ನವದೆಹಲಿ: ಬ್ರಾಡ್ ಬ್ಯಾಂಡ್ ಹೆಸರಿನಲ್ಲಿ ಟೆಲಿಕಾಂ ಕಂಪನಿಗಳು ಜನರಿಗೆ ನೀಡುತ್ತಿರುವ ವೇಗ ಪರಿಗಣಿಸಿದರೆ ಅದನ್ನು ಯಾರು ಬ್ರಾಡ್ ಬ್ಯಾಂಡ್ ಎಂದು ಕರೆಯಲು ಸಾಧ್ಯವಿಲ್ಲ. ಹೀಗಂತ ಈ ಉದ್ಯಮದ ಥಿಂಕ್ ಟ್ಯಾಂಕ್ ಕಂಪನಿ Broadband India Forum (BIF) ಟೆಲಿಕಾಂ ಕಂಪನಿಗಳ ಮೇಲೆ ಸವಾಲೆತ್ತಿದೆ. ಅಷ್ಟೇ ಅಲ್ಲ BIF ಬ್ರಾಡ್ ಬ್ಯಾಂಡ್ ಸ್ಪೀಡ್ ಕುರಿತಂತೆ ಇರುವ ಪರಿಭಾಷೆಯನ್ನು ಕೂಡ ಬದಲಾಯಿಸುವ ಅವಶ್ಯಕತೆ ಇದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಭಾರತದಲ್ಲಿ 11-ಅಂಕಿಯ ಮೊಬೈಲ್ ನಂಬರ್ ಬಳಸಲು TRAI ಶಿಫಾರಸು...!


2MBPS ವೇಗವನ್ನು ಬ್ರಾಡ್ ಬ್ಯಾಂಡ್ ವೇಗ ಎಂದು ಪರಿಗಣಿಸಬೇಕು
ಪ್ರಸ್ತುತ ಇರುವ ಬ್ರಾಡ್ ಬ್ಯಾಂಡ್ ಸ್ಪೀಡ್ 512 KBPS ಅನ್ನು ಬದಲಿಸಿ 2 MBPSಗೆ ನಿಗದಿಪಡಿಸುವ ಆವಶ್ಯಕತೆ ಇದ್ದು, 512 KBPS ವೇಗ ತೀರಾ ಕಡಿಮೆ ವೇಗವಾಗಿದೆ ಎಂದು BIF ಹೇಳಿದೆ. ಕಳೆದ ಒಂದು ವರ್ಷದಲ್ಲಿ ಕಮ್ಯೂನಿಕೆಶನ್ ಟೆಕ್ನಾಲಾಜಿ ತುಂಬಾ ವೇಗವಾಗಿ ಬದಲಾಗಿದ್ದು, ಇಡೀ ದೇಶದಲ್ಲಿ ಡೇಟಾ ಸರ್ವಿಸೆಸ್ ನ ಒಂದು ನೂತನ ಮಾರುಕಟ್ಟೆಯೇ ತಲೆ ಎತ್ತಿದೆ. ಹಲವು ಮಾಡರ್ನ್ ಇಂಟರ್ನೆಟ್ ಅಪ್ಪ್ಲಿಕೆಶನ್ ಗಳು ಹಾಗೂ ಪ್ರಸ್ತುತ ಬಳಕೆ ನೋಡುತ್ತಿದ್ದರೆ, ಇದೀಗ ಮತ್ತಷ್ಟು ವೇಗದ ಅವಶ್ಯಕತೆ ಇದೆ ಎಂದು BIF ಹೇಳಿದೆ.


ಇದನ್ನು ಓದಿ- Pharma Secretary ಪಿ. ಡಿ ವಾಘೇಲಾ TRAI ನ ನೂತನ ಅಧ್ಯಕ್ಷರಾಗಿ ನೇಮಕ


ಟೆಲಿಕಾಂ ನಿಯಂತ್ರಣ ಪ್ರಾಧಿಕಾರ TRAI ಗೆ ನೀಡಿದ ಸಲಹೆಯಲ್ಲಿ, 'ಬ್ರಾಡ್‌ಬ್ಯಾಂಡ್‌ನ ಪ್ರಸ್ತುತ ವ್ಯಾಖ್ಯಾನವು, ತಂತ್ರಜ್ಞಾನ ಅಭಿವೃದ್ಧಿಯ ಅಗತ್ಯತೆಗಳನ್ನು ಅಥವಾ ಭಾರತೀಯ ಗ್ರಾಹಕರ ಹೆಚ್ಚಿನ ಬ್ರಾಡ್‌ಬ್ಯಾಂಡ್ ವೇಗವನ್ನು ಪೂರೈಸುವುದಿಲ್ಲ ಎಂಬುದು ನಮ್ಮ ನಂಬಿಕೆಯಾಗಿದೆ, ಅದನ್ನು ಮತ್ತೆ ಪರಿಶೀಲಿಸುವ ಮತ್ತು ವ್ಯಾಖ್ಯಾನಿಸುವ ಅವಶ್ಯಕತೆ ಇದೆ ಎಂದು BIF ಹೇಳಿದೆ.


ಕಂಪನಿಗಳಿಂದ ಸಲಹೆಗಳನ್ನು ಕೇಳಿದ TRAI
ಬಿಐಎಫ್‌ನ ಈ ಸಲಹೆಗಳ ಮೇರೆಗೆ, TRAI ಡಿಸಕ್ಷನ್ ಪೇಪರ್ ಜಾರಿಗೊಳಿಸಿದ್ದು,  ಇದರಲ್ಲಿ ಕಂಪನಿಗಳು ಸೇರಿದಂತೆ ಈ ವಲಯಕ್ಕೆ ಸಂಬಂಧಿಸಿದ ಮಧ್ಯಸ್ಥಗಾರರಿಂದ ಅವರ ಸಲಹೆಗಳನ್ನು ಕೋರಿದೆ. 'ಬ್ರಾಡ್‌ಬ್ಯಾಂಡ್‌ನ ಪ್ರಸ್ತುತ ವ್ಯಾಖ್ಯಾನವನ್ನು ಪರಿಶೀಲಿಸಬೇಕೇ, ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಪರಿಶೀಲಿಸುವ ಅಗತ್ಯವಿದೆಯೇ' ಎಂದು ಅವರನ್ನು ಕೇಳಲಾಗಿದೆ. ಬ್ರಾಡ್ಬ್ಯಾಂಡ್ ವ್ಯಾಖ್ಯಾನದ ದೃಷ್ಟಿಯಿಂದ ಪ್ರಸ್ತುತ 512 ಕೆಬಿಪಿಎಸ್ ವೇಗವು ತುಂಬಾ ಕಡಿಮೆಯಾಗಿದೆ ಎಂದು ಬಿಐಎಫ್ ಅಧ್ಯಕ್ಷ ಟಿ.ವಿ.ರಾಮಚಂದ್ರನ್ ಹೇಳಿದ್ದಾರೆ.  ದೀರ್ಘಕಾಲದಿಂದ ಇದನ್ನು 2 ಎಮ್‌ಬಿಪಿಎಸ್‌ಗೆ ಅಪ್‌ಗ್ರೇಡ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜಾಗತಿಕ ಮಾನದಂಡವನ್ನು ಹೊರತುಪಡಿಸಿ, ಇದು ರಾಷ್ಟ್ರೀಯ ನೀತಿ ನಿಯಮಗಳ ಪ್ರಕಾರ 2 Mbps ಆಗಿರಬೇಕು ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ- ಇನ್ಮುಂದೆ ನಿಮ್ಮ ನೆಚ್ಚಿನ ಚಾನಲ್‌ಗಳನ್ನು ಆಯ್ಕೆ ಮಾಡುವುದು ಇನ್ನೂ ಸುಲಭ


4G ಹೆಸರಿನಲ್ಲಿ....
ಬಿಐಎಫ್ ಪ್ರಕಾರ, 4 ಜಿ ಆಗಮನದ ಹೊರತಾಗಿಯೂ, ಭಾರತದಲ್ಲಿ ಬ್ರಾಡ್‌ಬ್ಯಾಂಡ್ ವೇಗವು ವಿಶ್ವದ ಇಂಟರ್ನೆಟ್ ವೇಗಕ್ಕೆ ಹೋಲಿಸಿದರೆ  ಅರ್ಧಕ್ಕಿಂತ ಕಡಿಮೆಯಿದೆ. 'ಬ್ರಾಡ್‌ಬ್ಯಾಂಡ್ ಸಂಪರ್ಕ' ಎಂದು ಕರೆಯಲು ನೆಟ್‌ವರ್ಕ್ ಮಧ್ಯಮ ಅಥವಾ ತಂತ್ರಜ್ಞಾನವನ್ನು ಲೆಕ್ಕಿಸದೆ 2Mbps ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಒದಗಿಸಬೇಕು ಎಂದು BIF TRAI ಗೆ ಸೂಚಿಸಿದೆ.