ನವದೆಹಲಿ: ಮುಂಬೈನಲ್ಲಿನ ವಾಂಖೇಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2021 ಟೂರ್ನಿಯ 18 ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.
ಇದನ್ನೂ ಓದಿ: IPL 2021: ಮೊದಲ ಪಂದ್ಯದಲ್ಲೇ ಸೋಲುಂಡ ಬಳಿಕ ಧೋನಿಗೆ ಎದುರಾಯಿತು ಮತ್ತೊಂದು ಕಂಟಕ
ಟಾಸ್ ಗೆದ್ದು ರಾಜಸ್ತಾನ ರಾಯಲ್ಸ್ ತಂಡವು ಮೊದಲು ಬೌಲಿಂಗ್ ನ್ನು ಆರಿಸಿಕೊಂಡಿತು.ಇನೊಂದೆಡೆಗೆ ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತಾ ತಂಡವು ಆರಂಭದಲ್ಲಿಯೇ ಆಘಾತವನ್ನು ಎದುರಿಸಿತು. ತಂಡದ ಮೊತ್ತ 61 ಆಗುವಷ್ಟರಲ್ಲಿ ನಾಲ್ಕು ಪ್ರಮುಖ ಬ್ಯಾಟ್ಸಮನ್ ಗಳನ್ನು ಕಳೆದುಕೊಂಡು ಸಂಕಷ್ಟವನ್ನು ಎದುರಿಸುತು. ಇದಾದ ನಂತರ ಅದು ಚೇತರಿಸಿಕೊಳ್ಳಲೆ ಇಲ್ಲ.
That's that from Match 18 of #VIVOIPL as @rajasthanroyals win by 6 wickets to register their second win of the season.
Scorecard - https://t.co/ouszimFkdo #RRvKKR pic.twitter.com/JcLflXxXzT
— IndianPremierLeague (@IPL) April 24, 2021
ಕೋಲ್ಕತ್ತಾ( Kolkata Knight Riders) ತಂಡದ ಪರವಾಗಿ ರಾಹುಲ್ ತ್ರಿಪಾಠಿ ಹಾಗೂ ದಿನೇಶ್ ಕಾರ್ತಿಕ್ ಸಿಡಿಸಿದ 36,25 ರನ್ ಗಳೇ ಅಧಿಕ ಮೊತ್ತವಾಗಿದ್ದವು.ಆ ಮೂಲಕ ಕೊನೆಗೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಗಳನ್ನು ಮಾತ್ರ ಗಳಿಸಿತು.ರಾಜಸ್ತಾನದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಕ್ರಿಸ್ ಮೊರಿಸ್ ನಾಲ್ಕು ವಿಕೆಟ್ ಗಳನ್ನು ಕಬಳಿಸುವ ಮೂಲಕ ಕೊಲ್ಕತಾದ ರನ್ ಗಳ ವೇಗಕ್ಕೆ ಕಡಿವಾಣ ಹಾಕಿದರು.
ಇದನ್ನೂ ಓದಿ: Hyderabad vs Kolkata, 3rd Match:ರೋಚಕ ಕದನದಲ್ಲಿ ಕೊಲ್ಕತ್ತಾಗೆ 10 ರನ್ ಗಳ ಗೆಲುವು
134 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ರಾಜಸ್ತಾನ್ ರಾಯಲ್ಸ್ ತಂಡವು 18.4 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಗೆಲುವಿನ ದಡ ಸೇರಿತು. ರಾಜಸ್ತಾನ್ ಪರವಾಗಿ ನಾಯಕ ಸಂಜು ಸ್ಯಾಮ್ಸನ್ 42, ಡೇವಿಡ್ ಮಿಲ್ಲರ್ 24, ಶಿವಂ ದುಭೆ 22 ಹಾಗೂ ಯಶ್ವಾಲ್ ಜೈಸ್ವಾಲ್ 22 ರನ್ ಗಳನ್ನು ಗಳಿಸಿ ತಂಡದ ಗೆಲುವಿಗೆ ಕಾರಣಕರ್ತರಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.