ಭಾರೀ ರಿಯಾಯಿತಿ ದರದಲ್ಲಿ ಸಿಗುತ್ತಿದೆ Apple iPhone..!

ಇ-ಕಾಮರ್ಸ್ ಸೈಟ್ ಫ್ಲಿಪ್ ಕಾರ್ಟ್ ಆಪಲ್ ನ ಐಫೋನ್ ಗಳ  ಮೇಲೆ ಭಾರೀ  ರಿಯಾಯಿತಿ ನೀಡುತ್ತಿದೆ. Apple iPhone SEಯಲ್ಲಿ 7,901 ರೂ.ಗಳ ವಿಶೇಷ ರಿಯಾಯಿತಿ ಕೂಡಾ ನೀಡಲಾಗುತ್ತಿದೆ.

Written by - Ranjitha R K | Last Updated : Mar 1, 2021, 06:24 PM IST
  • Apple iPhone ಗಳ ಮೇಲೆ ಭಾರೀ ರಿಯಾಯಿತಿ
  • 899 ರೂ ಗಳ ಮಾಸಿಕ ಕಂತುಗಳಲ್ಲಿ iPhone 6
  • iPhone 11 Pro ಮೇಲೆ 26 ಸಾವಿರ ರೂಗಳ ರಿಯಾಯಿತಿ
ಭಾರೀ ರಿಯಾಯಿತಿ ದರದಲ್ಲಿ ಸಿಗುತ್ತಿದೆ Apple iPhone..! title=
Apple iPhone ಗಳ ಮೇಲೆ ಭಾರೀ ರಿಯಾಯಿತಿ (file photo)

ನವದೆಹಲಿ : ಐ ಪೋನ್ ಖರೀದಿಸಬೇಕು ಎನ್ನುವುದು ಪ್ರತಿಯೊಬ್ಬನ ಬಯಕೆಯಾಗಿರುತ್ತದೆ. ಆದರೆ ಐಫೋನ್ ಸ್ವಲ್ಪ ದುಬಾರಿಯಾಗಿರುವ ಕಾರಣ, ಹೆಚ್ಚಿನವರು ಖರೀದಿಸುವ ಗೋಜಿಗೇ ಹೋಗುವುದಿಲ್ಲ. ಆದರೆ ರಿಯಾಯಿತಿ ದರದಲ್ಲಿ ಐಫೋನ್ ಸಿಕ್ಕಿದರೆ ಖರೀದಿಸದೆ ಇರಲು ಸಾಧ್ಯವೇ ?  ಹೌದು, ಇ-ಕಾಮರ್ಸ್ ಸೈಟ್ ಫ್ಲಿಪ್ ಕಾರ್ಟ್ (Flipcart) ಆಪಲ್ ನ ಐಫೋನ್ ಗಳ (Apple iPhone) ಮೇಲೆ ಭಾರೀ  ರಿಯಾಯಿತಿ ನೀಡುತ್ತಿದೆ. 

899 ರೂ ಗಳ ಮಾಸಿಕ ಕಂತುಗಳಲ್ಲಿ iPhone 6 :
ನೀವು Apple iPhone 6 ನ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ ಬ್ಯಾಂಕ್ ಆಫ್ ಬರೋಡಾ (Bank of Baroda)ಕೂಡಾ, ವಿಶೇಷ ಶೇಕಡಾ 10 ರಷ್ಟು ರಿಯಾಯಿತಿ ನೀಡುತ್ತಿದೆ. ಇದಲ್ಲದೆ, ತಿಂಗಳಿಗೆ 899ರೂ ಗಳನ್ನು ಪಾವತಿಸಿ ಕಂತುಗಳಲ್ಲಿಯೂ ಪೋನ್ ಖರೀಸಬಹುದು.  

ಇದನ್ನೂ ಓದಿ : Facebookನಿಂದ TikTok ರೀತಿಯ ಆಪ್ ಬಿಡುಗಡೆ, ವೈಶಿಷ್ಟ್ಯ ಏನು ಗೊತ್ತಾ?

iPhone SEಯಲ್ಲಿ 7,901ರೂ.ಗಳ ರಿಯಾಯಿತಿ : 
Apple iPhone SEಯಲ್ಲಿ 7,901 ರೂ.ಗಳ ವಿಶೇಷ ರಿಯಾಯಿತಿ (Discount) ಕೂಡಾ ನೀಡಲಾಗುತ್ತಿದೆ. ಇನ್ನು ನಿಮ್ಮ ಬಳಿ ಬ್ಯಾಂಕ್ ಆಫ್ ಬರೋಡಾ ಕಾರ್ಡ್‌ಗಳಿದ್ದರೆ ಹೆಚ್ಚುವರಿ ಶೇಕಡಾ 10 ರಷ್ಟು ರಿಯಾಯಿತಿ ಸಿಗಲಿದೆ. 

iPhone 11 Pro ಮೇಲೆ 26 ಸಾವಿರ ರೂಗಳ  ರಿಯಾಯಿತಿ:
ಇನ್ನು,  iPhone 11 Pro ಮೇಲೆ 26 ಸಾವಿರ ರೂಗಳ  ರಿಯಾಯಿತಿ ಸಿಗುತ್ತಿದೆ. ಅಲ್ಲದೆ,  16,500ರೂ ಗಳ ಎಕ್ಸ್ ಚೇಂಜ್ (exchange)ಆಫರ್ ಕೂಡಾ ಇರಲಿದೆ. 

iPhone 12 Miniಯಲ್ಲೂ ಸಿಗಲಿದೆ ಆಫರ್ : 
ಇ-ಕಾಮರ್ಸ್ iPhone 12 Miniಯಲ್ಲಿಯೂ ಉತ್ತಮ ವ್ಯವಹಾರಗಳನ್ನು ಪಡೆಯುತ್ತಿದೆ. ಕೇವಲ 11,650 ರೂ. ಮಾಸಿಕ ಕಂತುಗಳಲ್ಲಿ ಐಫೋನ್ 12 ಮಿನಿಯನ್ನು ಖರೀದಿಸಬಹುದು.  ಇದಲ್ಲದೆ HDFC ಕಾರ್ಡ್‌ಗಳಲ್ಲಿ 6000 ರೂ.ಗಳ ತ್ವರಿತ ರಿಯಾಯಿತಿ ಇದೆ. ಐಫೋನ್ 12 ರಂತೆ, ಐಫೋನ್ 12 Miniಯಲ್ಲೂ 16,500 ರೂಗಳ ಎಕ್ಸ್ಚೇಂಜ್ ಆಫರ್ ಇರಲಿದೆ. 

ಇದನ್ನೂ ಓದಿ : WhatsApp ವಿಶಿಷ್ಟ features ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News