Vaishnodevi Temple: ಚೈತ್ರ ನವರಾತ್ರಿ ನಿಮಿತ್ತ ಕತ್ರಾ ಸೇರಿದಂತೆ ವೈಷ್ಣೋದೇವಿ ಭವನದಲ್ಲಿ ವೈಭವದ ಅಲಂಕಾರ ಮಾಡಲಾಗಿದೆ. ಕಟ್ಟಡದ ಅಲಂಕಾರ ಹಾಗೂ ಧಾರ್ಮಿಕ ವಾತಾವರಣಕ್ಕೆ ಭಕ್ತರು ಮನಸೋತಿರೋದಂತು ನಿಜ. ಪ್ರತಿ ಬಾರಿಯಂತೆ ಈ ಬಾರಿಯೂ ಮಾತೆಯ ಆಸ್ಥಾನದ ಅಲಂಕಾರ ವಿಭಿನ್ನ, ಭವ್ಯ ಹಾಗೂ ವಿಶಿಷ್ಟವಾಗಿದೆ. ದೇವಸ್ಥಾನ ಮತ್ತು ಕಟ್ಟಡವನ್ನು ಸುಮಾರು 40 ಟ್ರಕ್ ಲೋಡ್ ಹೂವುಗಳಿಂದ ಅಲಂಕರಿಸಲಾಗಿದೆ. ಅಂಕಿ ಅಂಶದ ಪ್ರಕಾರ ಇದುವರೆಗೆ ಎರಡೂವರೆ ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
ಚೈತ್ರ ನವರಾತ್ರಿಯ ಸಂದರ್ಭದಲ್ಲಿ, ಕತ್ರಾ ಸೇರಿದಂತೆ ವೈಷ್ಣೋದೇವಿ ಮಾತಾ ದೇವಾಲಯದಲ್ಲಿ ಅದ್ಭುತ ಮತ್ತು ದೈವಿಕ ಅಲಂಕಾರಗಳನ್ನು ಮಾಡಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಮಾತಾ ರಾಣಿಯ ಆಸ್ಥಾನದ ಅಲಂಕಾರ ವಿಭಿನ್ನ, ಭವ್ಯ ಹಾಗೂ ವಿಶಿಷ್ಟವಾಗಿದೆ. ಇನ್ನು ಇಲ್ಲಿನ ಕಟ್ಟಡವನ್ನು ಎರಡು ಟ್ರಕ್ ಹಣ್ಣುಗಳು ಮತ್ತು 40 ಟ್ರಕ್ ಹೂವುಗಳಿಂದ ಅಲಂಕರಿಸಲಾಗಿದೆ.
ಒಂದು ಅಂಕಿ ಅಂಶದ ಪ್ರಕಾರ, ನವರಾತ್ರಿಯಲ್ಲಿಯೂ ಸಹ ಎರಡೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ಮಾತೆ ವೈಷ್ಣೋ ದೇವಿಯ ದರ್ಶನ ಪಡೆದಿದ್ದಾರೆ.
ನಿರ್ಮಿತ ಮತ್ತು ನೈಸರ್ಗಿಕ ಗುಹೆಯ ಹೊರಗೆ ಬಹುಕಾಂತೀಯ ಅಲಂಕಾರಗಳು ಕಂಡುಬರುತ್ತಿವೆ. ವಿಶೇಷವಾದ ಚೆಂಡುಹೂವು, ಗುಲಾಬಿ, ಮಲ್ಲಿಗೆ, ಸುಗಂಧರಾಜ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಎಲ್ಲೆಡೆ ಘಮಿಸುತ್ತಿದೆ
ಕಳೆದ ವರ್ಷ ಚೈತ್ರ ನವರಾತ್ರಿಗೆ ಎರಡೂವರೆ ಲಕ್ಷ ಭಕ್ತರು ಭೇಟಿ ನೀಡಿದ್ದರು. ಈ ಬಾರಿ ಈ ಅಂಕಿ ಅಂಶ ಹೊಸ ದಾಖಲೆ ಸೃಷ್ಟಿಸಲಿದೆ.
ಈ ಬಾರಿ 2.75 ಲಕ್ಷಕ್ಕೂ ಅಧಿಕ ಭಕ್ತರು ಅಮ್ಮನವರ ದರ್ಶನ ಪಡೆಯುವ ನಿರೀಕ್ಷೆ ಇದೆ. ನವರಾತ್ರಿಯಂದು ಭವನದಲ್ಲಿ ನಡೆಯಲಿರುವ ಷಟ್ಚಂಡಿ ಮಹಾಯಜ್ಞ ಭಕ್ತರನ್ನು ಮತ್ತಷ್ಟು ಆಕರ್ಷಿಸುತ್ತದೆ.
ಇನ್ನು ಅಗ್ನಿಸಾಕ್ಷಿಯ ನಟಿ ವೈಷ್ಣವಿ ಗೌಡ ಹುಟ್ಟುವುದಕ್ಕೂ ಮುನ್ನ ಈ ದೇಗುಲಕ್ಕೆ ಅವರ ಪೋಷಕರು ಹರಕೆ ಹೊತ್ತಿದ್ದರಂತೆ. ಆ ಬಳಿಕ ಅವರಿಗೆ ಆ ದೇವಿಯ ಹೆಸರಿಡಲಾಯಿತು ಎಂದು ಸತಃ ಅವರೇ ಹೇಳಿದ್ದರು. ಬಿಗ್ ಬಾಸ್’ನಲ್ಲಿ ಒಂದೊಮ್ಮೆ ಶಂಕರ್ ಅಶ್ವತ್ಥ್ ಅವರು ಈ ಬಗ್ಗೆ ಮಾತನಾಡಿದಾಗ ವೈಷ್ಣವಿ ಇದು ನಿಜ ಎಂದು ಹೇಳಿದ್ದರು.