Tata Tigor CNG: ಪ್ರಸ್ತುತ ಭಾರತದಲ್ಲಿ ಮೂರನೇ ಅತಿದೊಡ್ಡ ಕಾರು ಮಾರಾಟ ಕಂಪನಿಯಾಗಿ ಖ್ಯಾತಿ ಪಡೆದಿರುವ ಟಾಟಾ ಮೋಟಾರ್ಸ್,  ಹ್ಯಾಚ್‌ಬ್ಯಾಕ್‌ನಿಂದ ಎಸ್‌ಯುವಿವರೆಗೆ ಹಲವು ಮಾದರಿಯ ಕಾರುಗಳನ್ನು ಪರಿಚಯಿಸಿದೆ. ಈ ಪ್ರಸಿದ್ಧ ಕಂಪನಿಯು ಸೆಡಾನ್ ಕಾರನ್ನು ಕೂಡ ಪರಿಚಯಿಸಿದ್ದು ಇದಕ್ಕೆ ಟಾಟಾ ಟಿಗೋರ್ ಹೆಸರಿಡಲಾಗಿದೆ. ವಿಶೇಷವೆಂದರೆ ಈ ಸೆಡಾನ್ ಸಿಎನ್‌ಜಿ ಆಯ್ಕೆಯಲ್ಲೂ ಲಭ್ಯವಿದೆ. 


COMMERCIAL BREAK
SCROLL TO CONTINUE READING

ಟಾಟಾ ಟಿಗೋರ್  ಸಿಎನ್‌ಜಿ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ (86PS/113Nm) ಪಡೆಯುತ್ತದೆ.   ಕಂಪನಿಯ ಪ್ರಕಾರ, ಈ ಕಾರ್ ಸಿ‌ಎನ್‌ಜಿ ಕಿಟ್‌ನೊಂದಿಗೆ 73PS ಮತ್ತು 95Nm ಅನ್ನು ಉತ್ಪಾದಿಸುತ್ತದೆ. ಇದರ  ಉನ್ನತ ರೂಪಾಂತರವು ಸ್ವಯಂಚಾಲಿತ ಹೆಡ್‌ಲೈಟ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು, ಕೀಲೆಸ್ ಎಂಟ್ರಿ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.  ಮುಖ್ಯವಾದ ವಿಷಯವೆಂದರೆ ಟಾಟಾ ಮೋಟಾರ್ಸ್  ಕಂಪನಿಯ ಈ ಕಾರನ್ನು ಕೇವಲ 86,000 ರೂ.ಗೆ  ಮನೆಗೆ ಕೊಂಡೊಯ್ಯಬಹುದಾಗಿದೆ. ಅದು ಹೇಗೆ ಸಾಧ್ಯ, ಇದರ ವೈಶಿಷ್ಟ್ಯಗಳೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ- Car Loan ಕೊಳ್ಳುವಾಗ ನೆನಪಿರಲಿ 20-10-4 ಸೂತ್ರ


ಟಾಟಾ ಟಿಗೊರ್ ಸಿಎನ್‌ಜಿ ಬೆಲೆ: 
ಪ್ರಸ್ತುತ ಭಾರತದಲ್ಲಿ ಟಾಟಾ ಟಿಗೊರ್ ಸಿಎನ್‌ಜಿ ಮೂರು ರೂಪಾಂತರಗಳಲ್ಲಿ XM, XZ, XZ+ ಲಭ್ಯವಿದೆ. ಇದರ ಎಕ್ಸ್ ಶೋ ರೂಂ ಬೆಲೆ 7.60 ಲಕ್ಷದಿಂದ 8.90 ಲಕ್ಷ ರೂ.ಗಳವರೆಗೆ ಇರಲಿದೆ. ಒಂದೊಮ್ಮೆ ನೀವು ಈ ಕಾರ್ ಅನ್ನು ಲೋನ್‌ನಲ್ಲಿ ಖರೀದಿಸಲು ಬಯಸಿದರೆ, 86 ಸಾವಿರ ರೂಪಾಯಿಗಳನ್ನು ಪಾವತಿಸಿ ಈ ಕಾರನ್ನು ಕೊಳ್ಳಬಹುದಾಗಿದೆ. ಇದರ ಇಎಂಐ ಲೆಕ್ಕಾಚಾರದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ. 


ಟಾಟಾ ಟಿಗೋರ್ ಸಿಎನ್‌ಜಿ ಇಎಂಐ ಕ್ಯಾಲ್ಕುಲೇಟರ್: 
ಟಾಟಾ ಟಿಗೋರ್ ಸಿಎನ್‌ಜಿ ಕಾರಿನ ಮೂಲ ರೂಪಾಂತರದ ಆನ್-ರೋಡ್ ಬೆಲೆ 8.56 ಲಕ್ಷರೂ.ಗಳು. ಈ ಕಾರನ್ನು ನೀವು ಲೋನ್ ಮುಖಾಂತರ ಖರೀದಿಸಲಿದ್ದೀರಿ ಎಂದು ಭಾವಿಸೋಣ. ವಿವಿಧ ಬ್ಯಾಂಕ್‌ಗಳಲ್ಲಿ ಬಡ್ಡಿದರವು ವಿಭಿನ್ನವಾಗಿರುತ್ತದೆ ಮತ್ತು ಸಾಲದ ಅವಧಿಯನ್ನು 1 ರಿಂದ 7 ವರ್ಷಗಳವರೆಗೆ ಆಯ್ಕೆ ಮಾಡಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಿಮ್ಮ ಆಯ್ಕೆಯ ಪ್ರಕಾರ ನೀವು ಹೆಚ್ಚಿನ ಡೌನ್ ಪೇಮೆಂಟ್ ಅನ್ನು ನೀಡಬಹುದು


ಇದನ್ನೂ ಓದಿ- Tata Nano Solar Car: ಕೇವಲ 30 ರೂ.ಗಳಲ್ಲಿ ನೀಡುತ್ತೇ 100ಕಿ.ಮೀ. ಮೈಲೇಜ್


ಉದಾಹರಣೆಗೆ ನೀವು ಈ ಕಾರನ್ನು 10% ಡೌನ್ ಪೆಮೆಂಟ್ (86,000),  ಬಡ್ಡಿ ದರ 10% ನೊಂದಿಗೆ ಐದು ವರ್ಷಗಳ ಸಾಲದ ಅವಧಿಯಲ್ಲಿ ಖರೀದಿಸುತ್ತೀರಿ ಎಂದು ಭಾವಿಸೋಣ. ಆದ ನೀವು ಪ್ರತಿ ತಿಂಗಳು 16,363 ರೂಪಾಯಿಗಳ ಇಎಂಐ ಅನ್ನು ಪಾವತಿಸಬೇಕಾಗುತ್ತದೆ. ಅರ್ಥಾತ್, ನೀವು ಒಟ್ಟು ಸಾಲದ ಮೊತ್ತಕ್ಕೆ (ರೂ. 7.70 ಲಕ್ಷ) 2.11 ಲಕ್ಷ ರೂ. ಹೆಚ್ಚುವರಿ ಹಣವನ್ನು ಪಾವಟಿಸುತ್ತೀರಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.