ನವದೆಹಲಿ : ಶುಭಮನ್ ಗಿಲ್ ಅರ್ಧಶತಕ, ದ ನಂತರ ,  ಲಾಕಿ ಫರ್ಗುಸನ್ ಮತ್ತು ಶಿವಂ ಮಾವಿ ಅವರ ಬಿರುಸಿನ ಬೌಲಿಂಗ್‌ನಿಂದಾಗಿ, ಗುರುವಾರ ನಡೆದ ಪಂದ್ಯದಲ್ಲಿಕೋಲ್ಕತಾ ನೈಟ್ ರೈಡರ್ಸ್ (KKR) ರಾಜಸ್ಥಾನ ರಾಯಲ್ಸ್ ತಂಡವನ್ನು (Rajastan Royals) 86 ರನ್‌ ಗಳಿಂದ ಸೋಲಿಸಿತು.  ಈ ಮೂಲಕ PlayOffನಲ್ಲಿ ತನ್ನ  ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಕೋಲ್ಕತಾ ನೈಟ್ ರೈಡರ್ಸ್‌ನ ಈ ವಿಜಯದೊಂದಿಗೆ  ಮುಂಬೈ ಇಂಡಿಯನ್ಸ್ ಐಪಿಎಲ್ ಪ್ಲೇ-ಆಫ್‌ನಿಂದ (IPL Playoff) ಬಹುತೇಕ ಹೊರಗುಳಿದಂತಾಗಿದೆ. 


COMMERCIAL BREAK
SCROLL TO CONTINUE READING

ಐಪಿಎಲ್ ಪ್ಲೇ-ಆಫ್ ರೇಸ್ ನಿಂದ ಮುಂಬೈ ಬಹುತೇಕ ಹೊರಕ್ಕೆ : 
ಐಪಿಎಲ್ ಪ್ಲೇ-ಆಫ್‌ಗೆ (IPL Playoff) ಮುಂಬೈ ಇಂಡಿಯನ್ಸ್‌ (Mumbai Indians) ಹೋಗುವುದು ಬಹುತೇಕ ಅಸಾಧ್ಯ. ಮುಂಬೈ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 250+ ಸ್ಕೋರ್ ಮಾಡಿ, SRH ಅನ್ನು 170+ ರನ್ನುಗಳಿಂದ ಸೋಲಿಸುವ ಅಗತ್ಯವಿದೆ. ಆದರೆ, ಮತ್ತೆ  SRH ಈ ರನ್‌ ಗಳನ್ನು ಬೆನ್ನತ್ತಿದ್ದರೆ ಈ ಅವಾಕಾಶವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಏಕೆಂದರೆ KKRನ ನೆಟ್‌ ರನ್‌ ರೇಟ್‌ ಅನ್ನು ಮೀರಿಸಲು ಸಾಧ್ಯವಿಲ್ಲ.  


ಇದನ್ನೂ ಓದಿ : Viral video : IPL ಪಂದ್ಯ ಮುಗಿಯುತ್ತಿದ್ದಂತೆಯೇ ಎಲ್ಲರೆದುರೇ ಯುವತಿಗೆ ಪ್ರೊಪೋಸ್ ಮಾಡಿದ ಧೋನಿ ತಂಡದ ಆಟಗಾರ


ಕೆಕೆಆರ್‌ ಪಾಲಿಗೆ ಸಿಹಿ ಸುದ್ದಿ : 
ಐಪಿಎಲ್ ಪ್ಲೇ-ಆಫ್‌ಗೆ ಮುನ್ನ, ಕೆಕೆಆರ್‌ (KKR)  ಪಾಲಿಗೆ ಒಂದು ಸಿಹಿ ಸುದ್ದಿಯಿದೆ. ಕೆಕೆಆರ್ ತಂಡದ ಅಪಾಯಕಾರಿ ಆಲ್ ರೌಂಡರ್ ಆಂಡ್ರೆ ರಸೆಲ್ (Andre Russell)ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ಲೇಆಫ್ ನಲ್ಲಿ ಆಡುವ ಎಲ್ಲಾ ಸಾಧ್ಯತಗಳಿವೆ.  ಒಂದು ವೇಳೆ ಹೀಗಾದಲ್ಲಿ, ಕೋಲ್ಕತಾ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರ  ಹೊಮ್ಮುವ ಸಾಧ್ಯತೆ ಹೆಚ್ಚಿದೆ. ' ಬುಧವಾರ ರಸೆಲ್ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿದ್ದು, ಶೀಘ್ರದಲ್ಲೇ ವಾಪಸ್‌ ಆಗಲಿದ್ದಾರೆ ಎಂದು, ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮುಖ್ಯ ಸಲಹೆಗಾರ ಡೇವಿಡ್ ಹಸ್ಸಿ ಪಂದ್ಯದ ನಂತರ ತಿಳಿಸಿದ್ದಾರೆ. ಅಲ್ಲದೆ, ಅವರು ಪ್ಲೇಆಫ್‌ನಲ್ಲಿ ಆಡಲು ಕಠಿಣ ಶ್ರಮ ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 


ಪ್ಲೇ ಆಫ್‌ ನಲ್ಲಿ ಆಡಲಿದ್ದಾರೆ ಈ ಆಟಗಾರ :  
'ರಸೆಲ್ ಆಡುವುದು ನಮಗೆ ಮಾತ್ರವಲ್ಲ ಟೂರ್ನಿಗೂ ಮುಖ್ಯವಾಗಿದೆ. ಅವರು ವಿಶ್ವ ದರ್ಜೆಯ ಆಟಗಾರ ಎಂದು ಡೇವಿಡ್ ಹಸ್ಸಿ (David Hussey), ತಿಳಿಸಿದ್ದಾರೆ. ದೆಹಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ (CSK)ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಕೆಕೆಆರ್ ನಾಲ್ಕನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಕೆಕೆಆರ್‌ ಲೀಗ್ ಹಂತದಲ್ಲಿ 14 ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿ, ತನ್ನ ರನ್ ರೇಟ್ ಅನ್ನು ಉತ್ತಮವಾಗಿಸಿಕೊಂಡಿದೆ. 


ಇದನ್ನೂ ಓದಿ : Virat Kohli : ವಿಶ್ವದ ಈ 7 ದುಬಾರಿ ವಸ್ತುಗಳ ಮಾಲೀಕ ವಿರಾಟ್ ಕೊಹ್ಲಿ, ಇವುಗಳ ಬೆಲೆ ಕೇಳಿದ್ರೆ ದಂಗಾಗುತ್ತೀರಾ! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ