Vikrant Rona : ಧರೆಗುರುಳಿದ ‘ವಿಕ್ರಾಂತ್ ರೋಣ’ ಕಟೌಟ್..!

ಬೆಂಗಳೂರಿನ ಊರ್ವಶಿ ಥಿಯೇಟರ್‌ ಬಳಿ ಬೃಹತ್‌ ಗಾತ್ರದ ‘ವಿಕ್ರಾಂತ್‌ ರೋಣ’ ಕಟೌಟ್‌ ಧರೆಗುರುಳಿದೆ.

Written by - Zee Kannada News Desk | Last Updated : Jul 30, 2022, 09:35 AM IST
  • ಬೆಂಗಳೂರಿನ ಊರ್ವಶಿ ಥಿಯೇಟರ್‌ ಬಳಿ ಬೃಹತ್‌ ಗಾತ್ರದ ‘ವಿಕ್ರಾಂತ್‌ ರೋಣ’ ಕಟೌಟ್‌ ಧರೆಗುರುಳಿದೆ
  • 20 ಅಡಿಗೂ ಹೆಚ್ಚು ಎತ್ತರವಿರುವ ಕಟೌಟ್‍ಗೆ ದೊಡ್ಡ ದೊಡ್ಡ ಹಾರಗಳನ್ನು ಹಾಕಲಾಗಿತ್ತು
  • ಶುಕ್ರವಾರ ಸುರಿದ ಗಾಳಿ ಸಹಿತ ಮಳೆ ಪರಿಣಾಮ ಧರೆಗುರುಳಿದ ‘ವಿಕ್ರಾಂತ್ ರೋಣ’ ಕಟೌಟ್
Vikrant Rona : ಧರೆಗುರುಳಿದ ‘ವಿಕ್ರಾಂತ್ ರೋಣ’ ಕಟೌಟ್..! title=
ಧರೆಗುರುಳಿದ ‘ವಿಕ್ರಾಂತ್ ರೋಣ’ ಕಟೌಟ್  

ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ ಬಿಡುಗಡೆಯಾದ ಎರಡೇ ದಿನಗಳಲ್ಲಿ ಹಲವು ದಾಖಲೆಗಳನ್ನು ಉಡೀಸ್ ಮಾಡಿದೆ. 2D ಮತ್ತು 3Dಯಲ್ಲಿ ಬಿಡುಗಡೆಯಾಗಿರುವ ‘ವಿಕ್ರಾಂತ್ ರೊಣ’ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಸಿನಿಮಾ ರಿಲೀಸ್‍ಗೂ ಮುನ್ನವೇ ದೊಡ್ಡ ದೊಡ್ಡ ಕಟೌಟ್‍ ಮೂಲಕ ‘ವಿಕ್ರಾಂತ್ ರೋಣ’ ಗಮನ ಸೆಳೆದಿತ್ತು.

ಧರೆಗುರುಳಿದ ‘ವಿಕ್ರಾಂತ್ ರೋಣ’ ಕಟೌಟ್..!

ಹೌದು, ಬೆಂಗಳೂರಿನ ಊರ್ವಶಿ ಥಿಯೇಟರ್‌ ಬಳಿ ಬೃಹತ್‌ ಗಾತ್ರದ ‘ವಿಕ್ರಾಂತ್‌ ರೋಣ’ ಕಟೌಟ್‌ ಧರೆಗುರುಳಿದೆ. ಚಿತ್ರಮಂದಿರದ ಬಳಿ 20 ಅಡಿಗೂ ಹೆಚ್ಚು ಎತ್ತರವಿರುವ ಕಟೌಟ್‌ ಹಾಕಲಾಗಿತ್ತು. ಕಿಚ್ಚನ ಅಭಿಮಾನಿಗಳು ಈ ಕಟೌಟ್‍ಗೆ ದೊಡ್ಡ ದೊಡ್ಡ ಹೂವಿನ ಹಾರ ಹಾಕಿದ್ದರು.

ಇದನ್ನೂ ಓದಿ: ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಶಕೀರಾಗೆ 8 ವರ್ಷಗಳ ಜೈಲು ಶಿಕ್ಷೆ

ಹೂವಿನ ಹಾರಗಳ ಭಾರಕ್ಕೆ ‘ವಿಕ್ರಾಂತ್ ರೋಣ’ ಕಟೌಟ್‍ ಮುರಿದು ಲಾಲ್‌ಬಾಗ್‌ ಮುಖ್ಯರಸ್ತೆಗೆ ಬಿದ್ದಿದೆ. ಶುಕ್ರವಾರ ಸಂಜೆ ಗಾಳಿ ಸಹಿತ ಮಳೆಯಾಗಿದೆ. ಜೋರಾಗಿ ಬೀಸಿದ ಗಾಳಿ ಮತ್ತು ಹೂವಿನ ಹಾರದ ಭಾರಕ್ಕೆ ಕಟೌಟ್ ಮುರಿದು ರಸ್ತೆ ಮೇಲೆ ಬಿದ್ದಿದೆ.

ರಸ್ತೆಗೆ ಧಿಡೀರ್ ಕಟೌಟ್ ಬಿದ್ದ ಹಿನ್ನಲೆ ಈ ರಸ್ತೆಯಲ್ಲಿ ಟ್ರಾಫಿಕ್ ಜಾಂ ಆಗಿತ್ತು. ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಯಾರೂ ಇಲ್ಲದ ಸಂದರ್ಭದಲ್ಲಿ ಕಟೌಟ್ ಬಿದ್ದಿದ್ದು, ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಘಟನೆಯಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲವೆಂದು ತಿಳಿದುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ವಿಲ್ಸನ್ ಗಾರ್ಡನ್ ಪೊಲೀಸರು ಥಿಯೇಟರ್ ಸಿಬ್ಬಂದಿ ಮೂಲಕ ಮುರಿದುಬಿದ್ದ ಕಟೌಟ್ ಅನ್ನು ತೆರವುಗೊಳಿಸಿದ್ದಾರೆ.  

ಇದನ್ನೂ ಓದಿ: ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ'..! ಮೊದಲ ದಿನವೇ ಹಲವು ದಾಖಲೆ ಉಡೀಸ್..!‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News