ನವದೆಹಲಿ : Samsung Mega Monsoon Delights Sale:  ಇಂದು (ಜುಲೈ 20) ಸ್ಯಾಮ್‌ಸಂಗ್‌ನ ಮೆಗಾ ಮಾನ್ಸೂನ್ ಡಿಲೈಟ್ಸ್ ಮಾರಾಟದ ಕೊನೆಯ ದಿನ. ಇದರಲ್ಲಿ ಸ್ಯಾಮ್‌ಸಂಗ್‌ನ ಫೋನ್‌ಗಳು, ಟಿವಿಗಳು, ಫ್ರಿಡ್ಜ್‌ ಮತ್ತು ಎಸಿಗಳಂತಹ ಉತ್ಪನ್ನಗಳು ಬಹಳ ಅಗ್ಗವಾಗಿ ಲಭ್ಯವಿದೆ. ಇತ್ತೀಚೆಗೆ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 32 ಫೋನ್ ಮೇಲೆ ಈ ಸೇಲ್ ನಲ್ಲಿ ಉತ್ತಮ ಆಫರ್ ಸಿಗುತ್ತಿದೆ. ಸೇಲ್ ನಲ್ಲಿ ಈ ಫೋನ್ ಅನ್ನು ತುಂಬಾ ಅಗ್ಗವಾಗಿ ಖರೀದಿಸಬಹುದು. 


COMMERCIAL BREAK
SCROLL TO CONTINUE READING

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 32 ನ ವೈಶಿಷ್ಟ್ಯಗಳು:
Samsung Galaxy M32 32 6.4 ಇಂಚಿನ ಪೂರ್ಣ ಎಚ್‌ಡಿ + ಡಿಸ್ಪ್ಲೇ ಹೊಂದಿದೆ.  ಡಿಸ್ಪ್ಲೇ ರಿಫ್ರೆಶ್ ರೇಟ್  90 Hz ಆಗಿದೆ. 4 ಜಿಬಿ RAM + 64 ಜಿಬಿ ಸ್ಟೋರೇಜ್ ಮತ್ತು 6 ಜಿಬಿRAM ಮತ್ತು 128 ಜಿಬಿ ಸ್ಟೋರೇಜ್ ನೊಂದಿಗೆ ಈ ಫೋನ್ (Phone) ಅನ್ನು ಬಿಡುಗಡೆ ಮಾಡಲಾಗಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಅನ್ನು ಹೆಚ್ಚಿಸಬಹುದು. ಫೋನ್ ಅನ್ನು ಕಪ್ಪು ಮತ್ತು ತಿಳಿ ನೀಲಿ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ.


ಇದನ್ನೂ  ಓದಿ : App ಇಲ್ಲದೆಯೇ Ola ಅಥವಾ Uber ಕ್ಯಾಬ್ ಬುಕ್ ಮಾಡಲು ಇಲ್ಲಿದೆ ಸುಲಭ ಮಾರ್ಗ


ಬ್ಯಾಟರಿ :
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 32ನಲ್ಲಿ  6000 ಎಂಎಹೆಚ್ ಬ್ಯಾಟರಿಯನ್ನು ಒದಗಿಸಲಾಗಿದ್ದು, ಇದು 25 ಡಬ್ಲ್ಯೂ ಬೆಂಬಲದೊಂದಿಗೆ ಬರುತ್ತದೆ. ಫೋನ್‌ನಲ್ಲಿ 4G LTE, 3.5 ಎಂಎಂ ಹೆಡ್‌ಫೋನ್ ಜ್ಯಾಕ್ (headphone jack), ವೈ-ಫೈ ಮತ್ತು ಯುಎಸ್‌ಬಿ ಟೈಪ್-ಸಿ ಮುಂತಾದ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.


ಕ್ಯಾಮೆರಾ :
ಕ್ವಾಡ್ ರಿಯರ್ ಕ್ಯಾಮೆರಾವನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 32 ನಲ್ಲಿ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 64 ಮೆಗಾಪಿಕ್ಸೆಲ್‌ಗಳಾಗಿದ್ದು,ಸೆಕೆಂಡರಿ ಕ್ಯಾಮೆರಾ 8 ಮೆಗಾಪಿಕ್ಸೆಲ್‌ಗಳದ್ದಾಗಿದೆ. ಇತರ ಎರಡು ಕ್ಯಾಮೆರಾಗಳು 2-2 ಮೆಗಾಪಿಕ್ಸೆಲ್‌ಗಳಾಗಿವೆ. ಸೆಲ್ಫಿಗಾಗಿ 20 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.


ಇದನ್ನೂ  ಓದಿ : Xiaomiಯ 5G ಸ್ಮಾರ್ಟ್ ಫೋನ್ ಮೇಲೆ ಸಿಗುತ್ತಿದೆ ಬಂಪರ್ ಡಿಸ್ಕೌಂಟ್ ಜೊತೆಗೆ ಇಷ್ಟೆಲ್ಲಾ ಆಫರ್


ಬೆಲೆ ಎಷ್ಟು ?: 
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 32 ರ 4 ಜಿಬಿ RAM + 64 ಜಿಬಿ ಸ್ಟೋರೇಜ್  ರೂಪಾಂತರದ ಬೆಲೆ 14,999 ರೂ. ಕಂಪನಿಯು ತನ್ನ 6 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ರೂಪಾಂತರಕ್ಕೆ 16,999 ರೂ. ನಿಗದಿಪಡಿಸಿದೆ. ಈ ಫೋನ್ ಅನ್ನು ಸೇಲ್‌ನಲ್ಲಿ ಖರೀದಿಸಿದರೆ, 1250 ರೂ.ಗಳ ರಿಯಾಯಿತಿ ಸಿಗುತ್ತದೆ.  ಐಸಿಐಸಿಐ ಬ್ಯಾಂಕ್ (ICICI bank) ಕಾರ್ಡ್‌ನೊಂದಿಗೆ ಫೋನ್ ಖರೀದಿಸಿದರೆ,  1250 ರೂ ಕ್ಯಾಶ್‌ಬ್ಯಾಕ್ (Cash back) ಸಿಗುತ್ತದೆ. ಅಲ್ಲದೆ, ನೀವು ಸ್ಯಾಮ್‌ಸಂಗ್ ಆನ್‌ಲೈನ್ ಸ್ಟೋರ್ ನಿಂದ  ಖರೀದಿಸಿದರೆ, 350 ರೂ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.