ನವದೆಹಲಿ : ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ ಎನ್ ಎಲ್ (BSNL) ಈಗ ತನ್ನ ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತಿದೆ. ಬಿಎಸ್ ಎನ್ ಎಲ್ ರಿಚಾರ್ಜ್ (Recharge) ಮಾಡಿದರೆ ಒಂದು ಸಿಮ್ ಉಚಿತವಾಗಿ ಸಿಗಲಿದೆ. ಈ ಫ್ರೀ ಸಿಮ್ ಹೇಗೆ ಸಿಗುತ್ತದೆ ಎಂಬುದನ್ನು ಫಟಾಫಟ್ ನೋಡೋಣ.


COMMERCIAL BREAK
SCROLL TO CONTINUE READING

ಹೇಗೆ ಸಿಗುತ್ತೆ ಫ್ರೀ ಸಿಮ್..!
ಬಿಎಸ್ ಎನ್ ಎಲ್ ತನ್ನ ಗ್ರಾಹಕರಿಗೆ ಉಚಿತ ಸಿಮ್ ಕಾರ್ಡ್ (Free SIM) ನೀಡಲಿದೆ.  75 ರೂಪಾಯಿಯ ರಿಚಾರ್ಜ್ ಪ್ಲಾನ್ (Recharge plan), ಲ್ಯಾಂಡ್ ಲೈನ್ ಮತ್ತು ಬ್ರಾಡ್ ಬ್ಯಾಂಡ್ ಕನೆಕ್ಷನ್ ಮಾಡಿದರೆ, ನಿಮಗೆ ಒಂದು ಸಿಮ್ ಫ್ರೀಯಾಗಿ ಸಿಗಲಿದೆ. ಇದಕ್ಕಾಗಿ ನಿಮಗೆ ಬಿಎಸ್ಎ ನ್ಎಲ್ ಕಾರ್ಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ. ಕೇರಳ (Kerala) ಮತ್ತು ತಮಿಳುನಾಡು ಸರ್ಕಲಿನಲ್ಲಿ ಈ ಪ್ಲಾನ್ ಜಾರಿಯಲ್ಲಿದೆ. 


ಇದನ್ನೂ ಓದಿ : ಭಾರೀ ರಿಯಾಯಿತಿ ದರದಲ್ಲಿ ಸಿಗುತ್ತಿದೆ Apple iPhone..!


ಲಾಭ ಏನು..?
BSNL  ರಿಚಾರ್ಜ್ ಕೂಪನ್ನಿನಲ್ಲಿ ನೂರು ನಿಮಿಷ ಫ್ರೀ ಕಾಲಿಂಗ್ (Free Calling) ಹಾಗೂ 2GB Data ಕೂಡಾ ಸಿಗಲಿದೆ 


ಸರ್ಕಾರಿ ನೌಕರರಿಗೆ ಮತ್ತಷ್ಟು ರಿಯಾಯಿತಿ:
ಸರ್ಕಾರಿ ನೌಕರರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ (PSU)ನೌಕರರಿಗೆ ಬಿಎಸ್ ಎನ್ ಎಲ್ ಇನ್ನಷ್ಟು ರಿಯಾಯಿತಿ ಘೋಷಿಸಿದೆ. ಈ ವಲಯದ ನೌಕರರಿಗೆ ಈ ಸ್ಕೀಮಿನಲ್ಲಿ (Scheme) ಹೆಚ್ಚುವರಿಯಾಗಿ ಶೇ. ಹತ್ತರಷ್ಟು ರಿಯಾಯಿತಿ ಸಿಗಲಿದೆ.


ಇದನ್ನೂ ಓದಿ : Facebookನಿಂದ TikTok ರೀತಿಯ ಆಪ್ ಬಿಡುಗಡೆ, ವೈಶಿಷ್ಟ್ಯ ಏನು ಗೊತ್ತಾ?


ಪಡೆಯಬಹುದು 1.5 ತಿಂಗಳ ಸೇವೆ:
ಬಿಎಸ್‌ಎನ್‌ಎಲ್ ತನ್ನ ಬ್ರಾಡ್‌ಬ್ಯಾಂಡ್ (Broad band) ಸಂಪರ್ಕವನ್ನು ಜನಪ್ರಿಯಗೊಳಿಸಲು ವಿಶೇಷ ಯೋಜನೆಯನ್ನು ಸಹ ಪ್ರಾರಂಭಿಸಿದೆ. 777 ಮತ್ತು 1277 ರೂಗಳ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ 10.5 ತಿಂಗಳ ಮುಂಗಡ ಪಾವತಿಗೆ 1.5 ತಿಂಗಳ ಉಚಿತ ಸೇವೆ ಸಿಗಲಿದೆ ಎಂದು ಕಂಪನಿ ಹೇಳಿದೆ.


ಈ ಯೋಜನೆಯ ಲಾಭವನ್ನು ನಿಗದಿತ ಸಮಯದೊಳಗೆ ಮಾತ್ರ ಪಡೆದುಕೊಳ್ಳಬಹುದು. ಈ ಉಚಿತ ಯೋಜನೆಯ ಲಾಭವನ್ನು ಮಾರ್ಚ್ 31 ರವರೆಗೆ ಮಾತ್ರ ಪಡೆಯಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.