ನವದೆಹಲಿ: 2 ಬಾರಿಯ ಚಾಂಪಿಯನ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಶುಕ್ರವಾರದಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಆವೃತ್ತಿಗಾಗಿ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2022 ಗೆ ದಿಡೀರ್ ಎಂಟ್ರಿ ನೀಡಿದ ಅಪಾಯಕಾರಿ ಬೌಲರ್‌!


ಕೊಲ್ಕತ್ತಾ ತಂಡವು ಎಂದಿನಂತೆ ತಮ್ಮ ಸಾಂಪ್ರದಾಯಿಕ ಬಣ್ಣಗಳೊಂದಿಗೆ ಅಂಟಿಕೊಂಡಿದೆ ಆದರೆ, ಹೊಸ ಜೆರ್ಸಿಯು ಅವರ ಕಿಟ್‌ನಲ್ಲಿ ಹೆಚ್ಚಿನ ಚಿನ್ನದ ಪ್ಯಾಲೆಟ್ ಅನ್ನು ಹೊಂದಿದೆ. ಜರ್ಸಿಯ ಕೆಳಗಿನ ಭಾಗವು ಸ್ಪೂರ್ತಿದಾಯಕ ವಿನ್ಯಾಸವನ್ನು ಹೊಂದಿದ್ದು, ಅದು ಒಟ್ಟಾರೆಯಾಗಿ ಚೆನ್ನಾಗಿದೆ.ನಾಯಕ ಶ್ರೇಯಸ್ ಅಯ್ಯರ್ (Shreyas Iyer ) ಅವರ ಧ್ವನಿಯನ್ನು ಒಳಗೊಂಡಿರುವ ವೀಡಿಯೊದೊಂದಿಗೆ ಕೆಕೆಆರ್ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ.


ಇದನ್ನೂ ಓದಿ: ಆಯ್ಕೆದಾರರಿಗೆ ಸಿಕ್ಕಿದ್ದಾರೆ ಹೊಸ ಹಿಟ್‌ಮ್ಯಾನ್; ಈ ಬ್ಯಾಟ್ಸ್‌ಮನ್ ರೋಹಿತ್‌ಗಿಂತ ಹೆಚ್ಚು ಅಪಾಯಕಾರಿ!


"ಇವುಗಳು ಉತ್ಸಾಹದಿಂದ ಹುಟ್ಟಿದ ಎಳೆಗಳು. ಅದೇ ಉತ್ಸಾಹ ಅದನ್ನು ಧರಿಸುವವರನ್ನು ಓಡಿಸುತ್ತದೆ. ಜ್ವಾಲೆಗಳು ನಮ್ಮೊಳಗೆ ಆಳವಾಗಿ ಉರಿಯುತ್ತವೆ, ಗೆಲ್ಲಲು ಬೆಂಕಿಯನ್ನು ಬಗ್ಗಿಸುತ್ತವೆ. ನಾವು ಹೃದಯಗಳನ್ನು ಸೆರೆಹಿಡಿಯುವಾಗ ಹೊಸ ಸವಾಲುಗಳನ್ನು ಜಯಿಸಲು ಸಹಕಾರಿಯಾಗುತ್ತದೆ.ಇದು ನೈಟ್ಸ್, ಟ್ರೈಲ್ಬ್ಲೇಜರ್ಸ್ನ, ಸ್ಟಾರ್‌ಗೇಜರ್ಸ್, ಗೇಮ್ ಚೇಂಜರ್ಸ್ ಪ್ರತೀಕವಾಗಿರುವ ಸಮವಸ್ತ್ರವಾಗಿದೆ. ಈಗ ಮಿಂಚುವ ಸಮಯದ ಬಂದಿದೆ. ಇದಕ್ಕೆ ಕೆಕೆಆರ್ ಸಿದ್ಧವಾಗಿದೆ" ಎಂದು ಅಯ್ಯರ್ ವಿಡಿಯೋದಲ್ಲಿ ಹೇಳಿದ್ದಾರೆ.


IPL 2022: ಲಕ್ನೋ ತಂಡಕ್ಕೆ ಬಿಗ್ ಶಾಕ್, ಐಪಿಎಲ್ ನಿಂದ ಹೊರಕ್ಕೆ ಬಿದ್ದ ಈ ಆಟಗಾರ..!


ಈ ಬಾರಿ ಕೊಲ್ಕತ್ತಾ ತಂಡದ ನೂತನ ನಾಯಕನಾಗಿ ಇಯಾನ್ ಮೋರ್ಗನ್ ಬದಲಿಗೆ ಶ್ರೇಯಸ್ ಅಯ್ಯರ್ ನೇಮಕವಾಗಿದ್ದಾರೆ, ಅವರು ಕಳೆದ ಬಾರಿ 2021 ರ ಆವೃತ್ತಿಯಲ್ಲಿ ತಂಡವನ್ನು ಫೈನಲ್ ವರೆಗೆ ಮುನ್ನಡೆಸಿದ್ದರು, ಆದರೆ ಅವರು ಅಷ್ಟಾಗಿ ಫಾರ್ಮ್ ನಲ್ಲಿ ಇಲ್ಲದೆ ಇರುವುದರಿಂದ ಈ ಬಾರಿಯ ಹರಾಜಿನಲ್ಲಿ ಅವರನ್ನು ಯಾವುದೇ ತಂಡವು ಖರೀದಿಸಲು ಮುಂದಾಗಿರಲಿಲ್ಲ.


ಕೋಲ್ಕತ್ತಾ ನೈಟ್ ರೈಡರ್ಸ್ ಮಾರ್ಚ್ 26 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ IPL 2022 ರ ಅಭಿಯಾನವನ್ನು ಪ್ರಾರಂಭಿಸಲಿದೆ.


ಕೆಕೆಆರ್ ತಂಡ: ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನೀಲ್ ನರೈನ್, ಶ್ರೇಯಸ್ ಅಯ್ಯರ್, ಪ್ಯಾಟ್ ಕಮ್ಮಿನ್ಸ್, ನಿತೀಶ್ ರಾಣಾ, ಶಿವಂ ಮಾವಿ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅನುಕುಲ್ ರಾಯ್, ರಸಿಖ್ ದರ್ಜಿತ್, ಅಶ್ಬಾ ಕರುಣಾರತ್ನ, ಅಶ್ಬಾ ಕರುಣಾರತ್ನ, ಅಶ್ಬಾ ಕರುಣಾರತ್ನೆ , ಪ್ರಥಮ್ ಸಿಂಗ್, ಅಭಿಜೀತ್ ತೋಮರ್, ಸ್ಯಾಮ್ ಬಿಲ್ಲಿಂಗ್ಸ್, ಅಲೆಕ್ಸ್ ಹೇಲ್ಸ್, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಅಮನ್ ಖಾನ್, ಉಮೇಶ್ ಯಾದವ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.