Kuldeep Yadav : ಡಿಸೆಂಬರ್ 14, 2023 ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಕುಲದೀಪ್ ಯಾದವ್‌ ಪಾಲಿಗೆ ಅಭಲ ವಿಶೇಷವಾಗಿತ್ತು. ಹೌದು, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಕುಲದೀಪ್ ಯಾದವ್ ಅದ್ಭುತವಾಗಿ ಬೌಲಿಂಗ್ ಮಾಡಿ,  ಐದು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಈ ಮೂಲಕ 5 ವಿಕೆಟ್ ಕಬಳಿಸಿ, ಆತಿಥೇಯ ತಂಡವನ್ನು 95 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತ  ಯಶಸ್ವಿಯಾಯಿತು. ಅಲ್ಲದೆ ಕುಲದೀಪ್ ಯಾದವ್ ಕೂಡಾ ತಮ್ಮ ಹೆಸರಿನಲ್ಲಿ ಹಲವು ದೊಡ್ಡ ದಾಖಲೆಗಳನ್ನು  ಸೇರಿಕೊಳ್ಳುವಲ್ಲಿ  ಯಶಸ್ವಿಯಾಗಿದರು. ಅಂದ ಹಾಗೆ ನಿನ್ನೆ ಕುಲದೀಪ್ ಯಾದವ್ ಜನ್ಮ ದಿನ ಕೂಡಾ ಆಗಿತ್ತು ಎನ್ನುವುದು ವಿಶೇಷ.  


COMMERCIAL BREAK
SCROLL TO CONTINUE READING

6 ಎಸೆತಗಳಲ್ಲಿ 4 ವಿಕೆಟ್  : 
ಈ ಪಂದ್ಯದಲ್ಲಿ ಕುಲದೀಪ್ ಯಾದವ್ ತಮ್ಮ ಸ್ಪಿನ್ ಬೌಲ್ ನಿಂದ ಡೊನೊವನ್ ಫೆರೇರಾ ಅವರನ್ನು  ಕ್ಲೀನ್ ಬೌಲ್ಡ್ ಮಾಡಿದರು. ಇದಾದ ನಂತರ ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಕಳಚುತ್ತಲೇ ಹೋಯಿತು. ಕುಲದೀಪ್ 5 ಎಸೆತಗಳಲ್ಲಿ 4 ವಿಕೆಟ್ ಪಡೆದರು. ಈ ಸ್ಪಿನ್ನರ್ ಎರಡನೇ ಇನಿಂಗ್ಸ್ ನ 11ನೇ ಓವರ್ ನ ಕೊನೆಯ ಎಸೆತದಲ್ಲಿ ಕೇಶವ್ ಮಹಾರಾಜ್ ಅವರನ್ನು ಬೌಲ್ಡ್ ಮಾಡಿದರು. ಇದಾದ ಬಳಿಕ ತಮ್ಮ ಮುಂದಿನ ಓವರ್ (13ನೇ) ನ ಮೊದಲ ಎಸೆತದಲ್ಲಿಯೇ ನಾಂದ್ರೆ ಬರ್ಗರ್ ಅವರನ್ನು ಎಲ್ ಬಿಡಬ್ಲ್ಯುಗೆ ಔಟ್ ಮಾಡಿದರು. ಆ ಓವರ್‌ನ ಎರಡನೇ ಎಸೆತ ಡಾಟ್ ಆಗಿತ್ತು. ಮೂರನೇ ಎಸೆತದಲ್ಲಿ ಲಿಜಾಡ್ ವಿಲಿಯಮ್ಸ್ ಲೆಗ್ ಬಿಫೋರ್  ವಿಕೆಟ್ ಬಿತ್ತು. ನಾಲ್ಕನೇ ಎಸೆತದಲ್ಲಿ 1 ರನ್ ಗಳಿಸಲಾಯಿತು. ಕುಲದೀಪ್ ಮುಂದಿನ ಎಸೆತದಲ್ಲಿ ಡೇವಿಡ್ ಮಿಲ್ಲರ್ ಅವರ ದೊಡ್ಡ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದರು. 


ಇದನ್ನೂ  ಓದಿ : ಐಪಿಎಲ್‌ನಲ್ಲಿ ಅತ್ಯಧಿಕ ಬ್ರಾಂಡ್ ವ್ಯಾಲ್ಯೂ ಹೊಂದಿರುವ ತಂಡ ಇದು !


 ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ :
ಈ ಐದು ವಿಕೆಟ್ ಗಳಿಕೆಯೊಂದಿಗೆ, ಕುಲದೀಪ್ ಯಾದವ್ T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಸಾಧನೆಗಳನ್ನು ಮಾಡಿದ ಮೊದಲ ಭಾರತೀಯ ಸ್ಪಿನ್  ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು, ಅವರು 2018 ರಲ್ಲಿ ಇಂಗ್ಲೆಂಡ್ ವಿರುದ್ಧ 24 ರನ್‌ ನೀಡಿ 5 ವಿಕೆಟ್ ಕಬಳಿಸಿದ್ದರು. ಇದಕ್ಕೂ ಮೊದಲು, ಶ್ರೀಲಂಕಾದ ವನಿಂದು ಹಸರಂಗಾ 2021 ರಲ್ಲಿ ತಮ್ಮ ಜನ್ಮದಿನದಂದು 9 ರನ್‌ಗಳಿಗೆ 4 ವಿಕೆಟ್ ಪಡೆದಡಿದ್ದರು. 


ಟೀಂ ಇಂಡಿಯಾ ಉತ್ತಮ ಪ್ರದರ್ಶನ : 
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಸೂರ್ಯಕುಮಾರ್ ಯಾದವ್ ಅವರ ಬಿರುಸಿನ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು. ಸೂರ್ಯ ಹೊರತುಪಡಿಸಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 60 ರನ್‌ಗಳ ಇನ್ನಿಂಗ್ಸ್ ಆಡಿದರು. ಉತ್ತರವಾಗಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಕೇವಲ 95 ರನ್‌ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ಈ  ಪಂದ್ಯವನ್ನು 106 ರನ್‌ಗಳಿಂದ ಗೆದ್ದುಕೊಂಡಿದೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಇದುವರೆಗಿನ ಅತಿದೊಡ್ಡ T20I ಗೆಲುವು. 


ಇದನ್ನೂ  ಓದಿ : ಟೆಸ್ಟ್’ನಲ್ಲಿ 3 ದ್ವಿಶತಕ ಬಾರಿಸಿದ ಈ ಆಟಗಾರ ದ.ಆಫ್ರಿಕಾ ಸರಣಿಯಿಂದ ಔಟ್: ಭಾರತ ಬಿಟ್ಟು ವಿದೇಶದಲ್ಲಿ ಆಡಲು ಟೆಸ್ಟ್ ಸ್ಪೆಷಲಿಸ್ಟ್ ಸಜ್ಜು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ