ಚಾಮರಾಜನಗರ: ಮನುಷ್ಯನನ್ನೇ ಬಲಿ ಕೊಡುವ ನರಬಲಿ ಹಬ್ಬ ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಇಂದು ಬೆಳಗ್ಗೆವರೆಗೆ ನಡೆಸಿದೆ. ಈ ಹಬ್ಬದ ಆಚರಣೆಯಲ್ಲಿ 7-8 ತಾಸು ಮೃತಪಟ್ಟಿದ್ದ ವ್ಯಕ್ತಿ ಮತ್ತೇ ಮರಳಿ ಜೀವ ಪಡೆಯುತ್ತಾನೆ ಎಂಬುದು ಇಲ್ಲಿನ ಜನರ ವಿಚಿತ್ರ ಹಾಗೂ ನಂಬಿಕೆಗೆ ನಿಲುಕದ ವಿಶಿಷ್ಟ ಆಚರಣೆಯಾಗಿದೆ.


COMMERCIAL BREAK
SCROLL TO CONTINUE READING

19 ವರ್ಷಗಳ ಬಳಿಕ ಹಬ್ಬವು ಗ್ರಾಮದಲ್ಲಿ ನಡೆದಿದ್ದು ವ್ಯಕ್ತಿ 7-8 ತಾಸು ಉಸಿರಾಟ ನಿಲ್ಲಿಸಿ ಮತ್ತೇ ಬದುಕುತ್ತಾನೆಂಬ ನಂಬಿಕೆ ಇಲ್ಲಿನ‌ ಜನರದ್ದಾಗಿದ್ದು ಮೇಲ್ನೋಟಕ್ಕೆ ವ್ಯಕ್ತಿ ಜೀವ ಕಳೆದುಕೊಂಡು ತಾಸುಗಟ್ಟಲೇ ಬಳಿಕ ಮತ್ತೇ ಬದುಕಿಬಂದಂತೆ ಕಂಡುಬಂದಿದೆ. 


ಹೇಗೆ ನಡೆಯಿತು ಬಲಿ ಹಬ್ಬ: 
ಪಾಳ್ಯ ಗ್ರಾಮದಲ್ಲಿ 19 ವರ್ಷಗಳ ಬಳಿಕ ಸೀಗಮಾರಮ್ಮನ ಬಲಿ ಹಬ್ಬ ಎಂಬ ಆಚರಣೆ ನಡೆದಿದ್ದು ವ್ಯಕ್ತಿಯೊಬ್ಬರ ಪ್ರಾಣಪಕ್ಷಿ ಹಾರಿಹೋಗಿ ಬರೋಬ್ಬರಿ 9 ತಾಸು ಬಳಿಕ ಮತ್ತೇ ಬದುಕಿ ಬಂದಿದ್ದಾರೆ ಎಂಬುದು ಜನರ ನಂಬಿಕೆ. ಕಳೆದ 24ರಂದು ಈ ಗ್ರಾಮದೇವತೆ ಹಬ್ಬಕ್ಕೆ ಚಾಲನೆ ಸಿಕ್ಕಿದ್ದು ಇಂದು ನರಬಲಿ ಆಚರಣೆ ನಡೆದಿದೆ.


ಇದನ್ನೂ ಓದಿ-  ವೈರಲ್ ವಿಡಿಯೋ: ಮಹಿಳೆಯ ಆತ್ಮ ಆಕೆಯ ದೇಹದಿಂದ ಹೊರಬಂದಾಗ...


ಸೀಗಮಾರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಐದು ಮಂದಿಯ ತಂಡವು ಬಾವಿಯೊಂದಕ್ಕೆ ಪೂಜೆ ಸಲ್ಲಿಸಿ  ತಾಮ್ರದ ಕೊಡದಲ್ಲಿ ನೀರನ್ನು ಕುಣಿಯುತ್ತ ತರುವ ವೇಳೆ ದೇವಿಯ  ಮುಖವಾಡ ಮೆರವಣಿಗೆ, ಹೆಬ್ರ ಬಡಿದು ಬರುವ ತಂಡ ಮುಖಾಮುಖಿ‌ಯಾಯಿತು. 


ಆ ವೇಳೆ ಬಲಿಯಾಗುವ ವ್ಯಕ್ತಿ ' ಕುರಿಸಿದ್ದ ನಾಯಕ'  ಎಂಬವರ ಮೇಲೆ  ಅರ್ಚಕರು  ಮಂತ್ರಾಕ್ಷತೆ ಎಸೆದು ಅವರ ಎದೆ ಮೇಲೆ ಕಾಲಿಡುತ್ತಿದ್ದಂತೆ ಪ್ರಜ್ಞೆ ಕಳೆದುಕೊಂಡು ಬಿದ್ದರು. ಇದನ್ನೇ ಬಲಿ ಎಂದು ಕರೆಯಲಿದ್ದು ಆ ವ್ಯಕ್ತಿ ಸತ್ತಿರುತ್ತಾನೆ ಎಂಬುದು ಜನರ ನಂಬಿಕೆ.


ಇನ್ನು, ಆತನನ್ನು ಬಲಿ ಮನೆ ಎಂಬಲ್ಲಿ ಬರೋಬ್ಬರಿ 8 ತಾಸು ಇಟ್ಟಿದ್ದು ಆತನಿಗೆ ಅರಿಸಿನ ಲೇಪಿಸಲಾಗಿತ್ತು, ಕೈ-ಕಾಲು ಚಲನೆ ಇರಲಿಲ್ಲ, ಉಸಿರಾಟವೂ ಇರಲಿಲ್ಲ ಎನ್ನಲಾಗಿದೆ. ಇಂದು 5 ರ ಸುಮಾರಿಗೆ ಶವದ ಮೆರವಣಿಗೆ ನಡೆಸಿದ್ದು ನಾಲ್ವರು ಆತನನ್ನು ಮೇಲಕ್ಕೆ ತೂರಿಕೊಂಡೇ ಮೆರವಣಿಗೆ ನಡೆಸಿ ದೇವಾಲಯದತ್ತ ಮೃತದೇಹ ತಂದಿಟ್ಟಾಗ ಅರ್ಚಕರು ತೀರ್ಥ ಪ್ರೋಕ್ಷಿಸಿದ ನಂತರ ಆ ವ್ಯಕ್ತಿಗೆ ಮರುಜೀವ ಬಂದಿದೆ ಎಂಬುದು ಗ್ರಾಮಸ್ಥರ ನಂಬಿಕೆ.


ಇದನ್ನೂ ಓದಿ- Viral Video: ರಸ್ತೆಮಧ್ಯೆ ಕೆಟ್ಟು ನಿಂತ ಪೊಲೀಸ್ ವ್ಯಾನ್..‌ ಸಾರ್ವಜನಿಕರಿಂದ ತಳ್ಳು-ಐಸಾ ತಳ್ಳು-ಐಸಾ!!


ಪ್ರತಿ 3 ವರ್ಷಕ್ಕೊಮ್ಮೆ ನಡೆಯುತ್ತಿದ್ದ ಈ ನರಬಲಿ ಆಚರಣೆ ಕೆಲ ಕಾರಣಗಳಿಂದ ನಿಂತು ಹೋಗಿ 19 ವರ್ಷದ ಬಳಿಕ ನಡೆದಿದ್ದು ಹಬ್ಬವು ನಿರಂತರ ಒಂದು ತಿಂಗಳಕಾಲ ನಡೆದಿದೆ. ಈ ದಿನಗಳಲ್ಲಿ ಯಾರೋಬ್ಬರು ಮಾಂಸಹಾರ ಸೇವಿಸದೇ, ಸೀಗೆಮಾರಮ್ಮನ ಒಕ್ಕಲಿನವರು ಹೋಟೆಲ್ ಗಳಲ್ಲಿ ತಿನ್ನದೇ, ಒಗ್ಗರಣೆ ಹಾಕಿದ ಆಹಾರ ಸೇವಿಸದೇ ತೀವ್ರ ಕಟ್ಟುಪಾಡಿನಿಂದ ಆಚರಣೆ ನಡೆಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.