ದುಬೈನಲ್ಲಿ ಮನೆ ಖರೀದಿಸುವವರಲ್ಲಿ ಭಾರತೀಯರು ಮತ್ತೊಮ್ಮೆ ನಂಬರ್ 1 ಆಗಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿ ಬೆಟರ್ ಹೋಮ್ಸ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ಖರೀದಿಸುತ್ತಿದ್ದಾರೆ. ತನ್ನ ಸಮೀಕ್ಷೆಯಲ್ಲಿ, ಕಂಪನಿಯು ಈ ವರ್ಷದ ಮೊದಲಾರ್ಧದಲ್ಲಿ ದುಬೈನಲ್ಲಿ ಆಸ್ತಿಯನ್ನು ಖರೀದಿಸುವ ಜನರ ನಡವಳಿಕೆಯನ್ನು ವಿಶ್ಲೇಷಿಸಿದೆ. ಭಾರತೀಯರ ನಂತರ ಕ್ರಮವಾಗಿ ಬ್ರಿಟಿಷ್ ಮತ್ತು ಇಟಾಲಿಯನ್ ಮೂಲದವರೂ ಇದ್ದರು. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವು ರಷ್ಯನ್ನರು ಪಡೆದುಕೊಂಡರೆ, ಫ್ರೆಂಷರು ಐದನೇ ಸ್ಥಾನದಲ್ಲಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Vikrant Rona : ಧರೆಗುರುಳಿದ ‘ವಿಕ್ರಾಂತ್ ರೋಣ’ ಕಟೌಟ್..!


ಸಮೀಕ್ಷೆಯ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ರಷ್ಯನ್ನರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ರಷ್ಯನ್ನರು ಈ ಬಾರಿ ದುಬೈನಲ್ಲಿ ಅಪಾರ ಪ್ರಮಾಣದ ಆಸ್ತಿ ಖರೀದಿ ಮಾಡಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಕಳೆದ ವರ್ಷದ ಸಮೀಕ್ಷೆಯಲ್ಲಿ ಬ್ರಿಟನ್, ಇಟಲಿ, ಚೀನಾ ಮತ್ತು ಫ್ರಾನ್ಸ್ ನಂತರದ ಸ್ಥಾನದಲ್ಲಿ ಭಾರತವಿತ್ತು. 


ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಈ ವರ್ಷ ಅನೇಕ ಯುರೋಪಿಯನ್ನರು ದುಬೈಗೆ ವಲಸೆ ಹೋಗುತ್ತಿದ್ದಾರೆ ಎಂದು ಬೆಟರ್ ಹೋಮ್ಸ್ ಸಂಸ್ಥೆ ಹೇಳಿದೆ. ತಮ್ಮ ದೇಶಗಳಲ್ಲಿ ಹೊರೆಯಾಗಿ ಪರಿಣಮಿಸಿರುವ ತೆರಿಗೆ ನೀತಿಗಳಿಂದ ಅನೇಕರು ವಲಸೆ ಹೋಗುವ ನಿರ್ಧಾರ ಕೈಗೊಂಡಿದ್ದಾರೆ. 


ಇದನ್ನೂ ಓದಿ: Paperless Banking: ಬ್ಯಾಂಕ್‌ಗಳಲ್ಲಿ ‘ಪೇಪರ್’ ಬಳಕೆ ಬಂದ್, ‘ಇ-ರಶೀದಿ ನೀಡುವಂತೆ RBI ಆದೇಶ


ಕೆಲ ನಿರ್ಬಂಧಗಳಿಂದಾಗಿ ಅನೇಕ ಚೀನಿಯರು ದುಬೈನಲ್ಲಿ ತಮ್ಮ ಹೂಡಿಕೆಯನ್ನು ಕಡಿಮೆ ಮಾಡಿದ್ದಾರೆ ಎಂದು ಕಂಪನಿ ಹೇಳಿದೆ. ಈ ಸಮೀಕ್ಷೆಯ ಪ್ರಕಾರ, ಮನೆಗಳನ್ನು ಖರೀದಿಸುವವರಲ್ಲಿ ಹೂಡಿಕೆದಾರರ ಪಾಲು ಶೇಕಡಾ 68 ರಷ್ಟಿದೆ. 32 ರಷ್ಟು ಜನರು ವಾಸಿಸಲು ಮನೆಗಳನ್ನು ಖರೀದಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.