Viral Video: ರಸ್ತೆಮಧ್ಯೆ ಕೆಟ್ಟು ನಿಂತ ಪೊಲೀಸ್ ವ್ಯಾನ್..‌ ಸಾರ್ವಜನಿಕರಿಂದ ತಳ್ಳು-ಐಸಾ ತಳ್ಳು-ಐಸಾ!!

ಬಂದೋಬಸ್ತ್ ಗಾಗಿ ಆಗಮಿಸಿದ್ದ ಸ್ವರಾಜ್ ಮಜ್ದಾ ವ್ಯಾನ್ ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ  ಸಂಚಾರಕ್ಕೂ ಅಡ್ಡಿ ಉಂಟಾಗಿದೆ.  ಇದರಿಂದಾಗಿ, ಇತರೆ ವಾಹನಗಳು ಹಾಗೂ ಸಾರ್ವಜನಿಕರು ಕಿರಿಕಿರಿಯನ್ನೂ ಅನುಭವಿಸಿದ್ದಾರೆ.

Written by - Yashaswini V | Last Updated : May 5, 2022, 11:39 AM IST
  • ಬಂದೋಬಸ್ತ್ ಗಾಗಿ ಆಗಮಿಸಿದ್ದ ಸ್ವರಾಜ್ ಮಜ್ದಾ ವ್ಯಾನ್ ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತಿದೆ.
  • ಇದರ ಪರಿಣಾಮ ಸಂಚಾರಕ್ಕೂ ಅಡ್ಡಿ ಉಂಟಾಗಿದೆ.
  • ಇದರಿಂದಾಗಿ, ಇತರೆ ವಾಹನಗಳು ಹಾಗೂ ಸಾರ್ವಜನಿಕರು ಕಿರಿಕಿರಿಯನ್ನೂ ಅನುಭವಿಸಿದ್ದಾರೆ.
Viral Video: ರಸ್ತೆಮಧ್ಯೆ ಕೆಟ್ಟು ನಿಂತ ಪೊಲೀಸ್ ವ್ಯಾನ್..‌ ಸಾರ್ವಜನಿಕರಿಂದ ತಳ್ಳು-ಐಸಾ ತಳ್ಳು-ಐಸಾ!!  title=
police van viral video

ಚಾಮರಾಜನಗರ:  ವಾಹನ ದಟ್ಟಣೆ ನಿಯಂತ್ರಿಸಬೇಕಾದ ಪೊಲೀಸರ ವಾಹನವೇ ರಸ್ತೆ ಮಧ್ಯೆ ಕೆಟ್ಟು ನಿಂತು ಅವಾಂತರ ಸೃಷ್ಟಿಸಿರುವ ಘಟನೆ ಹನೂರು ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆದಿದೆ.

ಬಂದೋಬಸ್ತ್ ಗಾಗಿ ಆಗಮಿಸಿದ್ದ ಸ್ವರಾಜ್ ಮಜ್ದಾ ವ್ಯಾನ್ ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ  ಸಂಚಾರಕ್ಕೂ ಅಡ್ಡಿ ಉಂಟಾಗಿದೆ.  ಇದರಿಂದಾಗಿ, ಇತರೆ ವಾಹನಗಳು ಹಾಗೂ ಸಾರ್ವಜನಿಕರು ಕಿರಿಕಿರಿಯನ್ನೂ ಅನುಭವಿಸಿದ್ದಾರೆ.

ಇದನ್ನೂ ಓದಿ- Viral Video: ಚಾಲಕನಿಲ್ಲದ ಕಾರನ್ನು ನಿಲ್ಲಿಸಲು ಕಿಟಕಿಯೊಳಗೆ ಹಾರಿದ ಯುವಕ!

ಈ ಸಂದರ್ಭದಲ್ಲಿ ಅಲ್ಲೇ ಇದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ತಳ್ಳು-ಐಸಾ ಎಂದು ವ್ಯಾನನ್ನು ನೂಕಿಕೊಂಡು ರಸ್ತೆಬದಿವರೆಗೆ ತಂದು ನಿಲ್ಲಿಸಿದ್ದಾರೆ, ಬಳಿಕ ತಾಂತ್ರಿಕ ರಿಪೇರಿಯಿಂದ ವಾಹನ ಮತ್ತೇ ಚಾಲುಗೊಂಡಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ವೈರಲ್ ವಿಡಿಯೋ: ನಾರಿ ಜೊತೆ ಡ್ಯಾನ್ಸ್ ಮಾಡಲು ವೇದಿಕೆ ಬಳಿ ಬಂದ ವ್ಯಕ್ತಿ, ಬೆಚ್ಚಿಬಿದ್ದ...

ಸದ್ಯ, ಈ ಘಟನೆ ಬುಧವಾರ ಸಂಜೆ ನಡೆದಿದ್ದು ಹಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ವಿಡಿಯೋ ಹರಿದಾಡುತ್ತಿದೆ, ತುರ್ತು ಸಂದರ್ಭದಲ್ಲಿ ಜನರಿಗೆ ಸೇವೆ ಕಲ್ಪಿಸುವ  ಪೊಲೀಸರ ವಾಹನವೇ ಹೀಗಾದರೇ ಗತಿ ಏನು ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News