ಮುಂಬೈ: ಈ ಬಾರಿಯ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್  (RR) ತಂಡವು ಮತ್ತೊಂದು ದೊಡ್ಡ ಹಿನ್ನಡೆ ಅನುಭವಿಸಿದೆ. ಆಸ್ಟ್ರೇಲಿಯಾದ ವೇಗದ ಬೌಲರ್ ಆಂಡ್ರ್ಯೂ ಟೈ (Andrew Tye) ವೈಯಕ್ತಿಕ ಕಾರಣಗಳಿಂದ ಸ್ವದೇಶಕ್ಕೆ ಮರಳಿದ್ದಾರೆ. ಇದರೊಂದಿಗೆ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಫ್ರ್ಯಾಂಚೈಸ್‌ನಿಂದ ತೆಗೆದುಹಾಕಲ್ಪಟ್ಟ ನಾಲ್ಕನೇ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.


COMMERCIAL BREAK
SCROLL TO CONTINUE READING

ಆಸ್ಟ್ರೇಲಿಯಾಕ್ಕೆ ಮರಳಿದ ಆಂಡ್ರ್ಯೂ ಟೈ :
ಈ ಕುರಿತಂತೆ ಟ್ವೀಟ್ ಮಾಡಿರುವ ರಾಜಸ್ಥಾನ್ ರಾಯಲ್ಸ್ (Rajasthan Royals), 'ಆಂಡ್ರ್ಯೂ ಟೈ (Andrew Tye) ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಇಂದು ಬೆಳಿಗ್ಗೆ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಅವರಿಗೆ ಯಾವುದೇ ರೀತಿಯ ಬೆಂಬಲ ಬೇಕಿದ್ದರೂ ನಾವು ಅವರ ಸಹಾಯಕ್ಕೆ ಸಿದ್ದರಿದ್ದೇವೆ' ಎಂದು ತಿಳಿಸಿದೆ.


ಇದನ್ನೂ ಓದಿ -Rajasthan vs Kolkata: ರಾಜಸ್ಥಾನ್ ರಾಯಲ್ಸ್ ಗೆ ಆರು ವಿಕೆಟ್ ಗಳ ಭರ್ಜರಿ ಜಯ


ಕಳೆದ ಶನಿವಾರ, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಜಯಗಳಿಸಿದ ನಂತರ ರಾಜಸ್ಥಾನ್ ರಾಯಲ್ಸ್ ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕಾರ ಅವರು ಡ್ರೆಸ್ಸಿಂಗ್ ಕೋಣೆಯಲ್ಲಿ ಆಂಡ್ರ್ಯೂ ಟೈ ಆಸ್ಟ್ರೇಲಿಯಾಕ್ಕೆ ತೆರಳುವುದಾಗಿ ಘೋಷಿಸಿದ್ದರು.


ಈ ಋತುವಿನಿಂದ ರಾಜಸ್ಥಾನದ ನಾಲ್ಕು ಆಟಗಾರರು ಹಿಂದೆ ಸರಿದರು:
ಆಂಡ್ರ್ಯೂ ಟೈಗೆ ಮುಂಚಿತವಾಗಿ ಇಂಗ್ಲೆಂಡ್ನ ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ (IPL) ಹಿಂದೆ ಸರಿಯಲು ನಿರ್ಧರಿಸಿದ್ದರು.


ಇದನ್ನೂ ಓದಿ - Rajasthan vs Kolkata:ಕ್ರಿಸ್ ಮೊರಿಸ್ ದಾಳಿಗೆ ತತ್ತರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್,133/9


ಶಸ್ತ್ರಚಿಕಿತ್ಸೆಯಿಂದಾಗಿ ಆರ್ಚರ್ ತಂಡವನ್ನು ಸೇರಲಿಲ್ಲ, ಬೆರಳಿನ ಫ್ರಾಕ್ಚರ್ ನಿಂದಾಗಿ ಲಿವಿಂಗ್‌ಸ್ಟೋನ್ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ ಮತ್ತು ಬಯೋ-ಬಬಲ್‌ನಲ್ಲಿ ತನಗೆ ಕಷ್ಟವಾಗುತ್ತಿದೆ ಎಂದು ಹೇಳಿದರು.


34 ವರ್ಷದ ಆಂಡ್ರ್ಯೂ ಟೈ ಆಸ್ಟ್ರೇಲಿಯಾ ಪರ ಏಳು ಏಕದಿನ ಮತ್ತು 28 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಪಂದ್ಯಾವಳಿಯ ಈ ಹಂತದಲ್ಲಿ ಅವರು ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಅವರು ಫೆಬ್ರವರಿಯಲ್ಲಿ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ವಿರುದ್ಧ ಪರ್ತ್ ಸ್ಕಾರ್ಚರ್ಸ್ ಪರ ಕೊನೆಯ ಪಂದ್ಯವನ್ನು ಆಡಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.