Car Loan ಕೊಳ್ಳುವಾಗ ನೆನಪಿರಲಿ 20-10-4 ಸೂತ್ರ

Car Loan Tips: ಕನಸಿನ ಕಾರ್ ಕೊಳ್ಳುವ ಕನಸು ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ, ಎಲ್ಲರಿಗೂ ಸಹ ದುಬಾರಿ ಬೆಲೆ ಕೊಟ್ಟು ಕಾರ್ ಕೊಳ್ಳುವ ಶಕ್ತಿ ಇರುವುದಿಲ್ಲ. ಹಾಗಾಗಿಯೇ, ಕಾರ್ ಕೊಳ್ಳಲು ಕೆಲವರು ಲೋನ್ ಮೊರೆಹೋಗುತ್ತಾರೆ. ಕಾರ್ ಲೋನ್ ಪಡೆದು ಕನಸಿನ ಕಾರ್ ಖರೀದಿಸುವುದು ತಪ್ಪೇನಲ್ಲ. ಆದರೆ, ಕಾರ್ ಲೋನ್ ಕೊಳ್ಳುವಾಗ 20-10-4 ಸೂತ್ರವನ್ನು ಎಂದಿಗೂ ಮರೆಯಬೇಡಿ. 

Written by - Yashaswini V | Last Updated : Mar 17, 2023, 01:26 PM IST
  • ನೀವು ಕಾರ್ ಲೋನ್ ಕೊಳ್ಳುವಾಗ 20-10-4 ಕಾರ್ ಲೋನ್ ಫಾರ್ಮುಲಾವನ್ನು ಅನುಸರಿಸಿದರೆ, ಸಾಲವು ಸುಲಭವಾಗಿ ಮರುಪಾವತಿಯಾಗುತ್ತದೆ.
  • ಮಾತ್ರವಲ್ಲ, ಕಾರ್ ಲೋನ್ ನಿಂದಾಗಿ ನಿಮ್ಮ ಮಾಸಿಕ ವೆಚ್ಚವೂ ಹೊರೆಯಾಗುವುದಿಲ್ಲ.
  • ಯಾವುದೀ ಸೂತ್ರ, ಕಾರ್ ಲೋನ್ ಪಡೆಯುವಾಗ ಈ ಸೂತ್ರವನ್ನು ಅನುಸರಿಸುವುದರಿಂದ ಏನು ಪ್ರಯೋಜನ ಎಂದು ತಿಳಿಯಿರಿ.
Car Loan ಕೊಳ್ಳುವಾಗ ನೆನಪಿರಲಿ 20-10-4 ಸೂತ್ರ title=
Car Loan Formula

Car Loan Formula: ದೂರದ ಊರುಗಳಿಗೆ ಆರಾಮದಾಯಕವಾಗಿ ಪ್ರಯಾಣಿಸಲು ಮತ್ತು ಸಮಯ ಉಳಿತಾಯದ ದೃಷ್ಟಿಯಿಂದ ಕಾರ್ ಕೊಳ್ಳುವುದು ಹೆಚ್ಚು ಸೂಕ್ತ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಆದರೆ, ಈ ದುಬಾರಿ ದುನಿಯಾದಲ್ಲಿ ಎಲ್ಲರಿಗೂ ಸಹ ಕಾರ್ ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಹಾಗಂತ ಅದು ಅಸಾಧ್ಯವೂ ಅಲ್ಲ.

ಪ್ರಸ್ತುತ, ದೇಶಾದ್ಯಂತ ಹಲವು ಬ್ಯಾಂಕ್ಗಳು ಕನಸಿನ ಕಾರ್ ಕೊಳ್ಳಲು ಹಣಕಾಸಿನ ಸಹಾಯವನ್ನು ನೀಡುತ್ತವೆ. ನೀವು ಕೆಲವು ದಾಖಲೆಗಳನ್ನು ಒದಗಿಸುವ ಮೂಲಕ ಸುಲಭವಾಗಿ ಕಾರ್ ಲೋನ್ ಪಡೆಯಬಹುದು. ಆದರೆ, ನೀವು ಕಾರ್ ಲೋನ್ ಪಡೆಯುವಾಗ ಒಂದು ಸೂತ್ರವನ್ನು ಅನುಸರಿಸಿದರೆ ಭವಿಷ್ಯದಲ್ಲಿ ಹಣಕಾಸಿನ ಮುಗ್ಗಟ್ಟಿನ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಪ್ಪಿಸಬಹುದಾಗಿದೆ. ಅದುವೇ 20-10-4 ಸೂತ್ರ. ಯಾವುದೀ ಸೂತ್ರ, ಕಾರ್ ಲೋನ್ ಪಡೆಯುವಾಗ ಈ ಸೂತ್ರವನ್ನು ಅನುಸರಿಸುವುದರಿಂದ ಏನು ಪ್ರಯೋಜನ ಎಂದು ತಿಳಿಯಿರಿ.  

ಇದನ್ನೂ ಓದಿ- Maruti Ertigaಗೆ ಟಕ್ಕರ್ ನೀಡಲು ರೋಡಿಗಿಳಿಯುತ್ತಿವೆ ಮೂರು ಹೊಸ 7 ಸೀಟರ್ ! ಬೆಲೆ ಮತ್ತು ವೈಶಿಷ್ಟ್ಯ ಕೂಡಾ ಸೂಪರ್

ಏನಿದು 20-10-4 ಕಾರ್ ಲೋನ್ ಫಾರ್ಮುಲಾ?
ಆರ್ಥಿಕ ತಜ್ಞರ ಪ್ರಕಾರ, ಕಾರ್ ಲೋನ್ ತೆಗೆದುಕೊಳ್ಳುವಾಗ 20-10-4 ಫಾರ್ಮುಲಾ ಅನುಸರಿಸುವುದು ತುಂಬಾ ಉಪಯುಕ್ತವಾಗಿದೆ. 20-10-4 ಸೂತ್ರದಲ್ಲಿ 
* 20 ಎಂದರೆ ಡೌನ್ ಪೇಮೆಂಟ್ ವಾಹನದ ಆನ್-ರೋಡ್ ಬೆಲೆಯ ಕನಿಷ್ಠ 20% ಆಗಿರಬೇಕು ಮತ್ತು ಉಳಿದ ಮೊತ್ತವು ಸಾಲವಾಗಿರುತ್ತದೆ. 
* 10 ಎಂದರೆ ಸಾಲದ ಇಎಂಐ ನಿಮ್ಮ ಮಾಸಿಕ ಆದಾಯದ 10% ಗಿಂತ ಕಡಿಮೆ ಇರಬಾರದು. 
* 4 ಎಂದರೆ ನಿಮ್ಮ ಕಾರ್ ಲೋನ್ ಸಾಲದ ಅವಧಿ ಗರಿಷ್ಠ ನಾಲ್ಕು ವರ್ಷಗಳನ್ನು ಮೀರಬಾರದು. 

ಸುಲಭವಾಗಿ ಹೇಳುವುದಾದರೆ 20-10-4 ಸೂತ್ರದಲ್ಲಿ ಕಾರ್ ಲೋನ್ ತೆಗೆದುಕೊಳ್ಳುವಾಗ 20 ಎಂದರೆ - 20% ಡೌನ್ ಪೇಮೆಂಟ್ (ಆನ್-ರೋಡ್ ಬೆಲೆಯ), 10 ಎಂದರೆ - ಮಾಸಿಕ ಆದಾಯದ 10% ನ EMI ಮತ್ತು 4 ಎಂದರೆ - ನಾಲ್ಕು ವರ್ಷಗಳ ಸಾಲದ ಅವಧಿಯನ್ನು ಇದು ಸೂಚಿಸುತ್ತದೆ. 

ಇದನ್ನೂ ಓದಿ- ಇವೇ ನೋಡಿ ಅತಿ ಹೆಚ್ಚು ಮೈಲೇಜ್ ನೀಡುವ ಜನಪ್ರಿಯ ಎಸ್‌ಯುವಿ ಕಾರುಗಳು

ನೀವು ಕಾರ್ ಲೋನ್ ಕೊಳ್ಳುವಾಗ 20-10-4 ಕಾರ್ ಲೋನ್ ಫಾರ್ಮುಲಾವನ್ನು ಅನುಸರಿಸಿದರೆ, ಸಾಲವು ಸುಲಭವಾಗಿ ಮರುಪಾವತಿಯಾಗುತ್ತದೆ. ಮಾತ್ರವಲ್ಲ, ಕಾರ್ ಲೋನ್ ನಿಂದಾಗಿ ನಿಮ್ಮ ಮಾಸಿಕ ವೆಚ್ಚವೂ ಹೊರೆಯಾಗುವುದಿಲ್ಲ. ನಿಮಗೆ ಸಾಧ್ಯವಾದರೆ, ಕಾರ್ ಖರೀದಿಸುವಾಗ ಡೌನ್ ಪೇಮೆಂಟ್ ಅನ್ನು ಹೆಚ್ಚು ಮಾಡಿದರೆ ನಿಮ್ಮ ಮಾಸಿಕ ಇಎಂಐ ಹೊರೆಯೂ ಕಡಿಮೆ ಆಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News