Harbhajan Singh on Virat Kohli: ಆಧುನಿಕ ಕ್ರಿಕೆಟ್ ಲೋಕದಲ್ಲಿ ತನ್ನ ಅಧಿಪತ್ಯವನ್ನು ಉಳಿಸಿಕೊಂಡಿರುವ ಆಟಗಾರ ವಿರಾಟ್ ಕೊಹ್ಲಿ. ಯಾವ ಸ್ವರೂಪದ್ದಾದರೂ ಪರವಾಗಿಲ್ಲ. ಅಲ್ಲಿ ವಿರಾಟ್ ದಾಖಲೆಯ ಇನ್ನಿಂಗ್ಸ್‌ ಆಡಿಯೇ ತೀರುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: LPG Price Cut : ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಇಳಿಕೆ ! ಕೋಟ್ಯಾಂತರ ಗ್ರಾಹಕರಿಗೆ ಸಿಹಿ ಸುದ್ದಿ 


ಇದೀಗ ಜೂನ್‌’ನಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ 2024ರ ಮೇಲೆ ಟೀಂ ಇಂಡಿಯಾದ ಗಮನ ಕೇಂದ್ರೀಕೃತವಾಗಿದ್ದು, ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ವಿಶ್ವಕಪ್ ತಂಡದಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದೆ. ಅಮೆರಿಕಾದ ಪಿಚ್‌ಗಳಲ್ಲಿ ಕೊಹ್ಲಿ ಬ್ಯಾಟಿಂಗ್ ಸ್ಕಿಲ್ ಪರಿಣಾಮಕಾರಿಯಾಗಿರುವುದಿಲ್ಲ ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಆದರೆ ಈ ಸುದ್ದಿಗೆ ಟೀಂ ಇಂಡಿಯಾದ ಮಾಜಿ ಅನುಭವಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಂತ್ಯ ಹಾಡಿದ್ದಾರೆ.


ವಿರಾಟ್ ಕೊಹ್ಲಿ ಕಂಬ್ಯಾಕ್ ಬಗ್ಗೆ ಹರ್ಭಜನ್ ಸಿಂಗ್ ನ್ಯೂಸ್ 24 ಜೊತೆ ಮಾತನಾಡಿದ್ದು, “ವಿರಾಟ್ ಕೊಹ್ಲಿ ಮೈದಾನಕ್ಕೆ ಮರಳಿದಾಗ, ನೀವು ಅವರಲ್ಲಿ ಉತ್ತಮ ಚಾಣಾಕ್ಷತೆಯನ್ನು ನೋಡುತ್ತೀರಿ. ಕೊಹ್ಲಿ 10 ವರ್ಷಗಳ ಹಿಂದೆ ಹೇಗಿದ್ದರೋ ಅದೇ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿರಾಟ್‌’ಗೆ ಕ್ರಿಕೆಟ್ ಅತ್ಯಂತ ಪ್ರಿಯವಾದದ್ದು ಎಂದು ನನಗೆ ತಿಳಿದಿದೆ. ಆದರೆ, ಇದನ್ನು ಮೀರಿ ಅವರ ಕುಟುಂಬ. ಅವರು ತಮ್ಮ ಕುಟುಂಬಕ್ಕೆ ಸಮಯ ನೀಡಿದ್ದಾರೆ. ಇನ್ನು ಟಿ20 ವಿಶ್ವಕಪ್‌’ನಲ್ಲಿ ಉತ್ತಮ ಸಾಧನೆ ಮಾಡಬೇಕೆಂದುಕೊಂಡಿದ್ದಾರೆ. ಜೊತೆಗೆ ಉತ್ತಮ ಫಾರ್ಮ್‌’ನಲ್ಲಿ ಬಂದು ವಿಶ್ವಕಪ್ ಗೆದ್ದುಕೊಡಬೇಕೆಂದಿದ್ದಾರೆ. ಕೊಹ್ಲಿ ಇತ್ತೀಚೆಗೆ ಕ್ರಿಕೆಟ್ ಆಡಿಲ್ಲ ಆದರೆ ಅವರ ಕಂಬ್ಯಾಕ್ ಯಾವಾಗಲೂ ಅದ್ಭುತವಾಗಿರುತ್ತದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಸರ್ಕಾರಕ್ಕೆ ₹19.84 ಕೋಟಿ ಲಾಭಾಂಶ ಹಸ್ತಾಂತರಿಸಿದ ಕೆಎಸ್ಐಐಡಿಸಿ


ಐಪಿಎಲ್ 2024ರ ಬಗ್ಗೆಯೂ ಹರ್ಭಜನ್ ಕೂಡ ಪ್ರತಿಕ್ರಿಯಿಸಿದ್ದಾರೆ. “ಆರ್‌’ಸಿಬಿ ಅಭಿಮಾನಿಗಳು ಕೊಹ್ಲಿಯ ಪುನರಾಗಮನವನ್ನು ನಿರೀಕ್ಷಿಸುತ್ತಿರಬೇಕು. ಬಹಳ ದಿನಗಳಿಂದ ಟ್ರೋಫಿಗಾಗಿ ಕಾಯುತ್ತಿದ್ದಾರೆ. ಭಾರತವೂ ಟ್ರೋಫಿಗಾಗಿ ಕಾಯುತ್ತಿದೆ. ಜೂನ್‌’ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಭಾರತ ಈ ಬಾರಿ ಪ್ರಶಸ್ತಿ ಬರ ನೀಗಿಸುವ ನಿರೀಕ್ಷೆಯಿದೆ. ರೋಹಿತ್, ವಿರಾಟ್ ಮತ್ತು ಇತರ ಆಟಗಾರರು ಭಾರತಕ್ಕೆ ಟ್ರೋಫಿಯನ್ನು ತರಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 


MS DhoniChennai Super KingsCSKIPL 2024