ನವದೆಹಲಿ : ಐಪಿಎಲ್ 2021 ರಲ್ಲಿ (IPL 2021) ಎಂಎಸ್ ಧೋನಿಯ ತಂಡ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಧೂಳೆಬ್ಬಿಸುತ್ತಿದೆ. ಪ್ರಸಕ್ತ ಋತುವಿನ ಪ್ಲೇಆಫ್ ಗೆ Yellow Army ಅರ್ಹತೆ ಪಡೆದಿದೆ. ಈ ಮಧ್ಯೆ ಅಭಿಮಾನಿಗಳಿಂದ ಕೇಳಿ ಬರುತ್ತಿರುವ ಅತಿದೊಡ್ಡ ಪ್ರಶ್ನೆಯೆಂದರೆ, ಮುಂದಿನ ವರ್ಷ ಐಪಿಎಲ್‌ನಲ್ಲಿ (IPL) ಧೋನಿ ಆದಲಿದ್ದಾರೆಯೇ ಎನ್ನುವುದು.
ಧೋನಿ ಐಪಿಎಲ್‌ನಿಂದ ಯಾವಾಗ ನಿವೃತ್ತರಾಗುತ್ತಾರೆ?
'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಚೆನ್ನೈ ಸೂಪರ್ ಕಿಂಗ್ಸ್ ನ ತವರು ಮೈದಾನವಾದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಐಪಿಎಲ್ ನ (IPL) ವಿದಾಯ ಪಂದ್ಯವನ್ನು ಆಡುವುದಾಗಿ ಸುಳಿವು ನೀಡಿದ್ದಾರೆ. ಎಂಎಸ್ ಧೋನಿ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಆದರೆ ಐಪಿಎಲ್ ಆಡುವುದನ್ನು ಮುಂದುವರಿಸಿದ್ದಾರೆ. ಧೋನಿ (Dhoni) 2019 ರಿಂದ ಚೆಪಾಕ್ ಮೈದಾನದಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ.
ಇದನ್ನೂ ಓದಿ : IPL 2021, RCB vs SRH: ಹೈದರಾಬಾದ್ ವಿರುದ್ಧ ಗೆಲುವಿನ ಉತ್ಸಾಹದಲ್ಲಿರುವ ವಿರಾಟ್ ಕೊಹ್ಲಿ ಪಡೆ
ಧೋನಿ ಈ ವರ್ಷ ನಿವೃತ್ತಿಯಾಗುವುದಿಲ್ಲ :
ಅಕ್ಟೋಬರ್ 5 ರಂದು ಇಂಡಿಯಾ ಸಿಮೆಂಟ್ಸ್‌ನ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ ಎಂಎಸ್ ಧೋನಿ (MS Dhoni), ನಾನು ಫೇರ್‌ವೆಲ್ ಆಟ ಆಡುವುದನ್ನು ನೋಡಬಹುದು. ಆದ್ದರಿಂದ ನನಗೆ ವಿದಾಯ ಹೇಳುವ ಅವಕಾಶವನ್ನು ಪಡೆಯುತ್ತೀರಿ ಎಂದು ಹೇಳಿದ್ದಾರೆ. ಅಲ್ಲದೆ, ಚೆನ್ನೈಗೆ ಬಂದು ನಮ್ಮ ಕೊನೆಯ ಆಟವನ್ನು ಆಡುವುದಾಗಿಯೂ ಹೇಳಿದ್ದಾರೆ. ಅಲ್ಲದೆ, ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿಯೂ ತಿಳಿಸಿದ್ದಾರೆ.
ಧೋನಿಯನ್ನು ಉಳಿಸಿಕೊಂಡ ಸಿಎಸ್‌ಕೆ:
ಐಪಿಎಲ್ 2022 ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಎಂಎಸ್ ಧೋನಿಯನ್ನು ರಿಟೇನ್ ಮಾಡಿಕೊಂಡಿದೆ ಎಂದು ಇಂಡಿಯಾ ಸಿಮೆಂಟ್ಸ್ ಅಧಿಕೃತವಾಗಿ ಘೋಷಿಸಿದೆ. ಮಾಹಿ ಮುಂದಿನ ವರ್ಷ 41 ವರ್ಷ ಪೂರೈಸುತ್ತಾರೆ. ಆದರೆ ಅವರು ಐಪಿಎಲ್ ಆಟವನ್ನು ಮುಂದುವರೆಸುವ ಸಾಧ್ಯತೆ ಇದೆ.
ಇದನ್ನೂ ಓದಿ : T20 ವಿಶ್ವ ಕಪ್ ಟೀಂನಲ್ಲಿ ಅಕ್ಟೋಬರ್ 10 ರೊಳಗೆ ಆಗಲಿದೆ ಭಾರೀ ಬದಲಾವಣೆ , ಈ ಮೂವರು ಆಟಗಾರರ ಮೇಲೆ ತೂಗುಗತ್ತಿ
ಇಂಡಿಯಾ ಸಿಮೆಂಟ್ಸ್ ನ ಅಧಿಕಾರಿಯೊಬ್ಬರು Cricbuzz ಜೊತೆ ಮಾತನಾಡುತ್ತಾ, ನಾವು ಧೋನಿಯನ್ನು ರಿಟೇನ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಧೋನಿ ಮುಂದಿನ ವರ್ಷ ಸಿಎಸ್‌ಕೆಯಲ್ಲಿಯೇ (CSK) ಇರುತ್ತಾರೆ. ಅಲ್ಲದೆ, ನಂತರವೂ ತಂಡದಲ್ಲಿ ಇರಬಹುದು. ಈ ಬಗ್ಗೆ ಈಗಲೇ ಏನನ್ನೂ ನಿರ್ಧರಿಸಲಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಅವರೇ ಹೇಳಿದಂತೆ ಧೋನಿ ವಿದಾಯ ಪಂದ್ಯ ಚೆನ್ನೈನಲ್ಲಿಯೇ ನಡೆಯಲಿದೆ. ಇದು ಮುಂದಿನ ವರ್ಷವೇ ಆಗಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.