ನವದೆಹಲಿ: ತಂತ್ರಜ್ಞಾನ ಕ್ಷೇತ್ರದಲ್ಲಾಗುವ ಮಹತ್ವಪೂರ್ಣ ಬದಲಾವಣೆಗಳನ್ನು ನಾವು ದಿನ ನಿತ್ಯ ಕಾಣುತ್ತಿದ್ದೇವೆ. ಹೊಸ ಹೊಸ ಆವಿಷ್ಕಾರಗಳು ನಮ್ಮ ಕಣ್ಣ ಮುಂದಿವೆ. ಮೊಬೈಲ್ ನೆಟ್ ವರ್ಕ್( Mobile Network) ನಲ್ಲಿಯೂ ಕ್ಷಿಪ್ರ ಗತಿಯಲ್ಲಿ ಬದಲಾವಣೆಯಾಗುತ್ತಿದೆ. ಎಷ್ಟರ ಮಟ್ಟಿಗೆ ಎಂದರೆ ಒಂದು ಇಡೀ ಫಿಲಂ ಕೇವಲ ಸೆಕೆಂಡುಗಳಲ್ಲಿ ಡೌನ್ ಲೋಡ್ (Download) ಆಗಬಹುದು.  2G, 3G, 4G ಬಳಿಕ 5G ಬಗ್ಗೆ ಬಹಳ ದಿನಗಳಿಂದ ಮಾತುಗಳು ಕೇಳಿ ಬರುತ್ತಿತ್ತು. ಇದೀಗ ಭಾರತಿ ಏರ್ ಟೆಲ್ (Bharati Airtel) 5G ಅನ್ನು ಘೋಷಿಸಿದೆ.  ಏರ್‌ಟೆಲ್ ಹೈದರಾಬಾದ್‌ನಲ್ಲಿ 5 ಜಿ ಸೇವೆಯನ್ನು ಕಮರ್ಷಿಯಲ್ ಡೆಮೋವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಈ ಮೂಲಕ ನೆಟ್‌ವರ್ಕ್ ಹೊಂದಿರುವ ದೇಶದ ಮೊದಲ ಟೆಲಿಕಾಂ ಕಂಪನಿ ಬ ಹೆಗ್ಗಳಿಕೆಗೆ ಪಾತ್ರವಾಗಿದೆ. . 


COMMERCIAL BREAK
SCROLL TO CONTINUE READING

5 ಜಿ 4 ಜಿ ಗಿಂತ 10 ಪಟ್ಟು ಹೆಚ್ಚಿರುವ ಸ್ಪೀಡ್ : 
5 ಜಿ 4 ಜಿಗಿಂತ 10 ಪಟ್ಟು ಹೆಚ್ಚಿನ ವೇಗವನ್ನು ಹೊಂದಿದೆ. 5 ಜಿ ನೆಟ್ ವರ್ಕ್ ಟೆಸ್ಟಿಂಗ್ ನ ವಿಡಿಯೋವೊಂದು ಹೊರ ಬಂದಿದೆ.  ಈ ವಿಡಿಯೋದ ಪ್ರಕಾರ, 5 ಜಿಯ ಸ್ಪೀಡ್ 4 ಜಿಗಿಂತ 10 ಪಟ್ಟು ಹೆಚ್ಚಿರಲಿದೆ. ಅಲ್ಲದೆ ಒಂದು ಜಿಬಿಯ ಫೈಲನ್ನು ಕೇವಲ 30 ಸೆಕೆಂಡ್ ಗಳಲ್ಲಿ ಡೌನ್ ಲೋಡ್ (Download) ಮಾಡಲಾಗಿದೆ. ಇಷ್ಟು ಮಾತ್ರವಲ್ಲದೆ ಒಂದು ಇಡೀ ಸಿನೆಮಾವನ್ನು  ಕೇವಲ ಸೆಕೆಂಡ್ ಗಳಲ್ಲೆ ಡೌನ್ ಲೋಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. 750ರಿಂದ 800 ಎಂಬಿಯ ಸಿನೆಮಾವನ್ನು(cinema) ಕೇವಲ ಕೇವಲ 20ರಿಂದ 25 ಸೆಕೆಂಡ್ ಗಳಲ್ಲಿ ಡೌನ್ ಲೋಡ್ ಮಾಡಬಹುದಾಗಿದೆ. 


ಇದನ್ನೂ ಓದಿ : WhatsApp New Features: WhatsAppನಲ್ಲಿಯೂ ಸಹ ಸೇರ್ಪಡೆಯಾಗಿವೆ ಹೊಸ ವೈಶಿಷ್ಟ್ಯಗಳು


ಏರ್ಟೆಲ್ (Airtel)5 ಜಿ ಇಂಟರ್ನೆಟ್ (Internet)ಸ್ಪೀಡ್ ಟೆಸ್ಟಿಂಗ್ ವೇಳೆ ಇದರ ಡೌನ್‌ಲೋಡ್ ವೇಗ 310 ಎಮ್‌ಬಿಪಿಎಸ್ ಆಗಿತ್ತು. ಮತ್ತು 5 ಜಿ ಮೋಡ್‌ನಲ್ಲಿ ಅಪ್‌ಲೋಡ್ ವೇಗ 65 ಎಮ್‌ಬಿಪಿಎಸ್ ಎಂದು ತೋರಿಸಿದೆ.


ಕೆಲವೇ ತಿಂಗಳುಗಳಲ್ಲಿ ಭಾರತದಲ್ಲಿ 5ಜಿ ತಂತ್ರಜ್ಞಾನ ಬರಲಿದೆ ಎಂದು ಸರ್ಕಾರ ಈಗಾಗಲೇ ಹೇಳಿತ್ತು. ದೇಶದಲ್ಲಿ 5 ಜಿ ತಂತ್ರಜ್ಞಾನದ ಪರೀಕ್ಷೆ ನಡೆಸಲು ಎಲ್ಲಾ ಸಿದ್ದತೆ ನಡೆದಿದೆ ಎಂದು ಸಚಿವ ರವಿಶಂಕರ್ ಪ್ರಸಾದ್ (Ravishankar Prasad) ಹೇಳಿದ್ದರು. 5ಜಿ ನೆಟ್ ವರ್ಕ್ ಮೇಡ್ ಇನ್ ಇಂಡಿಯಾವೇ ಆಗಿರಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿತ್ತು. 2ಜಿ, 3ಜಿ 4ಜಿ ಲಾಂಚ್ ಮಾಡುವಲ್ಲಿ ಸ್ವಲ್ಪ ಹಿಂದುಳಿದಿದ್ದರೂ 5ಜಿ ತಂತ್ರಜ್ಞಾನದ ವಿಷಯದಲ್ಲಿಕೆಲಸ ಶೀಘ್ರವಾಗಿಯೇ ಸಾಗಿದೆ. 


ಇದನ್ನೂ ಓದಿ : WhatsApp ಚ್ಯಾಟ್ ಹಿಸ್ಟರಿಯನ್ನು Telegramಗೆ ವರ್ಗಾಯಿಸುವುದು ಬಲು ಸುಲಭ , ಇಲ್ಲಿದೆ ಮಾಹಿತಿ


4ಜಿಗೆ ಹೋಲಿಸಿದರೆ 5ಜಿ ಅತ್ಯಂತ ವೇಗವನ್ನು ಹೊಂದಿದೆ. ಇದು ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಲಿದೆ ಎನ್ನಲಾಗಿದೆ. 4ಜಿಯಲ್ಲಿ ಇಂಟರ್ ನೆಟ್ ಸ್ಪೀಡ್ (Internet Speed) 45 ಎಂಬಿಪಿಎಸ್ ನದ್ದಾಗಿತ್ತು. ಆದರೆ 5 ಜಿಯಲ್ಲಿ ಇದು 1000 ಎಂಬಿಪಿಎಸ್ ವರೆಗೆ ತಲುಪಲಿದೆ. ಇದಕ್ಕಾಗಿ ಬಹಳಷ್ಟು ಸಂಖ್ಯೆಯಲ್ಲಿ ಸಣ್ಣ ಸಣ್ಣ ಆಂಟೆನಾಗಳನ್ನು ಅಳವಡಿಸಲಾಗುವುದು. ಇದರಿಂದ ಇಂಟರ್ ನೆಟ್ ಜಗತ್ತಿನಲ್ಲಿ ಭಾರೀ ಬದಲಾವಣೆಯಾಗಲಿದೆ. 


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.