Elephant viral video : ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರಲ್ಲಿ ಸೆಲ್ಫಿ ಕ್ರೇಜ್ ಹೆಚ್ಚುತ್ತಿದೆ. ಸಮಯ ಸಂದರ್ಭ ಏನೇ ಇರ್ಲಿ ಸೆಲ್ಫಿ ಬೇಕು ಎನ್ನುವವರು ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಇನ್ನು ಸೆಲ್ಫಿ ಹುಚ್ಚಿಗೆ ಬಿದ್ದು ಪ್ರಾಣ ಕಳೆದುಕೊಂಡಂತಹ ಪ್ರಕರಣಗಳನ್ನು ಕೂಡಾ ನಾವೂ ನೋಡಿರುತ್ತೇವೆ, ಕೇಳಿರುತ್ತೇವೆ. ಅಂತಹುದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಲ್ಲಿ ಯುವಕನೊಬ್ಬ ಸೆಲ್ಫಿಗಾಗಿ ಆನೆಗಳ ಹಿಂದೆ ಬಿದ್ದಿದ್ದಾನೆ.
ಆನೆಯೊಂದಿಗೆ ಸೆಲ್ಫಿ :
ಆನೆಗಳ ಹಿಂಡು ಬರುತ್ತಿರುವುದನ್ನು ಗಮನಿಸಿದ ಯುವಕನೊಬ್ಬ ಆನೆಗಳ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕು ಅಂದು ಕೊಳ್ಳುತ್ತಾನೆ. ಆದರೆ ಈ ಹಿಂಡಿನಲ್ಲಿ ಮರಿಯಾನೆ ಕೂಡಾ ಇದೆ ಎನ್ನುವುದನ್ನು ಆ ಯುವಕರು ಗಮನಿಸಿದಾರೋ ಇಲ್ಲವೋ? ಯಾಕೆಂದರೆ ಯಾವುದೇ ಪ್ರಾಣಿಯಾಗಿರಲಿ ತನ್ನ ಮರಿಯ ಬಳಿ ಯಾರೇ ಬಂದರೂ ಸುಮ್ಮನೆ ಬಿಡುವುದಿಲ್ಲ. ಇದಕ್ಕೆ ಆನೆ ಕೂಡಾ ಹೊರತಾಗಿಲ್ಲ.
ಇದನ್ನೂ ಓದಿ : ಈಜುಡುಗೆಯಲ್ಲಿ ಸಮುದ್ರಕ್ಕೆ ಹಾರಿದ ಸುಶ್ಮಿತಾ ಸೇನ್! ಲಲಿತ್ ಮೋದಿ ಹೇಳಿದ್ದೇನು ಗೊತ್ತಾ..?
ಇಲ್ಲಿ ಯುವಕ ಆನೆಗಳ ಹಿಂದಿನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಆನೆಗಳತ್ತ್ ಹೋಗಲು ಪ್ರಯತ್ನಿಸುತ್ತಾನೆ. ಆದರೆ ಯುವಕ ತಮ್ಮತ್ತ ಹೆಜ್ಜೆ ಹಾಕುವುದನ್ನು ಗಮನಿಸಿದ ಆನೆಗಳು ಯುವಕನ್ನು ಓಡಿಸಿಕೊಂಡು ಬರುತ್ತವೆ. ಈ ಸಂದರ್ಭದಲ್ಲಿ ಅಪಾಯದ ಮುನ್ಸೂಚನೆಯನ್ನು ಅರಿತ ಯುವಕ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಸದ್ಯ ಸಮಯ ಪ್ರಜ್ಞೆ ಬಳಸಿ ಪ್ರಾಣ ಉಳಿಸಿಕೊಂಡ.
Selfie craze with wildlife can be deadly. These people were simply lucky that these gentle giants chose to pardon their behaviour. Otherwise, it does not take much for mighty elephants to teach people a lesson. video-shared pic.twitter.com/tdxxIDlA03
— Supriya Sahu IAS (@supriyasahuias) August 6, 2022
ಇದನ್ನೂ ಓದಿ : Viral Video: ಜಲಪಾತದ ಬಳಿ ಫೋಟೋಗೆ ಪೋಸ್ ನೀಡುತ್ತಿದ್ದ ಯುವಕನಿಗೆ ಏನಾಯ್ತು ನೋಡಿ..?
ಈ ವೀಡಿಯೊವನ್ನು ಸುಪ್ರಿಯಾ ಸಾಹು ಐಎಎಸ್ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ವನ್ಯಜೀವಿಗಳೊಂದಿಗಿನ ಸೆಲ್ಫಿಗಳ ವ್ಯಾಮೋಹವು ಪ್ರಾಣಕ್ಕೆ ಎರವಾಗಬಹುದು ಎನ್ನುವುದನ್ನು ಕೂಡಾ ಬರೆದಿದ್ದಾರೆ.
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...