Kisan Maan Dhan Yojana: ರೈತರಿಗೆ ಈ ಯೋಜನೆ ಮೂಲಕ ತಿಂಗಳಿಗೆ ₹ 3 ಸಾವಿರ ಪಿಂಚಣಿ ಸೌಲಭ್ಯ..!

ವಯಸ್ಸಿನ ಆಧಾರದ ಮೇಲೆ ರೈತರಿಗೆ ಪಿಂಚಣಿ ಸಿಗುತ್ತದೆ. ಈ ಯೋಜನೆ ಪಡೆದ ರೈತರಿಗೆ 60 ವರ್ಷದ ನಂತ್ರ ಮಾಸಿಕ 3000 ರೂಪಾಯಿ ಅಥವಾ ವಾರ್ಷಿಕ 36000 ರೂಪಾಯಿ ಸಿಗುತ್ತದೆ.

Last Updated : Jan 13, 2021, 03:00 PM IST
  • ರೈತರಿಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಕೂಡ ಒಂದು. ಸರ್ಕಾರಿ ನೌಕರರಿಗೆ ಸಿಗುವಂತೆ ರೈತರಿಗೆ ಪ್ರತಿ ತಿಂಗಳು ಈ ಯೋಜನೆಯಡಿ ಪಿಂಚಣಿ ಸಿಗುತ್ತದೆ.
  • ಕಿಸಾನ್ ಮಾನ್ ಧನ್ ಯೋಜನೆಯಡಿ 60 ವರ್ಷ ನಂತ್ರ ಪಿಂಚಣಿ ಸೌಲಭ್ಯ ಸಿಗಲಿದೆ. 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆ ಲಾಭ ಪಡೆಯಬಹುದು. ಇದನ್ನು ಎಲ್‌ಐಸಿ ನಿರ್ವಹಿಸುತ್ತದೆ.
  • ವಯಸ್ಸಿನ ಆಧಾರದ ಮೇಲೆ ರೈತರಿಗೆ ಪಿಂಚಣಿ ಸಿಗುತ್ತದೆ. ಈ ಯೋಜನೆ ಪಡೆದ ರೈತರಿಗೆ 60 ವರ್ಷದ ನಂತ್ರ ಮಾಸಿಕ 3000 ರೂಪಾಯಿ ಅಥವಾ ವಾರ್ಷಿಕ 36000 ರೂಪಾಯಿ ಸಿಗುತ್ತದೆ.
Kisan Maan Dhan Yojana: ರೈತರಿಗೆ ಈ ಯೋಜನೆ ಮೂಲಕ ತಿಂಗಳಿಗೆ ₹ 3 ಸಾವಿರ ಪಿಂಚಣಿ ಸೌಲಭ್ಯ..! title=

ನವದೆಹಲಿ: ರೈತರಿಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಕೂಡ ಒಂದು. ಸರ್ಕಾರಿ ನೌಕರರಿಗೆ ಸಿಗುವಂತೆ ರೈತರಿಗೆ ಪ್ರತಿ ತಿಂಗಳು ಈ ಯೋಜನೆಯಡಿ ಪಿಂಚಣಿ ಸಿಗುತ್ತದೆ.

ಕಿಸಾನ್ ಮಾನ್ ಧನ್ ಯೋಜನೆಯಡಿ 60 ವರ್ಷ ನಂತ್ರ ಪಿಂಚಣಿ(Pension) ಸೌಲಭ್ಯ ಸಿಗಲಿದೆ. 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆ ಲಾಭ ಪಡೆಯಬಹುದು. ಇದನ್ನು ಎಲ್‌ಐಸಿ ನಿರ್ವಹಿಸುತ್ತದೆ.

Ramesh Jarkiholi: ಮಾರ್ಚ್- ಏಪ್ರಿಲ್‌ನಲ್ಲಿ ಮತ್ತೆ ಸಂಪುಟ ಪುನಃರಚನೆ: ಹೊಸಬಾಂಬ್ ಸಿಡಿಸಿದ ಜಾರಕಿಹೊಳಿ‌

ವಯಸ್ಸಿನ ಆಧಾರದ ಮೇಲೆ ರೈತರಿಗೆ ಪಿಂಚಣಿ ಸಿಗುತ್ತದೆ. ಈ ಯೋಜನೆ ಪಡೆದ ರೈತರಿಗೆ 60 ವರ್ಷದ ನಂತ್ರ ಮಾಸಿಕ 3000 ರೂಪಾಯಿ ಅಥವಾ ವಾರ್ಷಿಕ 36000 ರೂಪಾಯಿ ಸಿಗುತ್ತದೆ. ಈವರೆಗೆ 21 ಲಕ್ಷಕ್ಕೂ ಹೆಚ್ಚು ರೈತರು ಈ ಯೋಜನೆಗೆ ಹೆಸರು ನೋಂದಾಯಿಸಿದ್ದಾರೆ. ಇದ್ರ ಲಾಭವನ್ನು ಯಾವುದೇ ರೈತರು ಪಡೆಯಬಹುದು.

BJP: ಸಿಎಂ ಬಿಎಸ್ ವೈಗೆ ಸಂಕಟ: ಬಿಜೆಪಿ ಪಕ್ಷದೊಳಗೆ ಅಸಮಾಧಾನ ಸ್ಪೋಟ!

2 ಹೆಕ್ಟೇರ್ ಭೂಮಿ ಹೊಂದಿದ ರೈತ ಇದ್ರಲ್ಲಿ ಹೆಸರು ನೋಂದಾಯಿಸಬಹುದು. ರೈತ ಪ್ರತಿ ತಿಂಗಳು 55 ರೂಪಾಯಿಯಿಂದ 200 ರೂಪಾಯಿವರೆಗೆ ಠೇವಣಿ ಇಡಬೇಕಾಗುತ್ತದೆ. ಈ ಯೋಜನೆಯಲ್ಲಿ ಸರ್ಕಾರ ನೀಡುವ ಕೊಡುಗೆ ಕೂಡ ಸಮನಾಗಿರುತ್ತದೆ. ಅಂದ್ರೆ 55 ರೂಪಾಯಿ ರೈತ ಪಾವತಿ ಮಾಡಿದಲ್ಲಿ ಸರ್ಕಾರ ಕೂಡ 55 ರೂಪಾಯಿ ಪಾವತಿಸುತ್ತದೆ. ಸಾಮಾನ್ಯ ಸೇವಾ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.

B.S.Yediyurappa: ಏಳು ಮಂದಿಗೆ ಮಂತ್ರಿ ಭಾಗ್ಯ: ನೂತನ ಸಚಿವರ ಹೆಸರು ಪ್ರಕಟಿಸಿದ ಸಿಎಂ ಬಿಎಸ್​ವೈ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News