ನವದೆಹಲಿ : Samsung Galaxy A22: ಸ್ಯಾಮ್ಸಂಗ್ ಎ ಸೀರೀಜ್ ನ ರೇಂಜ್ ಅನ್ನು ಹೆಚ್ಚಿಸುವ ಮೂಲಕ ಸ್ಯಾಮ್ಸಂಗ್ ಗ್ಯಾಲಕ್ಸಿ ಎ 22 (Samsung Galaxy A22) ಅನ್ನು ಬಿಡುಗಡೆ ಮಾಡಿದೆ. ಕಂಪನಿಯು 6 GB RAM ಮತ್ತು 128 GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಸಿಂಗಲ್ ವೆರಿಯೇಂಟ್ ನಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಅನ್ನು ಆನ್ಲೈನ್ ಮತ್ತು ಆಫ್ಲೈನ್ ಎರಡೂ ವಿಧಾನಗಲ್ಲಿ ಖರೀದಿಸಬಹುದು. ಫೋನ್ ಬಿಡುಗಡೆ ಮಾಡುತ್ತಿದ್ದಂತೆ ಕಂಪನಿಯು ಇದರ ಮೇಲೆ ಭಾರೀ ಕೊಡುಗೆಗಳನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಫೋನ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ 22 ನ ವೈಶಿಷ್ಟ್ಯಗಳು :
ಸ್ಯಾಮ್ಸಂಗ್ ಗ್ಯಾಲಕ್ಸಿ ಎ 22 (Samsung Galaxy A22) 6.4 ಇಂಚಿನ ಎಚ್ಡಿ + ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದರ ಸ್ಕ್ರೀನ್ ರೆಸಲ್ಯೂಶನ್ 720x1,600 ಪಿಕ್ಸೆಲ್ಗಳು. ಫೋನ್ನಲ್ಲಿ 6 GB RAM ಇದೆ. ಫೋನ್ನಲ್ಲಿ 128 GB ಸ್ಟೋರೇಜ್ ಇದೆ . ಫೋನ್ನಲ್ಲಿ, ಕಂಪನಿಯು ಮೀಡಿಯಾಟೆಕ್ ಹೆಲಿಯೊ ಜಿ 80 ಚಿಪ್ಸೆಟ್ ಅನ್ನು ಪ್ರೊಸೆಸರ್ ಆಗಿ ನೀಡುತ್ತಿದೆ. ನೀವು ಮೊಬೈಲ್ ಸ್ಟೋರೇಜ್ ಅನ್ನು ಹೆಚ್ಚಿಸಬೇಕಾದರೆ, 1 ಜಿಬಿ ವರೆಗೆ ಮೈಕ್ರೊ ಎಸ್ಡಿ ಕಾರ್ಡ್ ಅನ್ನು ಬೆಂಬಲಿಸುತ್ತದೆ. ಫೋನ್ ನಲ್ಲಿ 5000mAh ಬ್ಯಾಟರಿ ನೀಡಲಾಗಿದೆ.
ಇದನ್ನೂ ಓದಿ : ಬೆರಳುಗಳಿಂದಲೇ ಚಾರ್ಜ್ ಆಗಲಿದೆ ಫೋನ್, ಬೆವರಿನಿಂದಲೇ ಉತ್ಪತ್ತಿಯಾಗುತ್ತದೆ ವಿದ್ಯುತ್
ಕ್ಯಾಮೆರಾ :
ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು Samsung Galaxy A22 ನಲ್ಲಿ ನೀಡಲಾಗಿದೆ. 48 ಮೆಗಾಪಿಕ್ಸೆಲ್ಗಳ ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೆ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ (Video call) 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಫೋನ್ನಲ್ಲಿ ನೀಡಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ 22 ಬೆಲೆ ಮತ್ತು ಕೊಡುಗೆಗಳು :
ಸ್ಯಾಮ್ಸಂಗ್ ಗ್ಯಾಲಕ್ಸಿ ಎ 22 ಬೆಲೆಯನ್ನು 18,499 ರೂ ಎಂದು ನಿಗದಿಪಡಿಸಲಾಗಿದೆ. ಕಂಪನಿಯ ವೆಬ್ಸೈಟ್ನಿಂದ (website) ಖರೀದಿಸುವುದಾದರೆ ಇದರ ಮೇಲೆ 1500 ರೂ.ಗಳ ರಿಯಾಯಿತಿ ಸಿಗಲಿದೆ. ರಿಯಾಯಿತಿ ಪಡೆಯಬೇಕಾದರೆ ಎಚ್ಡಿಎಫ್ಸಿ (HDFC) ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಬೇಕಾಗುತ್ತದೆ. ನೀವು ಈ ಫೋನ್ ಅನ್ನು ಫ್ಲಿಪ್ ಕಾರ್ಟ್ ನಲ್ಲಿಯೂ ಖರೀದಿಸಬಹುದು. ಅಲ್ಲಿಯೂ ಅನೇಕ ಆಫರ್ ಗಳನ್ನೂ ನೀಡಲಾಗಿದೆ.
ಇದನ್ನೂ ಓದಿ : WhatsApp- ನಿಮ್ಮ ಫೋನ್ ಕಳುವಾಗಿದೆಯೇ? ಈ ಟ್ರಿಕ್ನೊಂದಿಗೆ ನಿಮ್ಮ ವಾಟ್ಸಾಪ್ ಖಾತೆಯನ್ನು ರಕ್ಷಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.