಗಾಗಿ ನೀವು ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ (Shivalinga) ಪೂಜೆ, ಅರ್ಚನೆ ಮಾಡುವ ವೇಳೆ,  ತಪ್ಪಿಯೂ ಈ ಐದು ವಸ್ತುಗಳನ್ನು ಬಳಸಬೇಡಿ.

1. ಕೇದಗೆಯ ಹೂವು :  
ಶಿವನಿಗೆ ತುಂಬೆ, ಧಾತುರಾ, ಅಪರಾಜಿತಾ, ನಾಗ ಕೇಸರಿ, ಮುಂತಾದ ಹೂವುಗಳನ್ನು ಅರ್ಪಿಸಲಾಗುತ್ತದೆ. ಮಹಾಶಿವನಿಗೆ (Lord Shiva) ಬಿಳಿ ಬಣ್ಣದ ಹೂವುಗಳು ಬಹಳ ಪ್ರಿಯ ಎನ್ನುತ್ತಾರೆ. ಆದರೂ ಕೇದಗೆ ಹೂವನ್ನು ಶಿವನ ಆರಾಧನೆಯಲ್ಲಿ ಅರ್ಪಿಸಬಾರದು. ದಂತಕಥೆಯ ಪ್ರಕಾರ, ಬ್ರಹ್ಮ ಹೇಳಿನ ಸುಳ್ಳಿನಲ್ಲಿ ಕೇದಗೆ ಹೂವು  ಬ್ರಹ್ಮ ದೇವನ್ನನು  ಬೆಂಬಲಿಸಿತ್ತಂತೆ. ಈ ಕಾರಣದಿಂದ ಶಿವ ಕೇದಗೆ ಹೂವನ್ನು ಶಪಿಸುತ್ತಾನೆ. ಈ ಕಾರಣಕ್ಕಾಗಿ, ಶಿವನ ಆರಾಧನೆಯಲ್ಲಿ (Shiva pooja) ಕೇದಗೆ ಹೂವು  ಬಳಸುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ : Mahashivaratri Muhurtha: ಮಾರ್ಚ್ 11ಕ್ಕೆ ಮಹಾಶಿವರಾತ್ರಿ: ಮಹಾಶಿವನ ಪೂಜೆಗೆ ಇಲ್ಲಿದೆ ಶುಭಮುಹೂರ್ತ

2. ಶಿವ ಪೂಜೆಯಲ್ಲಿ ಎಳ್ಳು ಬಳಕೆ ಬೇಡ : 
ಶಿವನ ಆರಾಧನೆಯಲ್ಲಿ ಎಳ್ಳು ಬಳಸುವುದಿಲ್ಲ. ಇದಕ್ಕೆ ಕಾರಣವೆಂದರೆ ಎಳ್ಳು,  ವಿಷ್ಣುವಿನ (Lord Vishnu) ಕಲ್ಮಷದಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಹಾಗಾಗಿ, ವಿಷ್ಣುವಿನ ಪೂಜೆಯ ಸಂದರ್ಭದಲ್ಲಿ ಎಳ್ಳು ಸಮರ್ಪಿಸಲಾಗುತ್ತದೆ. ಶಿವನ ಪೂಜೆಗೆ ಅಲ್ಲ. 

3. ತುಳಸಿಯನ್ನು ಬಳಸಬೇಡಿ :
ತುಳಸಿಯನ್ನು (tulsi) ಶಿವಲಿಂಗ ಅಥವಾ ಶಿವನ ಆರಾಧನೆಯ ಸಮಯದಲ್ಲಿ ಎಂದಿಗೂ ಬಳಸಬಾರದು. ಇದಕ್ಕೆ ಕಾರಣ ತುಳಸಿಗಿರುವ ಶಾಪ. ತುಳಸಿ ಜಲಂದರ್ ಎಂಬ ಅಸುರನ ಪತ್ನಿ ವೃಂದಳ ಅಂಶ. ತುಳಸಿಯನ್ನು ವಿಷ್ಣು ತನ್ನ ಹೆಂಡತಿಯಾಗಿ ಸ್ವೀಕರಿಸುತ್ತಾನೆ. ಆದ್ದರಿಂದ, ಶಿವನ ಆರಾಧನೆಯಲ್ಲಿ ತುಳಸಿಯನ್ನು ಬಳಸಲಾಗುವುದಿಲ್ಲ.

ಇದನ್ನೂ ಓದಿ : ದೇಶದಲ್ಲಿ ಶಿವನ 12 ಜ್ಯೋತಿರ್ಲಿಂಗಗಳು ಎಲ್ಲಿವೆ? ಅವುಗಳ ಮಹತ್ವವೇನು? ಇಲ್ಲಿದೆ ಮಹತ್ವದ ಮಾಹಿತಿ

4. ಶಂಖದಿಂದ ನೀರನ್ನು ಅರ್ಪಿಸಬೇಡಿ :
ಶಿವನನ್ನು ಆರಾಧಿಸುವಾಗ, ಶಿವಲಿಂಗಕ್ಕೆ ಶಂಖದಿಂದ ನೀರನ್ನು ಎಂದಿಗೂ ಅರ್ಪಿಸಬಾರದು. ಪುರಾಣಗಳ ಪ್ರಕಾರ, ಶಿವನು ಶಂಖಚೂಡ್ ಎಂಬ ರಾಕ್ಷಸನನ್ನುಕೊಲ್ಲುತ್ತಾನೆ. ಶಂಖ, ಶಂಖಚೂಡನ ಅಂಶ ಎನ್ನಲಾಗಿದೆ. ಆದ್ದರಿಂದ, ಶಿವನ ಆರಾಧನೆಯಲ್ಲಿ ಶಂಖದಿಂದ ನೀರನ್ನು ಅರ್ಪಿಸುವುದಿಲ್ಲ.

5. ಎಳನೀರಿನ ಅಭಿಷೇಕ ಬೇಡ : 
ಶಿವರಾತ್ರಿ ದಿನದಂದು  ಶಿವಲಿಂಗದ ಮೇಲೆ ಎಳನೀರು (Coconut water) ಅರ್ಪಿಸಬಾರದು.  ಶಿವ ವಿಗ್ರಹದ ಮೇಲೆ ತೆಂಗಿನಕಾಯಿ ಅರ್ಪಿಸಬಹುದು ಆದರೆ ಎಳನೀರು ಅಲ್ಲ. 

ಈ ವಿಷಯಗಳನ್ನು ಸಹ ನೆನಪಿನಲ್ಲಿಡಿ:
- ಶಿವನಿಗೆ ಬಿಲ್ವ ಪತ್ರೆ ಎಂದರೆ ಬಹಳ ಪ್ರಿಯ. ಆದರೆ ಬಿಲ್ವಪತ್ರೆ ಸಮರ್ಪಿಸುವಾಗ, ಮುರಿದಿರುವ ಪತ್ರೆಯನ್ನು ಅರ್ಪಿಸಬೇಡಿ. ಬಿಲ್ವಪತ್ರೆಯ (Bilva pathra) ನಯವಾದ ಭಾಗ ಶಿವಲಿಂಗವನ್ನು ಸ್ಪರ್ಶಿಸಬೇಕು.
- ನೀಲ್ ಕಮಲ್ ಶಿವನ ನೆಚ್ಚಿನ ಹೂ ಎಂದು ಪರಿಗಣಿಸಲಾಗಿದೆ. ಬಾಡಿ ಹೋದ ಹೂವುಗಳನ್ನು ಶಿವನಿಗೆ ಅರ್ಪಿಸಬೇಡಿ. 
- ಶಿವ ಆರಾಧನೆಯ ಸಮಯದಲ್ಲಿ, ಅಕ್ಕಿ (Rice)ಅರ್ಪಿಸುವಾಗ, ಒಂದು ಅಕ್ಕಿ ಕೂಡ ಮುರಿಯದಂತೆ ನೋಡಿಕೊಳ್ಳಿ. ಮುರಿದ ಅಕ್ಕಿ ಅಪೂರ್ಣ ಮತ್ತು ಅಶುದ್ಧ ಎಂದು ನಂಬಲಾಗುತ್ತದೆ. 
- ಅರಿಶಿನ ಮತ್ತು ಕುಂಕುಮ ತ್ಪತ್ತಿಯ ಸಂಕೇತವಾಗಿದೆ. ಅವುಗಳು  ವಿಷ್ಣುವಿಗೆ ಸಂಬಂಧಿಸಿವೆ. ಶಿವನ ಆರಾಧನೆಯಲ್ಲಿ ಬಳಸಲಾಗುವುದಿಲ್ಲ.
- ಶಿವನ ಆರಾಧನೆಯ ಸಮಯದಲ್ಲಿ ಕಪ್ಪು ಬಟ್ಟೆ (Black dress) ಧರಿಸಬೇಡಿ.

ಇದನ್ನೂ ಓದಿ : ಮಂಗಳ ದೋಷ ನಿವಾರಣೆಗೆ ವಿಷ್ಣು ಪೂಜೆಯ ಸಂದರ್ಭದಲ್ಲಿ ಈ ಗಿಡಕ್ಕೆ ವಿಶೇಷ ಮಹತ್ವ ನೀಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News