Pharma Secretary ಪಿ. ಡಿ ವಾಘೇಲಾ TRAI ನ ನೂತನ ಅಧ್ಯಕ್ಷರಾಗಿ ನೇಮಕ

ಕ್ಯಾಬಿನೆಟ್ ನೇಮಕ ಸಮಿತಿ (ACC) ಸೋಮವಾರ ಪಿ.ಡಿ. ವಾಘೇಲಾ ಅವರನ್ನು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI)ದ ನೂತನ ಅಧ್ಯಕ್ಷರನ್ನಾಗಿ ನೇಮಿಸಿದೆ.

Last Updated : Sep 28, 2020, 11:39 PM IST
  • ಪಿ.ಡಿ. ವಾಘೇಲಾ TRAIನ ನೂತನ ಅಧ್ಯಕ್ಷರಾಗಿ ನೇಮಕ.
  • ಸೋಮವಾರ ಈ ಕುರಿತು ಆದೇಶ ಹೊರಡಿಸಿದ ಕ್ಯಾಬಿನೆಟ್ ನೇಮಕ ಸಮಿತಿ (ACC).
  • ಮುಂದಿನ ಮೂರು ವರ್ಷದ ಅವಧಿಗೆ ಅವರು ಈ ಹುದ್ದೆಯಲ್ಲಿರಲಿದ್ದಾರೆ.
Pharma Secretary ಪಿ. ಡಿ ವಾಘೇಲಾ TRAI ನ ನೂತನ ಅಧ್ಯಕ್ಷರಾಗಿ ನೇಮಕ title=

ನವದೆಹಲಿ: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ (TRAI)ನ ನೂತನ ಅಧ್ಯಕ್ಷರ ಆಯ್ಕೆಯನ್ನು ಇಂದು ಮಾಡಲಾಗಿದೆ. ಫಾರ್ಮಾ ಸೆಕ್ರೆಟರಿ ಪಿ.ಡಿ. ವಾಘೇಲಾ TRAIನ ನೂತನ ಅಧ್ಯಕ್ಷರಾಗಲಿದ್ದಾರೆ. ಈ ಕುರಿತು ಆದೇಶ ಕೂಡ ಜಾರಿಗೊಳಿಸಲಾಗಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಅಂದರೆ ವಘೇಲಾ ಅವರು ತಮ್ಮ 65ನೆ ವಯಸ್ಸಿನ ವರೆಗೆ ಈ ಹುದ್ದೆಯಲ್ಲಿ ಇರಲಿದ್ದಾರೆ. ಅವರು ಹಾಲಿ ಚೇರ್ಮನ್ ಆಗಿರುವ ಆರ್. ಎಸ್ ಶರ್ಮಾ ಅವರ ಸ್ಥಾನ ತುಂಬಲಿದ್ದಾರೆ. ಕ್ಯಾಬಿನೆಟ್ ನೇಮಕ ಸಮಿತಿ (ACC) ಸೋಮವಾರ ಪಿ.ಡಿ. ವಾಘೇಲಾ ಅವರನ್ನು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI)ದ ನೂತನ ಅಧ್ಯಕ್ಷರನ್ನಾಗಿ ನೇಮಿಸಿದೆ.

ಇದನ್ನು ಓದಿ- ಭಾರತದಲ್ಲಿ 11-ಅಂಕಿಯ ಮೊಬೈಲ್ ನಂಬರ್ ಬಳಸಲು TRAI ಶಿಫಾರಸು...!

ಗುಜರಾತ್ ಕೆಡೆರ್ ನ ವಘೇಲಾ ಅಕ್ಟೋಬರ್ 1 ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ವಘೇಲಾ ಪ್ರಸ್ತುತ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಬರುವ ಔಷಧದ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿ ಅವರು ಸೆಪ್ಟೆಂಬರ್ 30ರವರೆಗೆ ಒಂದು ವರ್ಷದ ಅವಧಿಗಾಗಿ ನೇಮಕಗೊಂಡಿದ್ದರು.

ಔಷಧಿ ಲಾಖೆಯ ಮೊದಲು, ವಘೇಲಾ ಗುಜರಾತ್‌ನಲ್ಲಿ ವಾಣಿಜ್ಯ ತೆರಿಗೆ ಆಯುಕ್ತರಾಗಿದ್ದರು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯ 2017 ರ ರೋಲ್ ಔಟ್ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಸಿದ್ಧ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು.

ಇದನ್ನು ಓದಿ- Telecom ಕ್ಷೇತ್ರದಲ್ಲಿ ಮತ್ತೊಂದು ಬಿರುಗಾಳಿ ಎಬ್ಬಿಸಲು ಸಿದ್ಧತೆ ನಡೆಸಿದ Reliance Jio!

ಆರ್ಥಿಕತೆಯಲ್ಲಿ ಟೆಲಿಕಾಂ  ಕ್ಷೇತ್ರದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು TRAI ಅಧ್ಯಕ್ಷರ ಪಾತ್ರ ಬಹಳ ಪ್ರಮುಖವಾಗಿದೆ. ಆರ್ಎಸ್ ಶರ್ಮಾ ಅವರಿಗೆ ಟ್ರಾಯ್ ಅಧ್ಯಕ್ಷರಾಗಿ ಸೆಪ್ಟೆಂಬರ್ 30 ರವರೆಗೆ ಎರಡು ವರ್ಷಗಳ ವಿಸ್ತರಣೆ ನೀಡಲಾಗಿತ್ತು.

Trending News