Maruti Ertigaಗೆ ಟಕ್ಕರ್ ನೀಡಲು ರೋಡಿಗಿಳಿಯುತ್ತಿವೆ ಮೂರು ಹೊಸ 7 ಸೀಟರ್ ! ಬೆಲೆ ಮತ್ತು ವೈಶಿಷ್ಟ್ಯ ಕೂಡಾ ಸೂಪರ್

Maruti Ertiga Rivals- Upcoming MPVs: ಇದೀಗ ಮುಂಬರುವ ದಿನಗಳಲ್ಲಿ ಮೂರು ಹೊಸ MPV ಬಿಡುಗಡೆಯಾಗಲಿದೆ.  ಇವುಗಳು ಕೂಡಾ ಎರ್ಟಿಗಾದೊಂದಿಗೆ ಸ್ಪರ್ಧೆಗೆ ಇಳಿಯಲಿವೆ.  

Written by - Ranjitha R K | Last Updated : Mar 16, 2023, 03:01 PM IST
  • ಮಾರುತಿ ಸುಜುಕಿ ಎರ್ಟಿಗಾ MPV ವಿಭಾಗದಲ್ಲಿ ತನ್ನ ಛಾಪು ಮೂಡಿಸಿದೆ.
  • ಕಿಯಾ ಕ್ಯಾರೆನ್ಸ್ ಕೂಡಾ ಈ ವಿಭಾಗದಲ್ಲಿ ಹೆಸರು ಮಾಡುತ್ತಿದೆ.
  • ಇದು ಎರ್ಟಿಗಾಗೆ ಭಾರೀ ಟಕ್ಕರ್ ನೀಡುತ್ತಿದೆ.
Maruti Ertigaಗೆ ಟಕ್ಕರ್ ನೀಡಲು ರೋಡಿಗಿಳಿಯುತ್ತಿವೆ  ಮೂರು ಹೊಸ 7 ಸೀಟರ್ ! ಬೆಲೆ ಮತ್ತು ವೈಶಿಷ್ಟ್ಯ ಕೂಡಾ ಸೂಪರ್  title=

Maruti Ertiga Rivals- Upcoming MPVs :  ಮುಂಬರುವ MPVಗಳು : ಮಾರುತಿ ಸುಜುಕಿ ಎರ್ಟಿಗಾ MPV ವಿಭಾಗದಲ್ಲಿ ತನ್ನ ಛಾಪು ಮೂಡಿಸಿದೆ. ಸದ್ಯ ಇದರ ಹೊರತಾಗಿ ಕಿಯಾ ಕ್ಯಾರೆನ್ಸ್ ಕೂಡಾ ಈ ವಿಭಾಗದಲ್ಲಿ ಹೆಸರು ಮಾಡುತ್ತಿದೆ. ಈ ಕಾರಿಗೂ ಗ್ರಾಹಕರಿಂದ ಜನರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಇದು ಎರ್ಟಿಗಾಗೆ ಭಾರೀ ಟಕ್ಕರ್ ನೀಡುತ್ತಿದೆ. ಇದೀಗ ಮುಂಬರುವ ದಿನಗಳಲ್ಲಿ ಮೂರು ಹೊಸ MPV ಬಿಡುಗಡೆಯಾಗಲಿದೆ.  ಇವುಗಳು ಕೂಡಾ ಎರ್ಟಿಗಾದೊಂದಿಗೆ ಸ್ಪರ್ಧೆಗೆ ಇಳಿಯಲಿವೆ. 

CITROEN 7-SEATER MPV :
ಮಾಧ್ಯಮ ವರದಿಗಳ ಪ್ರಕಾರ, Citroen ಹೊಸ ತ್ರಿ ರೋ ಮಾದರಿಯ ಕಾರಿನ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದು C3 ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ. ಕಾರು ತಯಾರಕ ಸಂಸ್ಥೆ ತನ್ನ 5-ಸೀಟರ್ ಆವೃತ್ತಿಯನ್ನು ಕಿಉದಾ ಬಿಡುಗಡೆ ಮಾಡಲಿದೆ. ಇದು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಬಿಡುಗಡೆಯಾಗಲಿದೆ. ಹೊಸ ಸಿಟ್ರೊಯೆನ್ 7-ಸೀಟರ್ MPV ಅನ್ನು C3 ಏರ್‌ಕ್ರಾಸ್ ಎಂದು ಹೆಸರಿಸಬಹುದು ಎನ್ನಲಾಗಿದೆ.  ಇದರ ಮೂಲ ರೂಪಾಂತರವು ಮಾರುತಿ ಎರ್ಟಿಗಾಗೆ ಪ್ರತಿಸ್ಪರ್ಧಿಯಾಗಲಿದೆ. ಇದು 1.2-ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆ ಯಾಗುವ ಸಾಧ್ಯತೆಯಿದೆ. 

ಇದನ್ನೂ ಓದಿ : ಇವೇ ನೋಡಿ ಅತಿ ಹೆಚ್ಚು ಮೈಲೇಜ್ ನೀಡುವ ಜನಪ್ರಿಯ ಎಸ್‌ಯುವಿ ಕಾರುಗಳು

ನಿಸ್ಸಾನ್ 7-ಸೀಟರ್ MPV :
ನಿಸ್ಸಾನ್ ಇಂಡಿಯಾ ಮುಂಬರುವ ವರ್ಷಗಳಲ್ಲಿ 2 ಹೊಸ SUV ಮತ್ತು ಒಂದು ಹೊಸ MPV ಮತ್ತು ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಕೆಲ ಸಮಯದ ಹಿಂದೆಯೇ ಕಂಪನಿ ಈ ಬಗ್ಗೆ ಘೋಷಣೆ ಮಾಡಿತ್ತು. ಇದು ಹೊರ ತರುತ್ತಿರುವ ಹೊಸ 7 ಸೀಟರ್  MPV ರೆನಾಲ್ಟ್‌ನ 7- ಸೀಟರ್ ಟ್ರೈಬರ್ ಅನ್ನು ಆಧರಿಸಿರಬಹುದು. 1.0L 3-ಸಿಲಿಂಡರ್ NA ಪೆಟ್ರೋಲ್ ಮತ್ತು 1.0L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಈ ಕಾರು ಬಿಡುಗಡೆಯಾಗಬಹುದು ಎನ್ನಲಾಗಿದೆ.  

TOYOTA RUMION :
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ 2021 ರಲ್ಲಿ ಭಾರತದಲ್ಲಿ 'Rumion' ನಾಮಫಲಕವನ್ನು ಟ್ರೇಡ್‌ಮಾರ್ಕ್ ಮಾಡಿತ್ತು. ಆದಾಗ್ಯೂ, ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲ. 2023ರಲ್ಲಿ ಈ ಕಾರು ಯಾವಾಗ ಬೇಕಾದರೂ ಬಿಡುಗಡೆಯಾಗಬಹುದು ಎನ್ನಲಾಗಿದೆ. ಇದು ಮಾರುತಿ ಎರ್ಟಿಗಾದರಿ -ಬ್ಯಾಡ್ಜ್ ಆವೃತ್ತಿಯಾಗಿರಬಹುದು. ಇದರ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳಿರಲಿವೆ. ಟೊಯೊಟಾ ರುಮಿಯಾನ್ MPV ವಿಭಿನ್ನವಾಗಿ ವಿನ್ಯಾಸಗೊಳಿಸಲಾದ ಫ್ರಂಟ್ ಗ್ರಿಲ್, ಹೆಡ್‌ಲ್ಯಾಂಪ್‌ಗಳು ಮತ್ತು  ರಿವರ್ಸ್ದ್ ರಿಯರ್ ಸೆಕ್ಷನ್ ನೊಂದಿಗೆ ಬರಲಿದೆ. ಇದು ಎರ್ಟಿಗಾದಂತೆಯೇ 1.5-ಲೀಟರ್, 4-ಸಿಲಿಂಡರ್ K15C ಡ್ಯುಯಲ್ಜೆಟ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. 

ಇದನ್ನೂ ಓದಿ : Textationship ಬಗ್ಗೆ ನಿಮಗೆಷ್ಟು ಗೊತ್ತು? ಬನ್ನಿ ತಿಳಿದುಕೊಳ್ಳೋಣ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News