Virat Kohli : ವಿಶ್ವದ ಈ 7 ದುಬಾರಿ ವಸ್ತುಗಳ ಮಾಲೀಕ ವಿರಾಟ್ ಕೊಹ್ಲಿ, ಇವುಗಳ ಬೆಲೆ ಕೇಳಿದ್ರೆ ದಂಗಾಗುತ್ತೀರಾ! 

ವಿರಾಟ್ ಕೊಹ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟಿಗರಾಗಿದ್ದು, ವಾರ್ಷಿಕ ಆದಾಯ 196 ಕೋಟಿ ರೂ. ಇದೆ ಎಂದು ಹೇಳಲಾಗುತ್ತಿದೆ. ಕೊಹ್ಲಿಯ ಐಷಾರಾಮಿ ವಸ್ತುಗಳ ಪಟ್ಟಿಯನ್ನು ನೋಡೋಣ ಬನ್ನಿ..

Written by - Channabasava A Kashinakunti | Last Updated : Oct 7, 2021, 04:26 PM IST
  • ಕೊಹ್ಲಿ ಅತ್ಯುತ್ತಮ ಐಷಾರಾಮಿ ಲೈಫ್
  • ಕೊಹ್ಲಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ
  • ವಿರಾಟ್ ಕೊಹ್ಲಿಗೆ ವಾಚ್‌ಗಳೆಂದರೆ ತುಂಬಾ ಇಷ್ಟ
Virat Kohli : ವಿಶ್ವದ ಈ 7 ದುಬಾರಿ ವಸ್ತುಗಳ ಮಾಲೀಕ ವಿರಾಟ್ ಕೊಹ್ಲಿ, ಇವುಗಳ ಬೆಲೆ ಕೇಳಿದ್ರೆ ದಂಗಾಗುತ್ತೀರಾ!  title=

ನವದೆಹಲಿ : ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅತ್ಯುತ್ತಮ ಐಷಾರಾಮಿ ಜೀವನ ನಡೆಸುತ್ತಾರೆ. ವಿರಾಟ್ ಕೊಹ್ಲಿ ಜಗತ್ತಿನಲ್ಲಿ ಒಂದಕ್ಕಿಂತ ಹೆಚ್ಚು ಅದ್ಭುತ ಮತ್ತು ದುಬಾರಿ ವಸ್ತುಗಳನ್ನ ಹೊಂದಿದ್ದಾರೆ. ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರು. ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎಂದು ಕೂಡ ಕರೆಯುತ್ತಾರೆ. ವಿರಾಟ್ ಕೊಹ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟಿಗರಾಗಿದ್ದು, ವಾರ್ಷಿಕ ಆದಾಯ 196 ಕೋಟಿ ರೂ. ಇದೆ ಎಂದು ಹೇಳಲಾಗುತ್ತಿದೆ. ಕೊಹ್ಲಿಯ ಐಷಾರಾಮಿ ವಸ್ತುಗಳ ಪಟ್ಟಿಯನ್ನು ನೋಡೋಣ ಬನ್ನಿ..

ವಿರಾಟ್ ಕೊಹ್ಲಿಗೆ ವಾಚ್‌ಗಳೆಂದರೆ ತುಂಬಾ ಇಷ್ಟ 

ವಿರಾಟ್ ಕೊಹ್ಲಿ(Virat Kohli)ಗೆ ವಾಚ್‌ಗಳೆಂದರೆ ತುಂಬಾ ಇಷ್ಟ. ವಿರಾಟ್ ಕೊಹ್ಲಿ ಧರಿಸುವ ಗಡಿಯಾರದ ಬೆಲೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ವಿರಾಟ್ ಕೊಹ್ಲಿ ಹೊಂದಿರುವ ವಾಚ್‌ನ ಬೆಲೆ ಸುಮಾರು 70 ಲಕ್ಷ ರೂಪಾಯಿಗಳು. ಕೊಹ್ಲಿ ಬ್ರಾಂಡ್ ಬಟ್ಟೆ, ಶೂ ಮತ್ತು ವಾಚ್ ಗಳ ಸಂಗ್ರಹವನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿಯ ವಾಚ್‌ನಲ್ಲಿ ಪ್ರಚಂಡ ವೈಶಿಷ್ಟ್ಯಗಳಿವೆ. ಅಲ್ಲದೆ, ನೀಲಮಣಿ, ಚಿನ್ನ ಮತ್ತು ವಜ್ರವನ್ನು ಇದರಲ್ಲಿ ಬಳಸಲಾಗಿದೆ, ಇದು ಗಡಿಯಾರದ ನೋಟವನ್ನು ಆಕರ್ಷಕವಾಗಿಸುತ್ತದೆ. ವಿರಾಟ್ ಕೊಹ್ಲಿ ಸೊಗಸಾದ ಮತ್ತು ದುಬಾರಿ ಕೈಗಡಿಯಾರಗಳನ್ನು ಧರಿಸಲು ಇಷ್ಟಪಡುತ್ತಾರೆ, ಅದಕ್ಕಾಗಿಯೇ ಅವರು ವಿವಿಧ ಬ್ರಾಂಡ್‌ಗಳ ಸಂಪೂರ್ಣ ಸಂಗ್ರಹಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ : ಧೋನಿಯ ಈ ನಿರ್ಧಾರದಿಂದಲೇ ಬಚಾವಾಗಿದ್ದರು ವಿರಾಟ್ ಕೊಹ್ಲಿ, ಇಲ್ಲವಾದರೆ ಮುಗಿದೇ ಹೋಗುತ್ತಿತ್ತು ಕೊಹ್ಲಿ career

ಫ್ಲೈಯಿಂಗ್ ಸ್ಪರ್ ಕಾರಿನ ಮಾಲೀಕ ಕೊಹ್ಲಿ

ಫೈನಾನ್ಶಿಯಲ್ ಎಕ್ಸ್ ಪ್ರೆಸ್ ಪ್ರಕಾರ ವಿರಾಟ್ ಕೊಹ್ಲಿ ಬೆಂಟ್ಲೆ ಫ್ಲೈಯಿಂಗ್ ಸ್ಪರ್ ಕಾರಿನ(Bentley Flying Spy Car) ಮಾಲೀಕರು. ಈ ಸೆಡಾನ್ ಕಾರಿನ ಬೆಲೆ ಸುಮಾರು 3.97 ಕೋಟಿ. ಇದೆ.

ಮುಂಬೈನಲ್ಲಿ 34 ಕೋಟಿ ರೂ. ಮನೆ 

ವಿರಾಟ್ ಕೊಹ್ಲಿಗೆ ಮುಂಬೈನ ವರ್ಲಿಯಲ್ಲಿ ಐಷಾರಾಮಿ ಫ್ಲಾಟ್ ಇದೆ. ಈ ಫ್ಲಾಟ್ ಅನ್ನು ವಿರಾಟ್-ಅನುಷ್ಕಾ 2016 ರಲ್ಲಿ ಮದುವೆಗೆ ಮುಂಚೆ ಖರೀದಿಸಿದ್ದರು. 7,171 ಚದರ ಅಡಿಗಳಷ್ಟು ವ್ಯಾಪಿಸಿರುವ ಈ ಅಪಾರ್ಟ್ಮೆಂಟ್ ಓಂಕಾರ್ 1973 ರ 35 ನೇ ಮಹಡಿಯಲ್ಲಿದೆ. ಈ ಅಪಾರ್ಟ್ ಮೆಂಟ್ ನಿಂದ ಸಂಪೂರ್ಣ ಮುಂಬೈ ನಗರ(Mumbai City) ಮತ್ತು ಅರಬ್ಬಿ ಸಮುದ್ರ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರ ಬೆಲೆ ಸುಮಾರು 34 ಕೋಟಿ ರೂಪಾಯಿ.

ಕೊಹ್ಲಿಗೆ 80 ಕೋಟಿ ಮೌಲ್ಯದ ಬಂಗಲೆ ಇದೆ 

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹರಿಯಾಣದ ಗುರುಗ್ರಾಮ(Gurugram)ದಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಈ ಬಂಗಲೆಯ ಬೆಲೆ 80 ಕೋಟಿ ರೂ. ಈ ಬಂಗಲೆಯಲ್ಲಿ ಪೂಲ್, ಜಿಮ್ ಮತ್ತು ಐಷಾರಾಮಿ ಪೀಠೋಪಕರಣಗಳಿವೆ.

ಬೆಂಟ್ಲೆ ಕಾಂಟಿನೆಂಟಲ್  ಕಾರ್ 

ವಿರಾಟ್ ಕೊಹ್ಲಿಯ ಕಾರು ಪ್ರೇಮ ಯಾರಿಂದಲೂ ಮರೆಯಾಗಿಲ್ಲ. ಅವರು ದೊಡ್ಡ ಕಾರುಗಳ(Cars) ಸಂಗ್ರಹವನ್ನು ಹೊಂದಿದ್ದಾರೆ. ಇದರಲ್ಲಿ ಬೆಂಟ್ಲೆ ಕಾಂಟಿನೆಂಟಲ್ ಅವರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಅವರು 2018 ರಲ್ಲಿ ಸ್ವತಃ ಈ ಐಷಾರಾಮಿ ಕಾರನ್ನು ಖರೀದಿಸಿದರು. ಮಗಳು ಹುಟ್ಟುವ ಮುನ್ನ ಕೊಹ್ಲಿ ತನ್ನ ಪತ್ನಿ ಅನುಷ್ಕಾ ಜೊತೆ ಅದೇ ಕಾರಿನಲ್ಲಿ ಕಾಣಿಸಿಕೊಂಡಿದ್ದರು. ಈ ಕಾರಿನ ಬೆಲೆ 4 ರಿಂದ 4.6 ಕೋಟಿ.

85 ಸಾವಿರ ದುಬಾರಿ ವಾಲೆಟ್

ವಿರಾಟ್ ಕೊಹ್ಲಿಯ ಅತ್ಯಮೂಲ್ಯ ವಸ್ತುಗಳಲ್ಲಿ ಒಂದು ಅವರ ಹ್ಯಾಂಡ್ ಬ್ಯಾಗ್(Hand Bnag) ಒಳಗೊಂಡಿದೆ. ಅವರು ಲೊಯ್ಸ್ ಮೊಯ್ತೊಂಜಿ ಬ್ರಾಂಡ್‌ನ ಪರ್ಸ್ ಹೊಂದಿದ್ದಾರೆ, ಇದರ ಬೆಲೆ 85 ಸಾವಿರ ರೂಪಾಯಿಗಳು.

ಇದನ್ನೂ ಓದಿ : T20 World Cup: Ind vs Pak ಪಂದ್ಯಕ್ಕಾಗಿ ಲಕ್ಷಗಳಲ್ಲಿ ಮಾರಾಟವಾಗುತ್ತಿದೆ ಟಿಕೆಟ್

ಖಾಸಗಿ ವಿಮಾನ ಹೊಂದಿರುವ ಕೊಹ್ಲಿ 

ವಿರಾಟ್ ಕೊಹ್ಲಿ ಖಾಸಗಿ ಜೆಟ್(Kohli private jet) ಹೊಂದಿದ್ದು, ಇದರ ಬೆಲೆ 125 ಕೋಟಿ. ಕೊಹ್ಲಿ ತನ್ನ ಪತ್ನಿ ಮತ್ತು ಮಗಳು ಪ್ರಯಾಣಿಸಲು ಈ ಜೆಟ್ ಅನ್ನು ಬಳಸುತ್ತಾರೆ. ವಿರಾಟ್ ಮತ್ತು ಅನುಷ್ಕಾ ತುಂಬಾ ಐಷಾರಾಮಿ ಜೀವನ ನಡೆಸುತ್ತಾರೆ. ಅವರ ವಾರ್ಷಿಕ ಗಳಿಕೆ $ 26 ಮಿಲಿಯನ್ (ರೂ 196 ಕೋಟಿ).

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News