IPL Valuation : ಐಪಿಎಲ್ 2024 ರ ಕಿರು ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ 333 ಆಟಗಾರರ ಮೇಲೆ ಬಿಡ್ ಮಾಡಲಾಗುತ್ತದೆ. ಇದಕ್ಕೂ ಮುನ್ನ, ಈ ಟೂರ್ನಿಯಲ್ಲಿ ಇದುವರೆಗೆ ಅತಿ ಹೆಚ್ಚು ಬ್ರಾಂಡ್ ಮೌಲ್ಯ ಹೊಂದಿರುವ ತಂಡ ಯಾವುದು ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಒಂದು ವೇಳೆ ಆ ತಂಡ ಮಹೇಂದ್ರ ಸಿಂಗ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಎಂದು ಯೋಚಿಸುತ್ತಿದ್ದರೆ, ನಿಮ್ಮ ಯೋಚನೆ ತಪ್ಪು.
ಇದೇ ಅತಿ ಹೆಚ್ಚು ಬ್ರಾಂಡ್ ಮೌಲ್ಯ ಹೊಂದಿರುವ ಐಪಿಎಲ್ ತಂಡ :
ಕಳೆದ ಐಪಿಎಲ್ ಋತುವಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ , ಗುಜರಾತ್ ಟೈಟಾನ್ಸ್ ಅನ್ನು ಸೋಲಿಸುವ ಮೂಲಕ ಧೋನಿ ನಾಯಕತ್ವದಲ್ಲಿ ಐದನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು. ಮುಂಬೈ ಇಂಡಿಯನ್ಸ್ ಜೊತೆಗೆ ಸಿಎಸ್‌ಕೆ ಅತಿ ಹೆಚ್ಚು ಐಪಿಎಲ್ ಟ್ರೋಫಿಗಳನ್ನು ಗೆದ್ದ ತಂಡವಾಗಿದೆ. ಎರಡೂ ತಂಡಗಳು ತಮ್ಮ ಖಾತೆಯಲ್ಲಿ 5-5 ಐಪಿಎಲ್ ಟ್ರೋಫಿಗಳನ್ನು ಹೊಂದಿವೆ. ಬ್ರ್ಯಾಂಡ್ ಫೈನಾನ್ಸ್ ನ ವರದಿ ಪ್ರಕಾರ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಹೆಚ್ಚು ಬ್ರಾಂಡ್ ಮೌಲ್ಯವನ್ನು ಹೊಂದಿರುವ ತಂಡವಾಗಿದೆ.
ಇದನ್ನೂ ಓದಿ : ಟೆಸ್ಟ್’ನಲ್ಲಿ 3 ದ್ವಿಶತಕ ಬಾರಿಸಿದ ಈ ಆಟಗಾರ ದ.ಆಫ್ರಿಕಾ ಸರಣಿಯಿಂದ ಔಟ್: ಭಾರತ ಬಿಟ್ಟು ವಿದೇಶದಲ್ಲಿ ಆಡಲು ಟೆಸ್ಟ್ ಸ್ಪೆಷಲಿಸ್ಟ್ ಸಜ್ಜು
ಚೆನ್ನೈ ಎರಡನೇ ಸ್ಥಾನದಲ್ಲಿದೆ :
ವರದಿಯ ಪ್ರಕಾರ ಮುಂಬೈ ಇಂಡಿಯನ್ಸ್ ಅತ್ಯಧಿಕ ಬ್ರಾಂಡ್ ಮೌಲ್ಯದೊಂದಿಗೆ (725 ಕೋಟಿ) ಅಗ್ರಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ 672 ಕೋಟಿ ರೂ (80.6 ಮಿಲಿಯನ್ ಯುಎಸ್ ಡಾಲರ್) ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಎರಡು ತಂಡಗಳ ನಡುವೆ ಬಹಳ ವ್ಯತ್ಯಾಸವಿದೆ. ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ರ್ಯಾಂಡ್ ಮೌಲ್ಯ ಸುಮಾರು 655 ಕೋಟಿ (US $ 78.6 ಮಿಲಿಯನ್) ಯಾಗಿದ್ದು, ಮೂರನೇ ಸ್ಥಾನದಲ್ಲಿದೆ.
ಎಲ್ಲಾ IPL ತಂಡಗಳ ಬ್ರಾಂಡ್ ಮೌಲ್ಯ :
ಮುಂಬೈ ಇಂಡಿಯನ್ಸ್ - 725 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್ - 672 ಕೋಟಿ
ಕೋಲ್ಕತ್ತಾ ನೈಟ್ ರೈಡರ್ಸ್ - 655 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು - 582 ಕೋಟಿ
ಗುಜರಾತ್ ಟೈಟಾನ್ಸ್ - 545 ಕೋಟಿ
ದೆಹಲಿ ಕ್ಯಾಪಿಟಲ್ಸ್ -- 537 ಕೋಟಿ
ರಾಜಸ್ಥಾನ ರಾಯಲ್ಸ್ - 521 ಕೋಟಿ
ಸನ್ ರೈಸರ್ಸ್ ಹೈದರಾಬಾದ್ - 401 ಕೋಟಿ
ಲಕ್ನೋ ಸೂಪರ್ ಜೈಂಟ್ - 391 ಕೋಟಿ
ಪಂಜಾಬ್ ಕಿಂಗ್ಸ್ - 377 ಕೋಟಿ
ಇದನ್ನೂ ಓದಿ : ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಸಿದ್ದ -ಸಚಿವ ಬಿ.ನಾಗೇಂದ್ರ
2023 ರಲ್ಲಿ ಐಪಿಎಲ್ ಮೌಲ್ಯವು 28% ಹೆಚ್ಚಾಗಿದೆ :
ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮೌಲ್ಯಮಾಪನವು 2022 ರಲ್ಲಿ 8.4 ಬಿಲಿಯನ್ ಡಾಲರ್ ನಿಂದ 10.7 ಬಿಲಿಯನ್ ಡಾಲರ್ ಗೆ ಏರಿದೆ. ಅಂದರೆ ಇದರಲ್ಲಿ ಸುಮಾರು 28% ಹೆಚ್ಚಳವಾಗಿದೆ. ಐಪಿಎಲ್ ವ್ಯವಸ್ಥೆಯ ಒಟ್ಟು ಬ್ರ್ಯಾಂಡ್ ಮೌಲ್ಯವು 2008 ರಿಂದ 433% ಹೆಚ್ಚಾಗಿದೆ. ಬ್ರ್ಯಾಂಡ್ ಫೈನಾನ್ಸ್‌ನ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.