ನವದೆಹಲಿ: ವಾಂಖೇಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ 19 ನೇ ಪಂದ್ಯದಲ್ಲಿ ಚೆನ್ನೈ ತಂಡವು ರಾಯಲ್ ಚಾಲೆಂಜರ್ಸ್ ವಿರುದ್ಧ 69 ರನ್ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡವು ಉತ್ತಮ ಆರಂಭವನ್ನೇ ಕಂಡಿತು.ರುತುರಾಜ್ ಗಾಯಕ್ವಾಡ್ ಹಾಗೂ ದುಫ್ಲೆಸಿಸ್ ಅವರ 33,ಹಾಗೂ 50 ರನ್ ಗಳ ನೆರವಿನಿಂದಾಗಿ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿದರು.
ಇದನ್ನೂ ಓದಿ: Rajasthan vs Kolkata: ರಾಜಸ್ಥಾನ್ ರಾಯಲ್ಸ್ ಗೆ ಆರು ವಿಕೆಟ್ ಗಳ ಭರ್ಜರಿ ಜಯ
ಆದರೆ ಪಂದ್ಯಕ್ಕೆ ಕೊನೆಗೆ ಮೆರಗು ತಂದಿದ್ದು ಮಾತ್ರ ರವೀಂದ್ರ ಜಡೇಜಾ ಅವರ ಸ್ಪೋಟಕ ಬ್ಯಾಟಿಂಗ್ ಎಂದು ಹೇಳಬಹುದು. ಮಂದಗತಿಯಲ್ಲಿ ಸಾಗುತ್ತಿದ ರನ್ಗಳ ವೇಗವನ್ನು ಬದಲಾಯಿಸಿದರು. ಕೇವಲ 28 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಬಾರಿಸುವ ಮೂಲಕ 62 ರನ್ ಗಳನ್ನು ಗಳಿಸಿದರು. ಆ ಮೂಲಕ ಚೆನ್ನೈ ತಂಡವು 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
All Over: A comprehensive win for @ChennaiIPL as they beat #RCB by 69 runs and also end their four-match unbeaten streak in #IPL2021.#CSK take the No. 1 spot in the table now. https://t.co/wpoquMXdsr #CSKvRCB #VIVOIPL pic.twitter.com/r1zCPv8mub
— IndianPremierLeague (@IPL) April 25, 2021
ಇದನ್ನೂ ಓದಿ: IPL 2021: RCB v/s CSK ಇಂದಿನ ಮ್ಯಾಚ್ ಡಿಟೈಲ್ಸ್ ಇಲ್ಲಿದೆ..!
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ತಂಡವು ಉತ್ತಮ ಆರಂಭವನ್ನು ಕಂಡರೂ ಸಹಿತ ಧಿಡೀರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬೆಂಗಳೂರು ಪರವಾಗಿ ದೇವದತ್ ಪಡಿಕ್ಕಲ್ ಗಳಿಸಿದ 34 ರನ್ ಗಳೆ ಅಧಿಕ ಮೊತ್ತವಾಗಿತ್ತು, ಗ್ಲೆನ್ ಮ್ಯಾಕ್ಸ್ವೆಲ್ ತಳವೂರುವ ಸೂಚನೆ ನೀಡಿದ್ದರಾದರೂ ಕೂಡ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಕೊನೆಗೆ ರಾಯಲ್ಸ್ ಚಾಲೆಂಜರ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಇದನ್ನೂ ಓದಿ: Rajasthan vs Kolkata:ಕ್ರಿಸ್ ಮೊರಿಸ್ ದಾಳಿಗೆ ತತ್ತರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್,133/9
ಚೆನ್ನೈ ಪರವಾಗಿ ರವಿಂದ್ರ ಜಡೇಜಾ ಮೂರು ವಿಕೆಟ್ ಕಬಳಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.