RCB ಜೊತೆ ಕೆಇಐ ಇಂಡಸ್ಟ್ರೀಸ್ ಲಿಮಿಟೆಡ್ ಪಾಲುದಾರಿಕೆ: ಜರ್ಸಿ ಅನಾವರಣ
KEI Industries Limited Partnership with RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಜರ್ಸಿಯ ಹಿಂಭಾಗದಲ್ಲಿ ಕೆಇಐ ಇಂಡಸ್ಟ್ರೀಸ್ ಲೋಗೋ ಇರಲಿದೆ. ಅಲ್ಲದೇ ತನ್ನ ಬ್ರ್ಯಾಂಡ್ ಪ್ರಚಾರದ ಉದ್ದೇಶಗಳಿಗೆ ಆರ್ ಸಿ ಬಿ ತಂಡದ ಲೋಗೋ ಮತ್ತು ಆಟಗಾರರ ಚಿತ್ರಗಳನ್ನ ಬಳಸಿಕೊಳ್ಳುವ ಹಕ್ಕನ್ನ ಕೆಇಐ ಪಡೆದುಕೊಂಡಿದೆ.
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್’ನ 16ನೇ ಆವೃತ್ತಿಗೂ ಮುನ್ನ RCB ತಂಡದೊಂದಿಗೆ ಕೆಇಐ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಪ್ರಧಾನ ಸಹಭಾಗಿತ್ವ ಘೋಷಿಸಿದೆ. ಎಲೆಕ್ಟ್ರಿಕ್ ವೈರ್ ಮತ್ತು ಕೇಬಲ್ ತಯಾರಿಕೆಯಲ್ಲಿ ದೇಶದ ಮುಂಚೂಣಿ ಉತ್ಪಾದಕ ಕಂಪನಿಯಾಗಿರುವ ಕೆಇಐ ಇಂಡಸ್ಟ್ರೀಸ್ ಮುಂದಿನ ಮೂರು ವರ್ಷಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗೆ ಪ್ರಧಾನ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ: IPL 2023 ಪ್ರಾರಂಭಕ್ಕೂ ಮುನ್ನ ಚೆನ್ನೈ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್: ಧೋನಿ ಸಹ-ಆಟಗಾರ ಆಡೋದು ಡೌಟ್
ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಜರ್ಸಿಯ ಹಿಂಭಾಗದಲ್ಲಿ ಕೆಇಐ ಇಂಡಸ್ಟ್ರೀಸ್ ಲೋಗೋ ಇರಲಿದೆ. ಅಲ್ಲದೇ ತನ್ನ ಬ್ರ್ಯಾಂಡ್ ಪ್ರಚಾರದ ಉದ್ದೇಶಗಳಿಗೆ ಆರ್ ಸಿ ಬಿ ತಂಡದ ಲೋಗೋ ಮತ್ತು ಆಟಗಾರರ ಚಿತ್ರಗಳನ್ನ ಬಳಸಿಕೊಳ್ಳುವ ಹಕ್ಕನ್ನ ಕೆಇಐ ಪಡೆದುಕೊಂಡಿದೆ.
ಬೆಂಗಳೂರಿನ ಖಾಸಗಿ ಹೋಟೆಲ್’ನಲ್ಲಿ ನಡೆದ ಸಮಾರಂಭದಲ್ಲಿ ಕೆಇಐ ಇಂಡಸ್ಟ್ರೀಸ್ ಲಿಮಿಟೆಡ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಗುಪ್ತಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸೀಸ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಮಹಿಪಾಲ್ ಲಾಮ್ರೋರ್ ಜೊತೆ ಕೆಇಐ ಲೋಗೋ ಇರುವ ಜರ್ಸಿಯನ್ನ ಅನಾವರಣಗೊಳಿಸಲಾಯಿತು.
ಇದನ್ನೂ ಓದಿ: CSK: ಮತ್ತೆ ಮೋಡಿ ಮಾಡುತ್ತಾ ಧೋನಿ ಮ್ಯಾಜಿಕ್! ಚೆನ್ನೈಗೆ ಇದು ಸಹಕರಿಸಿದ್ರೆ, ಅದು ಮುಳುವಾಗುತ್ತೆ! ಏನದು ಗೊತ್ತಾ?
ಎಲೆಕ್ಟ್ರಿಕ್ ವೈರ್, ಕೇಬಲ್ ಉತ್ಪಾದನಾ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕೆಇಐ ಇಂಡಸ್ಟ್ರೀಸ್ ಕ್ರಿಕೆಟ್ ಕ್ಷೇತ್ರಕ್ಕೆ 2016ರಲ್ಲಿ ಕಾಲಿಟ್ಟಿದ್ದು, ಪಂಜಾಬ್ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ತಂಡದ ಜೊತೆಗೆ ಸಹಭಾಗಿತ್ವ ಹೊಂದಿತ್ತು. ಪ್ರೋ ಕಬಡ್ಡಿ ಲೀಗ್ ಹಾಗೂ ಫುಟ್‌ಬಾಲ್ ಲೀಗ್‌ಗಳಲ್ಲಿಯೂ ಕೆಇಐ ಸಹಭಾಗಿತ್ವ ಹೊಂದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.