ಇವೇ ನೋಡಿ ಅತಿ ಹೆಚ್ಚು ಮೈಲೇಜ್ ನೀಡುವ ಜನಪ್ರಿಯ ಎಸ್‌ಯುವಿ ಕಾರುಗಳು

Highest Mileage SUV: ಪ್ರಸ್ತುತ ಎಸ್‌ಯುವಿ ಕಾರ್ ಬಗ್ಗೆ ಜನರಲ್ಲಿ ಒಲವು ಹೆಚ್ಚುತ್ತಿದೆ. ಆದರೆ, ಎಸ್‌ಯುವಿ ಕಾರುಗಳು ಹೆಚ್ಚು ಮೈಲೇಜ್ ನೀಡುವುದಿಲ್ಲ ಎಂಬ ಕಾರಣಕ್ಕೆ ಕೆಲವರು ಹಿಂದೇಟು ಹಾಕುತ್ತಾರೆ. ನೀವೂ ಎಸ್‌ಯುವಿ ಕಾರುಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ ಇಲ್ಲಿವೆ ಅತ್ಯಧಿಕ ಮೈಲೇಜ್ ನೀಡಬಲ್ಲ ಆರು ಜನಪ್ರಿಯ ಎಸ್‌ಯುವಿ  ಕಾರುಗಳು. 

Written by - Yashaswini V | Last Updated : Mar 16, 2023, 09:23 AM IST
  • ಭಾರತದಲ್ಲಿ ಹಲವು ಎಸ್‌ಯುವಿ ಕಾರುಗಳು ಲಭ್ಯವಿವೆ.
  • ಆದಾಗ್ಯೂ, ಮೈಲೇಜ್ ಬಗೆಗಿನ ಕಾಳಜಿಯಿಂದಾಗಿ ಕೆಲವರು ಎಸ್‌ಯುವಿ ಕಾರ್ ಕೊಳ್ಳಲು ಹಿಂದೇಟು ಹಾಕುತ್ತಾರೆ.
  • ಅತ್ಯಧಿಕ ಮೈಲೇಜ್ ನೀಡುವ ಟಾಪ್ 6 ಎಸ್‌ಯುವಿ ಕಾರುಗಳು ಯಾವುವು ಎಂದು ತಿಳಿಯೋಣ...
ಇವೇ ನೋಡಿ ಅತಿ ಹೆಚ್ಚು ಮೈಲೇಜ್ ನೀಡುವ ಜನಪ್ರಿಯ ಎಸ್‌ಯುವಿ ಕಾರುಗಳು  title=
Highest Mileage SUV

Highest Mileage SUV: ಇತ್ತೀಚಿನ ದಿನಗಳಲ್ಲಿ ಕಣ್ಣು ಕುಕ್ಕುವ ಹಲವು ಎಸ್‌ಯುವಿ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.  ಎಸ್‌ಯುವಿ ಕಾರ್ ಬಗ್ಗೆ ಜನರಲ್ಲಿ ಒಲವು ಹೆಚ್ಚುತ್ತಿದೆ ಆದರೂ ಮೈಲೇಜ್ ಬಗೆಗಿನ ಕಾಳಜಿಯಿಂದಾಗಿ ಕೆಲವರು ಎಸ್‌ಯುವಿ ಕಾರ್ ಕೊಳ್ಳಲು ಹಿಂದೇಟು ಹಾಕುತ್ತಾರೆ. ಇದನ್ನು ಮನಗಂಡಿರುವ ಕಾರ್ ತಯಾರಕಾ ಕಂಪನಿಗಳು ಇದೀಗ ಉತ್ತಮ ಮಲೇಜ್ ನೀಡಬಲ್ಲ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ನೀವೂ ಸಹ ಎಸ್‌ಯುವಿ ಕಾರುಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ ಅತ್ಯಧಿಕ ಮೈಲೇಜ್ ನೀಡಬಲ್ಲ ಆರು ಜನಪ್ರಿಯ ಎಸ್‌ಯುವಿ  ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಅತ್ಯಧಿಕ ಮೈಲೇಜ್ ನೀಡುವ ಟಾಪ್ 6 ಎಸ್‌ಯುವಿ ಕಾರುಗಳು:
ಭಾರತದಲ್ಲಿ ಹಲವು ಎಸ್‌ಯುವಿ ಕಾರುಗಳು ಲಭ್ಯವಿವೆ. ಆದರೂ,  ಅತ್ಯಧಿಕ ಮೈಲೇಜ್ ನೀಡುವ ಟಾಪ್ 6 ಎಸ್‌ಯುವಿ ಕಾರುಗಳು ಯಾವುವೆಂದರೆ...
* ಮಾರುತಿ ಸುಜುಕಿಯ ಗ್ರಾಂಡ್ ವಿಟಾರಾ:
ಮಾರುತಿ ಸುಜುಕಿಯ ತನ್ನ ಗ್ರಾಂಡ್ ವಿಟಾರಾ ಎಸ್‌ಯುವಿ  ಒಂದು ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 27.97 ಕಿ.ಮೀ ವರೆಗೆ  ಮೈಲೇಜ್ ನೀಡಬಲ್ಲದು ಎಂದು ಹೇಳಿಕೊಂಡಿದೆ. 

* ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್:
ಟೊಯೋಟಾದ ಅರ್ಬನ್ ಕ್ರೂಸರ್ ಹೈರೈಡರ್ ಸಹ ಒಂದು ಲೀಟರ್ ಪೆಟ್ರೋಲ್ ನಲ್ಲಿ 27.97 ಕಿ.ಮೀ ವರೆಗೆ  ಮೈಲೇಜ್ ನೀಡುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ- 65 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ ಹೋಂಡಾದ ಈ ಬೈಕ್

* ಕಿಯಾ ಸೋನೆಟ್:
ಕಿಯಾ ಸೋನೆಟ್ 24.2 ಕಿ,.ಮೀ/ ಪಿಎಲ್  ವರೆಗೆ ಮೈಲೇಜ್ ನೀಡುತ್ತದೆ.

* ಹುಂಡೈ ವೆನ್ಯೂ ಎಸ್‌ಯುವಿ:
ಹುಂಡೈ ಕಂಪನಿ ವೆನ್ಯೂ ಎಸ್‌ಯುವಿ ಸಹ 23.4KMPL ವರೆಗೆ ಮೈಲೇಜ್ ನೀಡಬಲ್ಲದು ಎಂದು ಕಂಪನಿ ತಿಳಿಸಿದೆ. 

ಇದನ್ನೂ ಓದಿ- ಇಲ್ಲಿ Creta ಬೆಲೆಯಲ್ಲಿ ಮನೆಗೆ ತನ್ನಿ ಟೊಯೊಟಾ ಫಾರ್ಚುನರ್

* ಟಾಟಾ ನೆಕ್ಸಾನ್:
ದೇಶದ ಅತಿ ಬೇಡಿಕೆಯ ಎಸ್‌ಯುವಿ ಆಗಿರುವ ಟಾಟಾ ನೆಕ್ಸಾನ್ ಸಹ ಒಂದು ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 21.5ಕಿ.ಮೀ. ವರೆಗೆ ಮೈಲೇಜ್ ನೀಡಬಲ್ಲದು.

* ಮಾರುತಿ ಬ್ರೆಝಾ:
ದೇಶದ ಅತಿ ಹೆಚ್ಚು ಜನರ ಆಕರ್ಷಕ ಕಾರ್ ಆಗಿರುವ ಮಾರುತಿ ಬ್ರೆಝಾ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಬರುತ್ತದೆ. ಈ ಕಾರ್ 20.15KMPL ವರೆಗೆ ಮೈಲೇಜ್ ನೀಡುತ್ತದೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News