Children fight with Snake : ಹಾವು ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ಮೊದಲ ಮಾತು ಭಯ. ಚಲನಚಿತ್ರಗಳಲ್ಲಿಯೂ ಸಹ ಅಪಾಯಕಾರಿ ಹಾವುಗಳ ದೃಶ್ಯಗಳನ್ನು ನೋಡಿದಾಗ ನೀವು ತುಂಬಾ ಭಯಪಡುತ್ತೀರಿ. ಆದರೆ ಹಾವು ನಿಜವಾಗಿಯೂ ಹೊರಬಂದು ನಮ್ಮ ಪ್ರೀತಿಪಾತ್ರರನ್ನು ಜೀವಂತವಾಗಿ ನುಂಗಿದರೆ ಏನು? ಹೀಗೆ ಆಲೋಚಿಸದರೆ ಎದೆ ಝಲ್ ಎನ್ನುತ್ತೆ. ಆದರೆ ಆರಾಮವಾಗಿ ನಡೆದುಕೊಂಡು ಹೋಗುತ್ತಿದ್ದ ನಾಯಿಯ ಮೇಲೆ ದೈತ್ಯ ಹೆಬ್ಬಾವು ದಾಳಿ ನಡೆಸಿತು. ಹೆಬ್ಬಾವಿನ ಬಾಯಿಗೆ ಸಿಲುಕಿದ ನಾಯಿಯ ವಿಲ ವಿಲ ಒದ್ದಾಟ ಹೃದಯ ಕಲಕುವಂತಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದುವರೆಗೆ ಲಕ್ಷಾಂತರ ಮಂದಿ ನೋಡಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೋಡಿದಾಗ ಅಯ್ಯೋ ಎನಿಸುತ್ತದೆ. ಮುದ್ದಾದ ಪುಟ್ಟ ನಾಯಿಯುಬಯಲಿನಲ್ಲಿ ಆರಾಮವಾಗಿ ಓಡಾಡುತ್ತಿದ್ದಾಗ, ಬೇಟೆಯನ್ನು ಹುಡುಕುತ್ತಾ ಅಲೆದಾಡುತ್ತಿದ್ದ ದೈತ್ಯ ಹೆಬ್ಬಾವು ಅದರ ಮೇಲೆ ದಾಳಿ ಮಾಡಿದೆ. ತನ್ನನ್ನು ತಾನು ಉಳಿಸಿಕೊಳ್ಳುವ ಮೊದಲೇ ನಾಯಿಯ ಮೇಲೆ ಹೆಬ್ಬಾವು ದಾಳಿ ನಡೆಸಿಬಿಟ್ಟಿದೆ. ಹಸಿದ ಹೆಬ್ಬಾವು ನಾಯಿಗೆ ನುಂಗಲು ಮುಂದಾದಾಗ ಅದನ್ನು ಸಾಕಿದ ಈ ಪುಟ್ಟ ಬಾಲಕರಿ ದೇವರಂತೆ ಅಲ್ಲಿಗೆ ಬಂದಿದ್ದಾರೆ.
ಇದನ್ನೂ ಓದಿ: ಗಿಳಿ ಶಿಳ್ಳೆ ಹೊಡೆದಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್!
ಹೆಬ್ಬಾವಿನ ಜೊತೆ ಪುಟ್ಟ ಮಕ್ಕಳ ಫೈಟ್ :
These kids 👏👏 pic.twitter.com/fa2yQH71Eo
— figen sezgin (@_figensezgin) August 5, 2022
ದೈತ್ಯ ಹೆಬ್ಬಾವಿಗೆ ಹೆದರದೆ, ಅದರ ಪುಟಾಣಿ ಮಕ್ಕಳು ತಕ್ಷಣವೇ ನಾಯಿಯನ್ನು ಉಳಿಸಲು ಪ್ರಾರಂಭಿಸಿದ್ದಾರೆ. ಕಬ್ಬಿಣದ ರಾಡ್‌ನಿಂದ ಹೆಬ್ಬಾವಿನ ಮೇಲೆ ಹೊಡೆಯಲು ಅರಂಭಿಸಿದ್ದಾರೆ. ಇಲ್ಲಿ ಇಬ್ಬರು ಪುಟ್ಟ ಮಕ್ಕಳೂ ನಾಯಿಯ ಸಹಾಯಕ್ಕೆ ಬಂದರು. ಈ ಭಯಾನಕ ವಿಡಿಯೋದಲ್ಲಿ ಬಾಲಕರು ನಿರಂತರವಾಗಿ ಹಾವಿನ ಮೇಲೆ ದಾಳಿ ಮಾಡುವುದನ್ನು ನೋಡಬಹುದು ಮತ್ತು ಕೊನೆಯಲ್ಲಿ ಹೇಗಾದರೂ ಅವನ ಬಾಯಿಯಿಂದ ನಾಯಿಯನ್ನು ಬಿಡಿಸಲು ಹೋರಾಡುವುದನ್ನು ಕಾಣಬಹುದು. ಸ್ವಲ್ಪ ಹೊತ್ತಿನ ಬಳಿಕ ಹೆಬ್ಬಾವು ನಾಯಿಯನ್ನು ಬಿಟ್ಟಿದೆ.
ತಮ್ಮ ನಾಯಿಯನ್ನು ಬದುಕಿಸಲು ದೈತ್ಯ ಹೆಬ್ಬಾವಿನ ಜೊತೆ ಈ ಪುಟ್ಟ ಮಕ್ಕಳು ಮಾಡುವ ಹೋರಾಟ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಕ್ಕಳ ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಎಲ್ಲೆಡೆ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಇದನ್ನು @_figensezgin ಹೆಸರಿನ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಇದನ್ನೂ ಓದಿ: Viral Video: ತರಗತಿಯಲ್ಲಿಯೇ ಜುಟ್ಟು ಹಿಡಿದು ಜಗಳವಾಡಿದ ವಿದ್ಯಾರ್ಥಿನಿಯರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.