Animal Fighting Video : ಸಿಂಹವನ್ನು ಕಾಡಿನ ರಾಜ ಎನ್ನುತ್ತಾರೆ. ಆತನ ಗಾಂಭೀರ್ಯಕ್ಕೆ,  ಎಂಥವರೇ ಆದರೂ ನಡುಗಿ ಹೋಗುತ್ತಾರೆ. ಪ್ರಾಣಿಗಳು ಕೂಡಾ ಅಷ್ಟೇ ಸಿಂಹದ ಮುಂದೆ ಸುಲಭವಾಗಿ ಶರಣಾಗಿ ಬಿಡುತ್ತವೆ. ಈ ಕಾರಣದಿಂದಲೇ ಸಿಂಹ ತನಗೆ ಬೇಕಾದ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡಿ ಬಿಡುತ್ತದೆ.  ಆದರೂ ಒಮ್ಮೊಮ್ಮೆ ಕೆಲವು ಪ್ರಾಣಿಗಳು ಸಿಂಹವನ್ನೇ ಗೊಂದಲಕ್ಕೆ ದೂಡಿ ಬಿಡುತ್ತವೆ. ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋ ವೊಂದು ಇದೀಗ ವೈರಲ್ ಆಗುತ್ತಿದೆ.  ಈ ವಿಡಿಯೋ ನೋಡುವಾಗ ಒಮ್ಮೆಗೆ ಎದೆ ನಡುಗಿ ಬಿಡುತ್ತದೆ.  


COMMERCIAL BREAK
SCROLL TO CONTINUE READING

ಸಿಂಹದ ಮೇಲೆ ಆಕ್ರಮಣ : 
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕಾಡಿನಲ್ಲಿ ಕಾಡೆಮ್ಮೆಯೊಂದು ಕುಳಿತಿರುವುದನ್ನು ಕಾಣಬಹುದು. ಆಗ ದೂರದಲ್ಲಿರುವ ಸಿಂಹದ ದೃಷ್ಟಿ  ಆ ಕಾಡೆಮ್ಮೆ ಮೇಲೆ ಬೀಳುತ್ತದೆ. ಕಾಡೆಮ್ಮೆಯನ್ನು ಬೇಟೆಯಾಡುವ ಉದ್ದೇಶದಿಂದ ಸಿಂಹ ಎಮ್ಮೆಯ ಬಳಿಗೆ ಬರುತ್ತದೆ. ಇನ್ನೇನು ಎಮ್ಮೆಯ ಮೇಲೆ ದಾಳಿ ಮಾಡಬೇಕು ಎನ್ನುವಷ್ಟರಲ್ಲಿ ಅದೆಲ್ಲಿತ್ತೋ ಆ ಎಮ್ಮೆಯ ಸ್ನೇಹಿತ ಕಾಡೆಮ್ಮೆ ರಭಸವಾಗಿ ಓಡಿ ಬರುತ್ತದೆ. ಓಡಿ ಬರುವುದು ಮಾತ್ರವಲ್ಲ ಸಿಂಹವನ್ನು ತನ್ನ ಕೊಂಬಿನಿಂದ ಎತ್ತಿ ನೆಲಕ್ಕೆ ಉರುಳಿಸುತ್ತದೆ. ಸಿಂಹ ಕಾಡೆಮ್ಮೆ ಈ ರೀತಿ ದಾಳಿ ಮಾಡಿಬಿಡಬಹುದು ಎಂದು ಊಹಿಸಿಯೂ ಇರಲಿಕ್ಕಿಲ್ಲ. 


ಇದನ್ನೂ ಓದಿ : Viral Video : ಸುಂದರಿ ಯುವತಿಯನ್ನು ಮದುವೆಯಾದ ಬಚ್ಚು ಬಾಯಿ ಮುದುಕ.. ಜೋಡಿ ನೋಡಿ ಬೆಚ್ಚಿಬಿದ್ದ ಜನ


 



ಇದನ್ನೂ ಓದಿ : Viral Video : ಆನೆಗಳ ಹಿಂಡಿನ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕನಿಗೆ ಪಾಠ ಕಲಿಸಿದ ಗಜರಾಜ


 ಬಂದ ದಾರಿಗೆ ಸುಂಕ ಇಲ್ಲ ಎಂದು ಕಾಲ್ಕಿತ್ತ ಕಾಡಿನ ರಾಜ : 
ಕಾಡಿನ ರಾಜ ಎಂದು ಬೀಗುವ ಸಿಂಹದ ಸೊಕ್ಕನ್ನು ಮಾತ್ರ ಈ ಎಮ್ಮೆ ಕ್ಷಣ ಮಾತ್ರದಲ್ಲಿ ಮುರಿದು ಬಿಡುತ್ತದೆ. ಎಮ್ಮೆಯ ದಾಳಿಯಿಂದ ಗಾಯಗೊಂಡ ಸಿಂಹ ಬಂದ ದಾರಿಗೆ ಸುಂಕ ಇಲ್ಲ ಎಂದು ಅಲ್ಲಿಂದ ಜಾಗ ಖಾಲಿ ಮಾಡಿಬಿಡುತ್ತದೆ.  africanwildlife1 ಹೆಸರಿನ Instagram ಖಾತೆಯಿಂದ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.